ಸೋಮೇಶ್ವರ : ಫೆ.18ರಂದು ಮಹಾಶಿವರಾತ್ರಿ

ಉಳ್ಳಾಲ: ಮಹಾಶಿವರಾತ್ರಿಯ ಸೂರ್ಯಾಸ್ತದ ನಂತರ ಜಾಗರಣದ ಸಂಧಿಕಾಲದಲ್ಲಿ ಸೋಮೇಶ್ವರ ದೇವಸ್ಥಾನದ ಬಳಿ ಇರುವ ರುದ್ರಪಾದೆಯಲ್ಲಿ ಲೋಕಕಲ್ಯಾಣಕ್ಕಾಗಿ ಅಗ್ನಿಹೋತ್ರ ಮತ್ತು ಭಸ್ಮ ತಯಾರಿ ಯಜ್ಞವು ಕರಾವಳಿ ಕಲ್ಯಾಣ ಪರಿಷತ್, ಕರ್ನಾಟಕ ಸೋಮೇಶ್ವರ ಶಕ್ತಿ ಕೇಂದ್ರದ ನೇತೃತ್ವದಲ್ಲಿ ಜರಗಲಿದೆ ಫೆಬ್ರವರಿ 18ರಂದು ನಡೆಯಲಿದೆ ಎಂದು ಪರಿಷತ್ ನ ಪದ್ಮನಾಭ ವರ್ಕಾಡಿ ತಿಳಿಸಿದ್ದಾರೆ.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್‍ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವೈದಿಕರಿಲ್ಲದೆ ನಡೆಯುವ ಅಗ್ನಿಹೋತ್ರ ಮತ್ತು ಗೋವಿನ ಸೆಗಣಿಯಿಂದ ಭಸ್ಮ ತಯಾರಿ ಯಜ್ಞದಲ್ಲಿ ಎಲ್ಲರೂ ಭಾಗಿಯಾಗಿ, ಅವರವರೇ ಹೋಮವನ್ನು ನೆರವೇರಿಸಬಹುದು. ತುಳಸಿ, ಗಂಧ, ಬಿಲ್ವಪತ್ರೆ ವಸ್ತುಗಳನ್ನು ಯಜ್ಞದಲ್ಲಿ ಉಪಯೋಗಿಸಲಾಗುವುದು. ದೇಶೀ ತಳಿಯ ಗೋವಿನ ಬೆರಣಿಯನ್ನು ಭಕ್ತರು ತಂದು ಯಜ್ಞಕ್ಕೆ ಸ್ವತ: ಅರ್ಪಿಸಬಹುದು ಎಂದರು.
ಸುದ್ಧಿಗೋಷ್ಠಿಯಲ್ಲಿ ಕರಾವಳಿ ಕಲ್ಯಾಣ ಪರಿಷತ್‍ನ ದಿನೇಶ್ ಕಾಜವ, ದಿನಮಣಿ ರಾವ್ ಮತ್ತು ವಸಂತ್ ಉಳ್ಳಾಲ ಉಪಸ್ಥಿತರಿದ್ದರು.
