ಕನಸಿನ ಟ್ರಾವೆಲಿಂಗ್ ಆರಂಭಿಸಿದ ಶಟರ್‌ಬಾಕ್ಸ್ ಫಿಲಮ್ಸ್ ತಂಡ: 60 ದಿನಗಳ ಡಿಸ್ಕವರಿ ನೋರ್ತ್ ಈಸ್ಟ್ ಟ್ರಾವೆಲಿಂಗ್

ಶಟರ್‌ಬಾಕ್ಸ್ ಫಿಲಮ್ಸ್‌ನ ಸಚಿನ್ ಶೆಟ್ಟಿ ಮತ್ತು ಅಭಿ ಶೆಟ್ಟಿ ಅವರು ತಮ್ಮ ಕನಸಿನ ಟ್ರಿಪ್ ಮೂಲಕ ದೇಶ ವಿದೇಶದ ಕಲೆ, ಕರಾವಳಿಯ ಸಂಸ್ಕೃತಿಯನ್ನು ಪಸರಿಸಲು ಮುಂದಾಗಿದ್ದು, ಈ ಬಾರಿ, ನೋರ್ತ್ ಈಸ್ಟ್ ಪ್ರವಾಸವನ್ನು ಕೈಗೊಂಡಿದ್ದಾರೆ.

ಈ ಬಾರಿ ಚೈನಾ, ಮಯನ್ಮಾರ್ ಮತ್ತು ಬಾಂಗ್ಲಾದೇಶದ ಗಡಿಪ್ರದೇಶಕ್ಕೆ ಜಿಮ್ಮಿ ವಾಹನದ ಮೂಲಕ ತೆರಳಲಿದ್ದು, ಅಲ್ಲಿನ ಕಲೆ, ಸಂಸ್ಕೃತಿ, ಆಹಾರ, ಇತ್ಯಾದಿ ವಿಚಾರಗಳನ್ನು ತಿಳಿಸುವ ಉದ್ದೇಶದಿಂದ ಹಾಗೂ ಕರಾವಳಿಯ ಸಂಸ್ಕೃತಿಯನ್ನು ಆ ದೇಶದ ಜನತೆಗೆ ತಿಳಿಸುವ ಉದ್ದೇಶದಿಂದ 60 ದಿನಗಳ ಟ್ರಾವೆಲಿಂಗ್ ಕನಸ್ಸನ್ನು ಹೊತ್ತು ಇಂದಿನಿಂದ ಟ್ರಾವೆಲಿಂಗ್ ಆರಂಭಿಸಿದ್ದಾರೆ.

ಮಂಗಳೂರಿನ ಎಂ.ಜಿ. ರಸ್ತೆಯ ಎಂಪಾಯರನ್ ಮಾಲ್‌ನ ಮುಂಭಾಗದಲ್ಲಿ ಟ್ರಾವೆಲಿಂಗ್‌ಗೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಖ್ಯಾತ ನಟ ಅರ್ಜುನ್ ಕಾಪಿಕಾಡ್, ಅಸ್ತ್ರ ಗ್ರೂಪ್‌ನ ಲಂಚುಲಾಲ್, ಅನೂಪ್ ಸಾಗರ್, ಅಸ್ತಿಕ್ ಶೆಟ್ಟಿ, ಚೇತನ್ ಶೆಟ್ಟಿ,  ಅವರು ಆಗಮಿಸಿ, ಸಚಿನ್ ಶೆಟ್ಟಿ ಮತ್ತು ಅಭಿ ಶೆಟ್ಟಿಯವರಿಗೆ ಶುಭ ಹಾರೈಸಿದರು.

ಈ ಬಗ್ಗೆ ಶಟರ್‌ಬಾಕ್ಸ್ ಫಿಲಮ್ಸ್‌ನ ಸಚಿನ್ ಶೆಟ್ಟಿ ಅವರು ಟ್ರಾವೆಲಿಂಗ್ ಬಗೆಗೆ ಮಾಹಿತಿಯನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಆರ್.ಜೆ ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.