ಫೆ. 9ರಂದು ಶ್ರೀ ಸಂಗೀತ ಪಾಠಶಾಲೆ ವಾರ್ಷಿಕೋತ್ಸವ `ಸ್ವರಶ್ರೀ 2025′

ಮಂಗಳೂರಿನ ಶ್ರೀ ಸಂಗೀತ ಪಾಠಶಾಲೆಯ ವಾರ್ಷಿಕೋತ್ಸವ `ಸ್ವರಶ್ರೀ 2025′ ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ಫೆಬ್ರವರಿ 9ರಂದು ನಡೆಯಲಿದೆ. ಪೂರ್ವಾಹ್ನ ಗಂಟೆ 9ರಿಂದ ಸಂಜೆ 4ರ ವರೆಗೆ ನಿರಂತರ ಸಂಸ್ಥೆಯ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಸಾಯಂಕಾಲ ಗಂಟೆ 4ರಿಂದ ಖ್ಯಾತ ಹಾಡುಗಾರರಾದ ವಿದ್ವಾನ್ ಡಾ. ಶ್ರೇಯಸ್ ನಾರಾಯಣನ್ ಚೆನ್ನೈ ತಂಡದವರಿಂದ ಸಂಗೀತ ಕಛೇರಿ ನಡೆಯಲಿದೆ. ಇವರಿಗೆ ಪಕ್ಕವಾದ್ಯದಲ್ಲಿ ವಯಲಿನ್‌ನಲ್ಲಿ ವಿದ್ವಾನ್ ಟ್ರಿವೆಂಡ್ರಮ್ ಎನ್. ಸಂಪತ್, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಮತ್ತು ಘಟಂನಲ್ಲಿ ಶರತ್ ಕೌಶಿಕ್ ಮೈಸೂರು ಸಹಕರಿಸಲಿದ್ದಾರೆ.