ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ವೈಧಿಕರಿಗೆ ಸ್ವಾಗತ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ, ನಾಳೆ ಫೆಬ್ರವರಿ 22, 2023 ರ ಬುಧವಾರದಂದು ಪ್ರಾರಂಭಗೊಳ್ಳಲಿರುವ ಅತಿರುದ್ರ ಮಹಾಯಾಗಕ್ಕೆ 180 ವೈಧಿಕರು ಶ್ರೀ ಉಮಾಮಹೇಶ್ವರ ಸನ್ನಿಧಾನಕ್ಕೆ ಫೆಬ್ರವರಿ 21, 2023 ರ ಮಂಗಳವಾರದಂದು ಆಗಮಿಸಿದ್ದಾರೆ. ಅತಿರುದ್ರ ಮಹಾಯಾಗ ಸಮಿತಿ ಮತ್ತು ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನವರು, ಯಾಗಕ್ಕಾಗಿ ಆಗಮಿಸಿದ ಎಲ್ಲಾ ವೈಧಿಕರನು ಕರೆದುಕೊಂಡು ಶ್ರೀ ಉಮಾಮಹೇಶ್ವರ ಸನ್ನಿಧಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಯಾಗಮಂಟಪದಲ್ಲಿ ಎಲ್ಲಾ ವೈಧಿಕರನ್ನು ಕೂರಿಸಿಕೊಂಡು ಶೃಂಗೇರಿ ಮಠದ ಉಡುಪಿ ಪ್ರಾಂತ್ಯದ ಧರ್ಮಧಿಕಾರಿಗಳಾದ ವಾಗೇಶ ಶಾಸ್ತ್ರಿಹಾಗೂ ಪ್ರಧಾನ ಅರ್ಚಕರು ಸೇರಿ ಈ ಕಾರ್ಯಕ್ರಮದ ಉದ್ದೇಶ, ನೀತಿ – ನಿಯಮಗಳನ್ನು ಮನದಟ್ಟು ಮಾಡಿ, ಆತಿಥ್ಯದ ವ್ಯವಸ್ಥೆಗಳನ್ನು ತಿಳಿಸಿದರು. ಅತಿರುದ್ರ ಮಹಾಯಾಗ ಸಮಿತಿಯವರು ಆಗಮಿಸಿದ ವೈಧಿಕರನ್ನು ಹೃತ್ಪೂರ್ವಕ ಸ್ವಾಗತಿಸಿ, ಅತಿರುದ್ರ ಮಹಾಯಾಗವನ್ನು ಚೆನ್ನಾಗಿ ನೆರವೇರಿಸಲು ಕೇಳಿಕೊಂಡರು. ಈ ಸಂದರ್ಭದಲ್ಲಿ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.

