ಶಿವಪಾಡಿಯಲ್ಲಿ ಬಾಲಶಿವ ವೇಷಭೂಷಣ ಸ್ಪರ್ಧೆ

ಅತಿರುದ್ರ ಮಹಾಯಾಗದ ಪ್ರಯುಕ್ತ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 12, 2023 ರಂದು ನಡೆದ ‘ಸಮರ್ಪಣ ದಿವಸ’ದ ಅಂಗವಾಗಿ ನಡೆದ ಬಾಲಶಿವ ವೇಷಭೂಷಣ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ 150ಕ್ಕೂ ಹೆಚ್ಚಿನ ಪುಟಾಣಿ ಬಾಲಶಿವ ವೇಷಭೂಷಣಧಾರಿಗಳು ಭಾಗವಹಿಸಿದ್ದರು. ಶಿವ ದೇವಸ್ಥಾನದ ಪ್ರಾಂಗಣವು ಬಾಲಶಿವರುಗಳಿಂದ ತುಂಬಿ ತುಳುಕಿ ಭಕ್ತ ಸಮೂಹ ಪುಳಕಿತಗೊಂಡಿತು.
