ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : “ಯಜ್ಞ ಒಂದು ಟೆಕ್ನಾಲಜಿ” ಡಾ. ತನ್ಮಯ್ ಗೋಸ್ವಾಮಿ ಉಪನ್ಯಾಸ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 25, 2023 ರ ಶನಿವಾರದಂದು ನಡೆದ ಅತಿರುದ್ರ ಮಹಾಯಾಗದ ನಾಲ್ಕನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಧಾರ್ಮಿಕ ಮುಖಂಡರು ಹಾಗೂ ಸಮಾಜ ಸೇವಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಭಾ ಕಾರ್ಯಕ್ರಮದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಉತ್ತರಾಖಂಡ ಮತ್ತು ಉತ್ತರಪ್ರದೇಶದ ಉಪಕುಲಪತಿಗಳು ಹಾಗೂ ಆಯುರ್ವೇದ ತಜ್ಞರಾದ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಯಾದ ಡಾ. ತನ್ಮಯ್ ಗೋಸ್ವಾಮಿ, ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಕುಂದಾಪುರದ ಗುತ್ತಿಗೆದಾರರಾದ ಕಾರ್ತಿಕ್ ಆರ್. ನಾಯಕ್, ಪರ್ಕಳದ ಉದ್ಯಮಿ ದಿಲೀಪ್ ರಾಜ್ ಹೆಗ್ಡೆ, ಸ್ವದೇಶಿ ಔಷಧಿ ಬಂಡಾರದ ಉದ್ಯಮಿಯಾದ ರಘು ಪ್ರಸಾದ್ ಪ್ರಭು, ಉಡುಪಿ ಸಮಾಜದ ಅಧ್ಯಕ್ಷರಾದ ಪ್ರಭಾಕರ್ ನಾಯಕ್, ಅತಿರುದ್ರ ಮಹಾಯಾಗ ಸಮಿತಿಯ ಸಂಚಾಲಕರಾದ ಡಾ. ನಾರಾಯಣ ಶೆಣೈ, ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಭಾರತೀಯ ಸಂಜಯ್ ಪ್ರಭು, ದೀಪಲಕ್ಷ್ಮಿ ಪ್ರಭು, ಲಕ್ಷ್ಮೀ ನಾಗೇಶ್ ಪ್ರಭು, ಪುಷ್ಪ ನಂದಾಕಿಶೋರ್ ಮತ್ತು ಅತಿರುದ್ರ ಮಹಾಯಾಗ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಂತರ ನಡೆದ ಧಾರ್ಮಿಕ ಉಪನ್ಯಾಸದಲ್ಲಿ ಡಾ. ತನ್ಮಯ್ ಗೋಸ್ವಾಮಿ ಅವರು, “ಸಮರ್ಪಿಸಿದ ದ್ರವ್ಯಗಳು ಶಕ್ತಿಯಾಗಿ ಬದಲಾಯಿಸೋದೇ ಯಜ್ಞ. ಯಜ್ಞ ಒಂದು ಟೆಕ್ನಾಲಜಿ. ಆಹಾರ ಸೇವನೆ ಮತ್ತು ಯಜ್ಞ ಒಂದೇ ಪ್ರಕ್ರಿಯೆಯನ್ನು ಹೊಂದಿದೆ. ನಾವು ಪ್ರತೀನಿತ್ಯ ಯಜ್ಞವನ್ನು ಮಾಡುತ್ತೇವೆ. ಯಜ್ಞ ಮಾಡುವಾಗ ನಿಸ್ವಾರ್ಥ ಭಾವದಿಂದ ಒಂದೊಂದು ವಿಶೇಷ ದ್ರವ್ಯಗಳನ್ನು ಸಮರ್ಪಣೆ ಮಾಡಬೇಕಿದೆ. ಆಗ ಸುತ್ತಲ ಪರಿಸರದಲ್ಲಿ ಸಕರಾತ್ಮಕ ಶಕ್ತಿ ಸೃಷ್ಟಿಯಾಗಿ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಆ ಸಕರಾತ್ಮಕ ಶಕ್ತಿಯೇ ಯಜ್ಞದ ಸ್ವರೂಪವಾಗಿದೆ” ಎಂದು ಯಜ್ಞದ ಮಹತ್ವವನ್ನು ಸ್ವಾರಸ್ಯವಾಗಿ ತಿಳಿಸಿದರು.
ಬಳಿಕ ಉದಯೋನ್ಮುಖ ಕಲಾವಿದರಾದ ಗಗನ್ ಗಾಂವ್ಕರ್, ಅನುರಾಧ ಭಟ್, ಸುನೀತಾ ಭಟ್ ಕೊಡುವಿಕೆಯಲ್ಲಿ “ಭಕ್ತಿ ಗಾನ ಸಿಂಚನ” ಮತ್ತು ನೃತ್ಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಅವರ ನೇತೃತ್ವದಲ್ಲಿ ರಾಷ್ಟ್ರದೇವೋಭವಃ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯ ಪ್ರಸ್ತುತ ಪಡಿಸುವ “ಪುಣ್ಯ ಭೂಮಿ ಭಾರತ”, ಆದರ್ಶ್ ಗೋಖಲೆ ಅವರ ನಿರೂಪಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.