ಶ್ರೀರಾಮಸೇನಾ ಕಾರ್ಯಕರ್ತರ ತಂಟೆಗೆ ಬಂದಾಗ ತಕ್ಕಶಾಸ್ತಿ : ಕಾರ್ಕಳದಲ್ಲಿ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಎಚ್ಚರಿಕೆ

ಕಾರ್ಕಳ: ಶೀರಾಮಸೇನಾ ಕಾರ್ಯಕರ್ತರ ವಿರುದ್ಧ ವಿನಾಕಾರಣ ಉಪಟಳ ನೀಡಿ ಕಾನೂನು ಕುಣಿಕೆಗೆ ಸಿಲುಕಿಸುವ ಪ್ರಯತ್ನಗಳು ಮುಂದುವರಿಸಿದ್ದು ಆದಲ್ಲಿ ತಕ್ಕಶಾಸ್ತಿಯನ್ನು ಎದುರಿಸಬೇಕಾದಿತ್ತು. ಇಡೀ ರಾಜ್ಯದ ಹಿಂದು ಪರ ಸಂಘಟನಾ ಕಾರ್ಯಕರ್ತರು ಕಾರ್ಕಳಕ್ಕೆ ಮುತ್ತಿಗೆ ಹಾಕುವಂತ ಪ್ರಮೇದ ಎದುರು ಹಾಕದಿರಿ ಎಂದು ಬಿಜೆಪಿ ರಾಜ್ಯ ಘಟಕ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರಕ್ಕೆ ಶ್ರೀ ರಾಮಸೇನೆಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಎಚ್ಚರಿಸಿದ್ದಾರೆ.

ಕಾರ್ಕಳ ವಿಸ್ತೃತ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು 2004ರ ವಿಧಾನ ಸಭಾ ಚುನಾವಣೆಯಲ್ಲಿ ಇದೇ ಕಾರಣದಿಂದ ಹಿಂದುತ್ವ ಸಂಘಟನೆಯ ಪ್ರಮುಖರೊಬ್ಬರು ಆಯ್ಕೆಯಾಗಿದ್ದರು. ಅವರನ್ನು ವಿಧಾನ ಸಭೆಗೆ ಕಳುಹಿಸುವಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಪರಿಶ್ರಮವೇ ಪ್ರಮುಖ ಕಾರಣವಾಗಿತ್ತು. ಹಿಂದುತ್ವದ ಅಜೆಂಡಾವನ್ನೇ ಮೂಲೆಗುಂಪಾಗಿ ಮಾಡಿರುವ ಆ ವ್ಯಕ್ತಿಯನ್ನು ಸೋಲಿಸುವ ಮೂಲ ಉದ್ದೇಶದಿಂದಲೇ ಮತ್ತೇ ಪ್ರಮೋದ್ ಮುತಾಲಿಕ್ ಕಾರ್ಕಳಕ್ಕೆ ಬಂದಿದ್ದಾರೆ. ಸಂಘಟನೆಯಲ್ಲಿ ಇದ್ದಾಗ ಅವರಲ್ಲಿ ಹಿಂದುತ್ವದ ತತ್ವ-ಸಿದ್ಧಾಂತಗಳು ಮರೆಯಾಗಿದೆ. ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗೋ ಹತ್ಯೆ, ಮತಾಂತರ, ಲವ್ ಜಿಹಾದ್ ಪ್ರಕರಣಗಳು ಎಲ್ಲೇ ಮೀರಿದೆ. ಅದನ್ನೆಲ್ಲ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ. ಹಲವು ಆರೋಪಗಳು, ಭ್ರಷ್ಟಾಚಾರಗಳು ಇವರ ಮೇಲಿದೆ. ಪೂರಕ ದಾಖಲೆಗಳು ಚುನಾವಣಾ ಸಂದರ್ಭದಲ್ಲಿ ಬಹಿರಂಗ ಪಡಿಸುದಾಗಿ ಶಪಥಗೈದಿದ್ದಾರೆ. ನಾವು ಮಾಡುತ್ತಿರುವ ಆರೋಪಗಳಿಗೆ ಉತ್ತರಿಸುವ ಧೈರ್ಯ ತೋರದ ಜನಪ್ರತಿನಿಧಿಯೂ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರೊಂದಿಗಿದ್ದ ಕಾರ್ಯಕರ್ತರು ಹಾಗೂ ಮುಖಂಡರ ವಿರುದ್ಧ ಹಗೆತನಕ್ಕೆ ಮುಂದಾಗುತ್ತಿರುವುದು ಹತಾಶತನವೆದಂದು ಲೇವಡಿ ಮಾಡಿದರು.

ಶ್ರೀರಾಮ ಸೇನೆಯ ರಾಜ್ಯಕಾರ್ಯದರ್ಶಿ ಆನಂದ ಅಡ್ಯಾರು, ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ವಕೀಲ ಹರೀಶ್ ಅಧಿಕಾರಿ, ಕಾರ್ಕಳ ಪುರಸಭಾ ಸದಸ್ಯ ಲಕ್ಷ್ಮೀ ನಾರಾಯಣ ಮಲ್ಯ, ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.