ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನ : ಬಾಬಾ ಶ್ರೀ ಸೋಮರನಾಥ ಬಾಬಜಿ ಭೇಟಿ
ಹಿಮಾಲಯದಲ್ಲಿ ವಾಸಿಸುತ್ತಿರುವ ನಾಥ ಸಂಪ್ರದಾಯದ ಅವಧೂತ ಮಹಾಸಭಾದ ಬಾಬಾ ಶ್ರೀ ಸೋಮರನಾಥ ಬಾಬಜಿ ಇವರು ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಪೂರ್ವ ತಯಾರಿಯನ್ನು ನೋಡಿ ಈ ಮಹಾಕಾರ್ಯ ಆ ಶಿವನ ಪ್ರೇರಣೆ ಮತ್ತು ಅನುಗ್ರಹದಿಂದ ನೆರವೇರುತ್ತಿದೆ. ಶಿವನನ್ನು ಇಲ್ಲಿ ಭಜಿಸುವುದರಿಂದ ಈ ಪ್ರದೇಶ ಪಾವನ ತಾಣವಾಗಿ ಪರಿವರ್ತಿತವಾಗುತ್ತದೆ. ಅತಿರುದ್ರ ಮಹಾಯಾಗ ಯಶಸ್ವಿಯಾಗಲಿ, ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಈ ಮಹಾಯಾಗದಿಂದ ಭಕ್ತಜನಸ್ತೋಮದ ಜೀವನ ಧನ್ಯವಾಗಲಿ ಎಂದು ಆಶೀರ್ವದಿಸಿದರು. ಭಕ್ತಾದಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಈ ಅಪರೂಪದ ಅತಿ ರುದ್ರ ಮಹಾಯಾಗದಲ್ಲಿ ಭಾಗವಹಿಸಿ, ಧನ್ಯರಾಗುವರು ಎಂದು ಹರಸಿದರು.