ಶ್ರೀ ವೀರಭದ್ರಕಾಳಿ ಸ್ಮರಣ ಸಂಚಿಕೆ ಬಿಡುಗಡೆ, ಅನ್ನಪೂರ್ಣ ಭೋಜನಾಲಯ, ಅತಿಥಿಗೃಹ ಉದ್ಘಾಟನೆ

ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಅಷ್ಟ ಬಂಧ ಬ್ರಹ್ಮಕಲಕೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ, ಶ್ರೀ ವೀರಭದ್ರಕಾಳಿ ಸ್ಮರಣ ಸಂಚಿಕೆ ಬಿಡುಗಡೆ, ಅನ್ನಪೂರ್ಣ ಭೋಜನಾಲಯ, ಅತಿಥಿಗೃಹ ಉದ್ಘಾಟಿಸಲಾಯಿತು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರು ಅತಿಥಿ ಗ್ರಹ ಉದ್ಘಾಟಿಸಿ ಮಾತನಾಡಿ, ಪದ್ಮಶಾಲಿಯ ಉಪಜಾತಿ ಕರಾವಳಿ ಶೆಟ್ಟಿಗಾರ ಜಾತಿಯನ್ನು ಸೇರಿಸಲು ಒತ್ತಾಯದ ಹಿನ್ನೆಲೆಯಲ್ಲಿ ಸರಕಾರ ಒಪ್ಪಿದರೆ ಶೆಟ್ಟಿಗಾರ್ ಆಗಿ ಗುರುತಿಸಿಕೊಳ್ಳಬಹುದು ಎಂದರು.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಅವರು ಅನ್ನಪೂರ್ಣ ಭೋಜನಾಲಯ ಉದ್ಘಾಟಿಸಿ, ಸನಾತನ ಹಿಂದೂ ಸಮುದಾಯ ಉಳಿಸಿ ಬೆಳೆಸುವಲ್ಲಿ ಪದ್ಮಶಾಲಿಗರ ಪಾತ್ರ ಮಹತ್ತರವಾದದ್ದು, ಸಮಾಜದವರು ಕುಲ ವೃತ್ತಿಗಳನ್ನು ಬೆಳೆಸಿಕೊಂಡು ಇನ್ನಷ್ಟು ಬೆಳೆಯಿರಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ವೀರಭದ್ರಕಾಳಿ ಸ್ಮರಣ ಸಂಚಿಕೆಯನ್ನು ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶಟ್ಟಿಗಾರ ಕಾರ್ಕಳ ಬಿಡುಗಡೆಗೊಳಿಸಿದರು.ದೇವಳದ ಆಡಳಿತ ಮೊಕ್ತೇಸರರಾದ ಡಾ.ಜಯರಾಮ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ದ.ಕ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ ಅಧ್ಯಕ್ಷ ಲಕ್ಷ್ಮಣ ಶೆಟ್ಟಿಗಾರ್ ಕೊಡಿಯಾಲಬೈಲ್, ಮುಂಬೈ ಪದ್ಮಶಾಲಿ ಸಮಾಜ ಸೇವಾ ಸಂಘ ಅಧ್ಯಕ್ಷ ಉತ್ತಮ್ ಶೆಟ್ಟಿಗಾರ್, ದ.ಕ ಜಿಲ್ಲಾ ಪದ್ಮಶಾಲಿ ಸಮಾಜ ಸೇವಾ ಸಂಘ ಬೆಂಗಳೂರು ಅಧ್ಯಕ್ಷೆ ಭಾನುಮತಿ ಶೆಟ್ಟಿಗಾರ್, ಶಿವಮೊಗ್ಗ ಜಿಲ್ಲಾ ಪದ್ಮಶಾಲಿ ಸಂಘದ ಅಧ್ಯಕ್ಷ ರಾಮಕೃಷ್ಣ ಜೆ, ಪಣಂಬೂರು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಸಂಗಬೆಟ್ಟು ಸಿದ್ದಕಟ್ಟೆ ಗುರಿಕಾರರು ಪಿ ಶ್ರೀನಿವಾಸ ಶೆಟ್ಟಿಗಾರ, ಕಾಂಞಗಾಡು ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನ ಹೊಸದುರ್ಗ ಅಧ್ಯಕ್ಷರು ಶ್ರೀ ಮನೋಹರ ಶೆಟ್ಟಿಗಾರ, ಬಂಗ್ರ ಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನ ಅಧ್ಯಕ್ಷರು ಹರಿಶ್ಚಂದ್ರ ಶೆಟ್ಟಿಗಾರ್, ಉಳ್ಳಾಲ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರರಾದ ವರದರಾಜ ಶೆಟ್ಟಿಗಾರ, ಹರ್ಷ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಾನಂದ ಶೆಟ್ಟಿಗಾರ, ಉಡುಪಿ ಶ್ರೀ ಕೃಷ್ಣ ಮಠದ ಕೋಟಿ ಲೇಖನ ಯಜ್ಞದ ಸಂಚಾಲಕ ರಮಣಾಚಾರ್ಯ, ರತ್ನಾಕರ ಗುರಿಕಾರ,ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ, ಬ್ರಹ್ಮಕಲಕೋತ್ಸವ ಸಮಿತಿಯ ಅಧ್ಯಕ್ಷ ಎಚ್ ಎ ಗೋಪಾಲ್, ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಪುರುಷೋತ್ತಮ ಶೆಟ್ಟಿಗಾರ, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.ಸ್ಮರಣ ಸಂಚಿಕೆಯ ಸಂಪಾದಕಿ ಶ್ರೀಮತಿ ಕವಿತಾ ಮತ್ತು ಡಾ. ಜಯರಾಮ್ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.
ಶೋಭಾ ನಿತ್ಯಾನಂದ ನಾಗರತ್ನ ಪ್ರಾರ್ಥಿಸಿದರು, ಭಾಸ್ಕರ್ ಶೆಟ್ಟಿಗಾರ್ ಸಾಸ್ತಾನ ಸ್ವಾಗತಿಸಿದರು. ಕವಿತಾ ಜಯರಾಮ್ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಭಾಸ್ಕರ್, ಶಿಕ್ಷಕ ನಾರಾಯಣ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಚ್ ಎ ಗೋಪಾಲ್ ವಂದಿಸಿದರು.