ಮಂಗಳೂರು:ಜನ್ಮಜಾತ ಹೃದಯದೋಷಕ್ಕೆ ಶಸ್ತ್ರಚಿಕಿತ್ಸೆಯಿಲ್ಲದೆ ಯಶಸ್ವಿ ಚಿಕಿತ್ಸೆ: ಎ.ಜೆ. ಆಸ್ಪತ್ರೆಯ ವಿಶೇಷ ಸಾಧನೆ

ಎ.ಜೆ. ಆಸ್ಪತ್ರೆಯಲ್ಲಿ ಹೊಸದಾಗಿ ಹುಟ್ಟಿದ ಶಿಶುವಿಗೆ ತೀವ್ರ ಪಲ್ಮೊನರಿ ಸ್ಟೆನೋಸಿಸ್ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು.
ಲೋವರ್ಸೆಗ್ಮೆಂಟ್ಸಿಸೇರಿಯನ್ (ಐSಅS) ಮೂಲಕ ಜನಿಸಿದ ಶಿಶುವಿಗೆ, ಜನ್ಮಜಾತ ಹೃದಯದೋಷಗಳಿಗೆ ಶಸ್ತ್ರಚಿಕಿತ್ಸೆಯಿಲ್ಲದ ಚಿಕಿತ್ಸೆಯಲ್ಲಿ ಪರಿಣತಿಯನ್ನು ಹೊಂದಿರುವ ಖ್ಯಾತ ಪೀಡಿಯಾಟ್ರಿಕ್ ಕಾರ್ಡಿಯೊಲಾಜಿಸ್ಟ್ ಪ್ರೇಮ್ ಆಳ್ವ ಅವರಿಂದ ವಿಶೇಷ ಬಲೂನ್ಪಲ್ಮೊನರಿ ವಾಲ್ವು ಲೋಪ್ಲಾಸ್ಟಿ (ಬಿಪಿವಿ) ಕಾರ್ಯವಿಧಾನವನ್ನು ಯಶಸ್ವಿಯಾಗಿ ನಡೆಸಿದರು.
ಗರ್ಭಾವಸ್ಥೆಯಲ್ಲೇ ಜನ್ಮಜಾತ ಹೃದಯರೋಗ ಪತ್ತೆಯಾಗಿತ್ತು. ತಕ್ಷಣದ ಶಸ್ತ್ರಚಿಕಿತ್ಸೆಗೆ ಪ್ರಕರಣವನ್ನು ತೆಗೆದುಕೊಳ್ಳಲಾಯಿತು. ಡಾ. ಆರ್ಥಿಕಾ ಶೆಟ್ಟಿ ಅವರು ಸಿಸೇರಿಯನ್ ವಿಧಾನದ ಮೂಲಕ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಶಿಶುವಿನ ಸುರಕ್ಷಿತ ಹೆರಿಗೆಯನ್ನು ನಡೆಸಿದರು.
ಶಿಶು ವೈದ್ಯರಾದ ಡಾ. ಶ್ರೀಕೃಷ್ಣ ಜಿಎನ್ ಅವರು ಆರಂಭಿಕ ನಿರ್ವಹಣೆ ಮತ್ತು ನಿರಂತರ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸಿದರು.
ಬಿಪಿವಿ ಕಾರ್ಯ ವಿಧಾನವು ಡಾ. ಪ್ರೇಮ್ ಆಳ್ವ ಅವರ ನಿಪುಣತೆಯಿಂದ ಅತ್ಯಂತ ಯಶಸ್ವಿಯಾಗಿ ನಡೆಯಿತು. ಇದರಿಂದ ಶಿಶುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ತಪ್ಪಿಸಲು ಸಾಧ್ಯವಾಯಿತು.
ಹೃದ್ರೋಗ ಅರಿವಳಿಕೆ ತಜ್ಞಡಾ. ಸುಹಾಸ್, ಪ್ರಕ್ರಿಯೆಯ ಸಮಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು, ಶಿಶುವಿನ ಸ್ಥಿರತೆ ಮತ್ತು ಸುರಕ್ಷತೆಯನ್ನು ಅವರು ನಿರಂತರವಾಗಿ ಕಾಪಾಡಿಕೊಂಡರು.
ಪ್ರಕ್ರಿಯೆಯ ನಂತರದ ಚೇತರಿಕೆ ಅದ್ಭುತವಾಗಿದ್ದು, ಶಿಶು ಉತ್ತಮ ಪ್ರಗತಿಯನ್ನುತೋರಿಸುತ್ತಿದ್ದು, ಆರೋಗ್ಯವಂತಿಕೆಯಿಂದ ಬೆಳೆಯುತ್ತಿದೆ.
ಡಾ. ಅಕ್ಷತಾ ಶೆಟ್ಟಿ, ಇಂಟೆನ್ಸಿವಿಸ್ಟ್, ಶಿಶುವಿನ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಚೇತರಿಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಎ.ಜೆ. ಆಸ್ಪತ್ರೆಯ ವೈದ್ಯಕೀಯ ತಂಡದ ಎಲ್ಲ ಸದಸ್ಯರ ಸಹಕಾರವು ಸಹಾನು ಭೂತಿಯನ್ನೂ, ಆರೈಕೆಯತ್ತ ಅವರ ಬದ್ಧತೆಯನ್ನು ತೋರಿಸಿದೆ.
ಈ ಗಮನಾರ್ಹ ಪ್ರಕರಣವು ಜನ್ಮಜಾತ ಹೃದಯದೋಷಗಳಿಗೆ ಶಸ್ತ್ರಚಿಕಿತ್ಸೆಯಲ್ಲದ ಚಿಕಿತ್ಸೆಗಳು ಹೆಚ್ಚು ಪರಿಣಾಮಕಾರಿಯಾಗುತ್ತಿವೆ ಎಂಬುದನ್ನು ತೋರಿಸುತ್ತದೆ. ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಕುಟುಂಬಗಳಿಗೆ ಭರವಸೆಯನ್ನು ತರುತ್ತದೆ. ಇದು ಡಾ. ಪ್ರೇಮ್ ಆಳ್ವ ಮತ್ತು ಅವರ ತಂಡದ ಸಮರ್ಪಣೆ ಮತ್ತು ಪರಿಣತಿಗೆ ಸಾಕ್ಷಿಯಾಗಿದೆ.