ಶಿವಪಾಡಿಯಲ್ಲಿ ಹೋಳಿ ಹುಣ್ಣಿಮೆಯ ರಂಗು : ಸೃಷ್ಟಿಯ ಮೂಲವಾದ ಶ್ರೀ ರುದ್ರನಿಗೆ ಪ್ರಥಮ ಸೇವೆ

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಹನ್ನೊಂದನೇ ದಿನವಾದ ಮಾರ್ಚ್ 04, 2023 ರ ಶನಿವಾರದಂದು, ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ನೆರವೇರಿತು. ಸಹಸ್ರಾರು ಭಕ್ತಾದಿಗಳು ಅತಿರುದ್ರ ಮಹಾಯಾಗಕ್ಕೆಂದು ಶ್ರೀ ಉಮಾಮಹೇಶ್ವರ ಸನ್ನಿಧಾನಕ್ಕೆ ಆಗಮಿಸುತ್ತಿದ್ದು, ಶಿವ ಭಕ್ತಿಯನ್ನು ಮೆರೆಯುತ್ತಿದ್ದಾರೆ.


ಈ ಸಂದರ್ಭದಲ್ಲಿಂದು ಹೋಳಿ ಹುಣ್ಣಿಮೆಯ ಪ್ರಯುಕ್ತ ಶಿವಪಾಡಿಯ ಸರಳೆಬೆಟ್ಟುವಿನ ನಾಯ್ಕ್ ಸಮುದಾಯದವರು, ಉಡುಪಿ ಜಿಲ್ಲೆಯ ಜನರು ಆಚರಿಸುವ ಜಾನಪದ ಹೋಳಿ ಕುಣಿತವನ್ನು ಶಿವಪಾಡಿಯ ಸನ್ನಿಧಿಯಲ್ಲಿ ಆರಂಭ ಮಾಡಿದರು. ಈ ಹೋಳಿ ಕುಣಿತ ತಂಡ ಕಣ್ಮನ ಸೆಳೆಯುವ ವಿಶೇಷವಾದ ವೇಷಭೂಷಣವನ್ನು ತೊಟ್ಟು ಶಿವಪಾಡಿಗೆ ಆಗಮಿಸಿ, ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಇವರು ಶಿವಪಾಡಿಯಲ್ಲಿ ಸಂಜೆ 3:30 ರಿಂದ ನಡೆಯಲಿರುವ ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮೀಗಳವರ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಲಿದ್ದಾರೆ. ನಾಳೆಯಿಂದ ಎಲ್ಲರ ಮನೆ ಮನೆಗೆ ತೆರಳಿ ಹೋಳಿ ಕುಣಿತವನ್ನು ಪ್ರದರ್ಶಿಸಲಿದ್ದಾರೆ.

Related Posts

Leave a Reply

Your email address will not be published.