ಸುಳ್ಯ : ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ- ವಿಶ್ವ ತಂಬಾಕು ರಹಿತ ದಿನಾಚರಣೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಕಾಲೇಜಿನ ಅಗದ ತಂತ್ರ, ಸ್ವಸ್ಥವೃತ್ತ ವಿಭಾಗದ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿಯವರು ದೀಪ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ತಂಬಾಕು ಸೇವನೆಯ ದುಷ್ಪರಿಣಾಮಗಳು, ಇದರಿಂದ ಉಂಟಾಗುವ ಕಾಯಿಲೆಗಳು ಹಾಗೂ ಸೇವನೆಯ ಚಟದಿಂದ ಹೊರಬರುವ ವಿಧಾನಗಳನ್ನು ಕುರಿತು ಜಾಗೃತಿ ಮೂಡಿಸುವ ಸಲುವಾಗಿ ದ್ವಿತೀಯ ವರ್ಷದ ಬಿ.ಎ.ಎಂ.ಎಸ್ ವಿದ್ಯಾರ್ಥಿನಿ ಕು.ಹರ್ಷಿತಾ ಎಂ. ಪ್ರಾತ್ಯಕ್ಷಿಕೆ ನೀಡಿದರು.
ರಕ್ಷಿತಾ ಮತ್ತು ತಂಡದವರಿಂದ ಕಾಲೇಜಿನ ಆವರಣದಲ್ಲಿ ನೃತ್ಯ ಪ್ರದರ್ಶನ ನಡೆಯಿತು.
ಹಾಗೂ ವಿದ್ಯಾರ್ಥಿನಿ ವೃಂದ ಇವರು ಪ್ರತೀಜ್ಞಾವಿಧಿ ಭೋಧಿಸಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತಾ ಎಂ., ಸಂಸ್ಥೆಯ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು, ಹಾಗೂ ಕಲಿಕಾ ವೈದ್ಯರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ದೀಪ್ತಿ ಡಿ ಮತ್ತು ತಂಡದವರು ಪ್ರಾರ್ಥಿಸಿ, ಕುಮಾರಿ ಮಹಿತಾ ಭಟ್ ಸ್ವಾಗತಿಸಿ, ಕುಮಾರಿ ಶಾಂಭವಿ ಹೆಚ್.ಬಿ. ವಂದಿಸಿದರು.
ಹೇಮಪ್ರಸಾದ್ ಎಂ.ಪಿ. ಹಾಗೂ ಕುಮಾರಿ ಸ್ಪಂದನಾ ಎಸ್.ಟಿ., ಕಾರ್ಯಕ್ರಮ ನಿರೂಪಿಸಿದರು.

add - Rai's spices

Related Posts

Leave a Reply

Your email address will not be published.