ಸುಳ್ಯ : ಇನ್ನು ದುರಾಸ್ಥಿಯಾಗದೆ ಉಳಿದ 1954 ನೇ ಇಸವಿಯ ಪುನರ್ಜಿತ ರಸ್ತೆ
ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಇದಾಗಿದ್ದು ಸತತ ಹತ್ತು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ಸಂಪೂರ್ಣ ಕೆಸರು ಮಯವಾಗಿರುವ ಈ ರಸ್ತೆ ಶೇಣಿಯಿಂದ ಹೊಸಮಜಲು ಎಂಬಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ. ಅಮರ ಪಡ್ನೂರು ಗ್ರಾಮದ ಅತೀ ಪುರಾತನ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಲ್ಲದೆ 25 ಕ್ಕಿಂತ ಹೆಚ್ಚು ಮನೆಯವರು ಈ ರಸ್ತೆಯನ್ನೆ ಅವಲಂಬಸಿರುತ್ತಾರೆ. 1954 ನೇ ಇಸವಿಯಲ್ಲಿ ಪುನರ್ಜಿತ ರಸ್ತೆ ಇದೀಗ ಸಂಪೂರ್ಣ ಹದಗೆಟ್ಟು ಕೆಸರುಮಯವಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನನಾಯಕರು ಇತ್ತ ಗಮನ ಹರಿಸದಿರುವುದು ಇಲ್ಲಿನ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು ಸಹ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದಾರೆ ಇದೀಗ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿದ್ದು ನಡೆದುಕೊಂಡು ಹೋಗುವುದಕ್ಕೂ ಆಗುತ್ತಿಲ್ಲ, ಇನ್ನು ವಾಹನ ಸವಾರರ ಕಷ್ಟ ಹೇಳ ತೀರದು, ಬಹಳಷ್ಟು ಜನ ವಾಹನ ಸವಾರರು ಈ ರಸ್ತೆಯ ದುರಾವಸ್ಥೆಯಿಂದ ಕಂಗಾಲಾಗಿದ್ದಾರೆ. ಇನ್ನಾದರೂ ಸ್ಥಳಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಲ್ಲಿನ ಸಮಸ್ಯೆಗೆ ಸ್ಪಂದಿಸುತ್ತಾರ..? ಇಲ್ಲ ಚುನಾವಣಾ ಸಮಯದಲ್ಲಿ ಬಂದು ಕೇವಲ ಭರವಸೆಗಳನ್ನು ಕೊಟ್ಟು ಸುಮ್ಮನಾಗುತ್ತಾರ ಕಾದು ನೋಡಬೇಕಿದೆ