ಸರಕಾರಿ ಆಸ್ಪತ್ರೆಯ ಎದುರುಗಡೆ ಕಾರಲ್ಲಿ ಮೃತದೇಹ ಪತ್ತೆ

ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ ನಿಂತಿರುವ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು ಪೆರಾಜೆಯ ಪೆರಂಗಜೆ ಗೌರೀಶ ಎಂಬ ಯುವಕನದೆಂದು ಗೊತ್ತಾಗಿದೆ.
4 ದಿನಗಳ ಹಿಂದೆ ಗುರುವಾರ ದಿನ ಸಂಜೆ ಗೌರೀಶ ಕಾರಲ್ಲಿ ಬಂದು ಸರಕಾರಿ ಆಸ್ಪತ್ರೆಯ ಎದುರಿನ ಜಾಗದಲ್ಲಿ ಕಾರು ಪಾರ್ಕ್ ಮಾಡಿದ್ದನೆಂದೂ, ವಿಪರೀತ ಕುಡಿತದ ಪರಿಣಾಮವಾಗಿ ಶುಕ್ರವಾರ ದಿನ ಮೃತಪಟ್ಟಿರಬೇಕೆಂದೂ ಶಂಕಿಸಲಾಗಿದೆ.ಶವ ಬಾತುಕೊಂಡಿದ್ದು ವಾಸನೆ ಬರತೊಡಗಿದ ಹಿನ್ನಲೆಯಲ್ಲಿ ಆದಿತ್ಯವಾರ ಬೆಳಿಗ್ಗೆ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಯಿತು. ಪೊಲೀಸರಿಗೆ ವಿಷಯ ತಿಳಿದ ಎಸ್ಸೈ ದಿಲೀಪ್ ರವರನ್ನ ಸಿಬ್ಬಂದಿಗಳ ಜತೆಗೆ ಬಂದು ಮಾದರಿ ಸೇರು ಡಿವೈಎಸ್ ಪಿ ಹಿರೇಮಠ ಅವರು ಕೂಡ ಬಂದು ಪರಿಶೀಲಿಸಿದರು.
ಪೆರಾಜೆಯ ಪೆರಂಗಜೆ ಲೋಕಯ್ಯ ಗೌಡರ ಮಗ ಗೌರೀಶ ( 30 ) ವಿಪರೀತ ಕುಡಿತದ ಚಟ ಹೊಂದಿದ್ದು, ಆತನ ಪತ್ನಿ ಆಶ್ರಮವೊಂದಕ್ಕೆ ಸೇರಿದ್ದಾರೆನ್ನಲಾಗಿದೆ. ಗೌರೀಶರಿಗೆ ಇಬ್ಬರು ಮಕ್ಕಳಿದ್ದಾರೆ.

vip's last bench

Related Posts

Leave a Reply

Your email address will not be published.