ಕಡಬದಲ್ಲಿ ಶ್ರೀ ದುರ್ಗಾ ಜ್ಯುವೆಲ್ಲರ್ಸ್ ಶುಭಾರಂಭ

ಪಂಜ ರಸ್ತೆಯ ಕಡಬದ ಯೋಗಕ್ಷೇಮ ಸಂಕೀರ್ಣ ಸಿ.ಎ ಬ್ಯಾಂಕ್ ಬಿಲ್ಡಿಂಗ್‍ನಲ್ಲಿ ಶ್ರೀ ದುರ್ಗಾ ಜ್ಯುವೆಲ್ಲರ್ಸ್ ( ಗೋಲ್ಡ್ ಅಂಡ್ ಸಿಲ್ವರ್ ) ಶುಭಾರಂಭಗೊಂಡಿತು.

ಸಂಸ್ಥೆಯನ್ನು ಉದ್ಘಾಟಿಸಿ, ದೀಪ ಬೆಳಗಿಸಿದ ಕಡಬದ ಶಾಸ್ತ್ರಿ ಕ್ಲಿನಿಕ್ ವೈದ್ಯರಾದ ಡಾ. ಸಿಎ ಶಾಸ್ತ್ರಿ ಯವರು ದೇವರ ಕೃಪೆಯಿಂದ ಸಂಸ್ಥೆ ಇನ್ನಷ್ಟು ಅಭಿವೃದ್ಧಿಗೊಳ್ಳಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಮಾಲಕ ರಮೇಶ್ ಪಾದರೆ ಎಲ್ಲರ ಸಹಕಾರ ಕೋರಿದರು.

ಸಂಸ್ಥೆಯ ಮಾಲಕರ ಧರ್ಮಪತ್ನಿಯಾದ ಶ್ರುತಿ ಟಿ ಕೆ ಮಾತಾಡಿ ಬೆಳೆಯುತ್ತಿರುವ ಕಡಬದ ಮೆರುಗಿಗೆ ಹೊಂಬಣ್ಣವನ್ನು ಹಚ್ಚುವ ಪ್ರಯತ್ನದ ಭಾಗವಾಗಿ ಶ್ರೀ ದುರ್ಗಾ ಜುವೆಲ್ಲರ್ಸ್, ಗೋಲ್ಡ್ ಅಂಡ್ ಸಿಲ್ವರ್ ಎಂಬ ನೂತನ ಸಂಸ್ಥೆ ಯನ್ನು ಕಡಬ ಜನತೆಗೆ ಪ್ರಸ್ತುತ ಪಡಿಸು ತಿದ್ದೇವೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಹೊಚ್ಚ ಹೊಸ ಶೈಲಿಯ ಕಣ್ಮಣ ಸೆಳೆಯುವ ವಿವಿಧ ವಿನ್ಯಾಸಗಳ ಆಭರಣಗಳ ಸಂಗ್ರಹಣೆ ಹೊಂದಿರುವ ಈ ನೂತನ ಚಿನ್ನದ ಮಳಿಗೆಯನ್ನು ನೀವು ಕೈಚಾಚಿ ಸ್ವೀಕರಿಸುವಿರೆಂಬ ಭರವಸೆ ನಮಗಿದೆ. ನಿಮ್ಮ ಪ್ರೀತಿ ವಿಶ್ವಾಸ ಮತ್ತು ಸಂಪೂರ್ಣ ಬೆಂಬಲ ನಮಗಿರಬೇಕೆಂದು ಕೋರಿಕೊಳ್ಳುತ್ತಿದ್ದೇವೆ. ಗ್ರಾಹಕ ಸ್ನೇಹಿ ಯಾಗಿ ನಿಮ್ಮ ಆಭರಣಗಳ ಬೇಡಿಕೆಯನ್ನು ತೃಪ್ತಿದಾಯಕವಾಗಿ ನಾವು ಈಡೇರಿಸುತ್ತೇವೆ ಎಂಬ ಭರವಸೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ ಮತ್ತು ಪ್ರಾರಂಬೋತ್ಸವದ ವಿಶೇಷ ಆಫರ್ ಗಳು, ಪ್ರತೀ ಖರೀದಿ ಮೇಲೆ ಡ್ರಾ ಕೂಪನ್, ಮಾಸಿಕ ಕಂತುಗಳಲ್ಲಿ ಪಾಲ್ಗೊಳ್ಳಿ ಒಂದು ಕಂತು ಉಚಿತವಾಗಿ ಪಡೆಯಿರಿ, ಐವತ್ತು ಸಾವಿರ ಮೇಲ್ಪಟ್ಟು ಖರೀದಿಗೆ ಚಿನ್ನದ ನಾಣ್ಯ ಉಚಿತನೀಡಲಾಗುವುದು ಎಂದು ಎಲ್ಲರ ಸಹಕಾರ ಕೋರಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರ ಪತ್ನಿ ಶ್ರುತಿ ಟಿಕೆ ಮಾತೃಶ್ರೀ ವರಾದ ಲಲಿತಾ, ಆನಂದ ಪಾದೆರೆ, ಶ್ಯಾಮಲ, ದಿನಕರ ಪುತ್ರನ್ ಹೊಸಮಠ, ರುಕ್ಮಿಣಿ ಪಡ್ಪಿನಂಗಡಿ ಉಪಸ್ಥಿತರಿದ್ದರು.
ಸಂಸ್ಥೆ ಸಿಬ್ಬಂದಿಗಳಾದ ರಶ್ಮಿ, ಸಜಿತ್ ಉಪಸ್ಥಿತರಿದ್ದರು ಹೆಚ್ಚಿನ ಮಾಹಿತಿಗೆ ಮಾಲಕರು ರಮೇಶ್ ಪಾದರೆ 9901798046 ಸಂಪರ್ಕಿಸಿ.