ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ: ಎಸ್‌ಜೆಇಸಿ ಮಹಿಳಾ ತಂಡಕ್ಕೆ ರನ್ನರ್ಸ್ ಅಪ್ ಟ್ರೋಫಿ
ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್.ಜೆ.ಇ.ಸಿ) ಮಹಿಳಾ ವಾಲಿಬಾಲ್ ತಂಡವು 12 ಮತ್ತು
13 ನವೆಂಬರ್ 2024 ರಂದು ಎಜಿಎಂಆರ್ಸಿಇ ವರೂರು ಹುಬ್ಬಳ್ಳಿಯಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ಮಹಿಳಾ
ವಾಲಿಬಾಲ್ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಟ್ರೋಫಿಯನ್ನು ಪಡೆದುಕೊಂಡಿತು. ದೈಹಿಕ ಶಿಕ್ಷಣ ನಿರ್ದೇಶಕಿ
(ಪಿಇಡಿ) ವನೀಷಾ ವಿ ರೋಡ್ರಿಗಸ್ ಮತ್ತು ಎಸ್.ಜೆ.ಇ.ಸಿ ವಾಲಿಬಾಲ್ ತರಬೇತುದಾರ ಜಮುನಾ ರವರ
ಮಾರ್ಗದರ್ಶನದಲ್ಲಿ ಪಡೆದ ಈ ಅಗಾಧ ಸಾಧನೆಗಾಗಿ ಇಡೀ ತಂಡ ಮತ್ತು ದೈಹಿಕ ಶಿಕ್ಷಣ
ನಿರ್ದೇಶಕರನ್ನುಎಸ್.ಜೆ.ಇ.ಸಿಯ ಆಡಳಿತ ಮಂಡಳಿಯು ಅಭಿನಂದಿಸುತ್ತದೆ.