ಸುಳ್ಯ : ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸ್ವಸ್ಥವೃತ್ತ ವಿಭಾಗ, ಎನ್ಎಸ್ಎಸ್ ವಿಭಾಗ ಹಾಗೂ ಆಯುಷ್ ಇಲಾಖೆ ಮಂಗಳೂರು ಇದರ ಸಹಯೋಗದೊಂದಿಗೆ 11ನೇ ಅಂತರಾಷ್ಟಿಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಕೆ ವಿ ಚಿದಾನಂದ, ಅಧ್ಯಕ್ಷರು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತ ಎಂ, ಕೆವಿಜಿ ಆಯುರ್ವೇದ ಫಾರ್ಮ ಮತ್ತು ರಿಸರ್ಚ್ ಸೆಂಟರ್ ನ ಸಿ.ಇ.ಓ ಡಾ. ಪುರುಷೋತ್ತಮ ಕೆ.ಜಿ. ಸಂಸ್ಥೆಯ ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕರಾದ ಡಾ. ಕವಿತಾ ಬಿ. ಎಂ. ಮೆಡಿಕಲ್ ಆಫೀಸರ್ ಡಾ. ಸನತ್ ಕುಮಾರ್ ಡಿ. ಜಿ., ಕಾಲೇಜಿನ ಸ್ವಸ್ಥ ವೃತ್ತ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಶಭೀನಾ ಟಿ. ಟಿ., ಡಾ. ಕೃತಿ ಅಮೈ, ಡಾ ಐಶ್ವರ್ಯ ಬಾಲಗೋಪಾಲ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ ಡಿ.ವಿ., ಎನ್.ಎಸ್ ಎಸ್ ಯೋಜನಾಧಿಕಾರಿ ಡಾ. ಪ್ರಮೋದ್ ಪಿ. ಎ. ಹಾಗೂ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿಗಳಿಂದ ವಿದ್ಯಾರ್ಥಿಗಳಿಂದ ತೆರೆದ ಮೈದಾನದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಕಾಲೇಜಿನ ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಪಕರಾದ ಡಾ. ಶಬೀನಾ ಟಿ. ಟಿ., ಡಾ.ಕೃತಿ ಅಮೈ, ಡಾ.ಐಶ್ವರ್ಯ ಬಾಲ ಗೋಪಾಲ್ ಇವರ ಮಾರ್ಗದರ್ಶನದಲ್ಲಿ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಕೆವಿಜಿ ಸಮೂಹ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಕೂಡ ಈ ಸಂದರ್ಭದಲ್ಲಿ ನೆರವೇರಿಸಲಾಯಿತು.
ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಯೋಗ ಪೋಟೋಗ್ರೋಫಿ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನವನ್ನು ನೆಹರು ಮೆಮೋರಿಯಲ್ ಪಿಯು ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಶ್ರೇಯಾ ಎಂ.ಜಿ., ದ್ವಿತೀಯ ಬಹುಮಾನವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ವಿತೀಯ ಬಿ.ಎ.ಎಮ್.ಎಸ್ ಅನ್ನು ಯತೀಶ್ ಗೌಡ ಹೆಚ್ ಆರ್ ಪಡೆದುಕೊಂಡರು.


ಇ- ಪೋಸ್ಟರ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ವಿತೀಯ ಬಿ.ಎ.ಎಂ.ಎಸ್ ನ ಗದಗಯ್ಯ ಈರಣ್ಣ ಹಿರೇಮಠ್, ದ್ವಿತೀಯ ಬಹುಮಾನವನ್ನು ಮೆಹ್ ವೀಶ್ , ತೃತೀಯ ಬಹುಮಾನವನ್ನು ಚಿತ್ರ ಕೆ. ಎಚ್ ಪಡೆದುಕೊಂಡರು. ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಐಶ್ವರ್ಯ ಸುಭಾಶ್ ರಾಯ್ಕಾರ್ ಮತ್ತು ಬಳಗ, ದ್ವಿತೀಯ ಬಹುಮಾನ ವನ್ನು ಶಾಂಭವಿ ಮತ್ತು ಬಳಗ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಚಿಂತನ ಎನ್.ಎಸ್,. ದ್ವಿತೀಯ ಬಹುಮಾನವನ್ನು ದೀಪ್ತಿ ಧರ್ಮರಾಜ್ ಹಾಗು ತೃತೀಯ ಬಹುಮಾನವನ್ನು ಐಶ್ವರ್ಯ ಸುಭಾಶ್ ರಾಯ್ಕಾರ್, ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಬಿ.ಎಸ್. ಪ್ರಸನ್ನ , ದ್ವಿತೀಯ ಬಹುಮಾನವನ್ನು ರಾಹುಲ್ ರಾಜನ್, ತೃತೀಯ ಬಹುಮಾನವನ್ನು ಗಾನವಿ ಎಮ್ ಹಾಗೂ ದರ್ಶನ್ ಹೆಚ್ ಎಸ್ ಪಡೆದುಕೊಂಡರು.
ಬಹುಮಾನ ವಿತರಣಾ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ರಿ. ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಇವರು ನೆರವೇರಿಸಿದರು.
ಕಾಲೇಜಿನ ಎಲ್ಲ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿ ವರ್ಗವರು, ಸ್ನಾತಕೋತ್ತರಮರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೈಶಾಲಿ ಪಿ. ಜೆ ಮತ್ತು ಬಳಗ ಪ್ರಾರ್ಥಿಸಿ,
ವಂಶಿಕಾ ಸ್ವಾಗತಿಸಿ, ವೈಷ್ಣವಿ ಎಚ್ ಡಿ ವಂದಿಸಿದರು.
ಈ ಕಾರ್ಯಕ್ರಮವನ್ನು ರೋಹನ್ ಗೌಡ ಹಾಗೂ ರಕ್ಷಿತಾ ನಿರೂಪಿಸಿದರು.

add - S.L Shet ..march 2025

Related Posts

Leave a Reply

Your email address will not be published.