ಸುಳ್ಯ:ಕೆ.ವಿ.ಜಿ ಪಾಲಿಟೆಕ್ನಿಕ್ ನಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ

ಕುರುಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಪ್ರಚಾರೋಹಣಗೈದು ಶುಭ ಹಾರೈಸಿ ಮಾತನಾಡುತ್ತಾ ನಮಗೆ ಸಂವಿಧಾನ ನೀಡಿರುವ ಹಕ್ಕುಗಳ ಚಲಾವಣೆಯ ಜೊತೆಗೆ ಕರ್ತವ್ಯಗಳ ಪಾಲನೆಯೂ ಆದಾಗ ದೇಶದ ಸಮಗ್ರತೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗ ಮುಖ್ಯಸ್ಥರುಗಳಾದ ಎಂ.ಎನ್ ಚಂದ್ರಶೇಖರ, ಯತೀಶ್ ಕೆ. ಎನ್, ವಿವೇಕ್ ಪಿ, ಹರೀಶ್ ಕುಮಾರ್, ರಮಾದೇವಿ, ರವಿಶಂಕರ್ ಹೊಳ್ಳ, ಬಿಂದು ಕೆ ವಿ ,ಕಚೇರಿ ಅಧೀಕ್ಷಕ ಶಿವರಾಮ ಕೇರ್ಪಳ, ಲೆಕ್ಕಾಧೀಕ್ಷಕ ಧನಂಜಯ ಕಲ್ಲುಗದ್ದೆ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಚಂದ್ರಶೇಖರ ಬಿಳಿನೆಲೆ ಮತ್ತು ಸುನಿಲ್ ಕುಮಾರ್ ಎನ್ ಪಿ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಾರಾಯಣ ತೋರಣಗಂಡಿ, ಕವಿತಾ ಪಿ.ಡಿ, ಜಯಲಕ್ಷ್ಮಿ ಕೆ ಮತ್ತು ಪದ್ಮಾವತಿ ಜೆ ಗಾಯಕರಾಗಿ ಸಹಕರಿಸಿದರು.
ಎನ್ಎಸ್ಎಸ್ ನಾಯಕಿ ಸ್ವಾತಿ ಕೆ. ಎಸ್ ಕಾರ್ಯಕ್ರಮ ನಿರ್ವಹಿಸಿದರು.

Related Posts

Leave a Reply

Your email address will not be published.