ಸುಳ್ಯ : ಸರ್ಕಾರಿ ಜಾಗ ಅತಿಕ್ರಮಣಕ್ಕೆ ಮುಂದಾದವರ ವಿರುದ್ಧ ಕ್ರಮಕ್ಕೆ ಆಗ್ರಹ

ಸುಳ್ಯ ತಾಲೂಕಿನ ಜಯನಗರ ಮಿಲಿಟರಿ ಜಾಗಕ್ಕೆ ಸಂಬಂಧಿಸಿದ ಸರಕಾರಿ ಜಾಗವನ್ನು ಅತಿಕ್ರಮಣಕ್ಕೆ ಸ್ಥಳೀಯರೊಬ್ಬರು ಯತ್ನಿಸಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರವುದನ್ನು ಖಂಡಿಸಿ, ಜಾಗ ಅತಿಕ್ರಮಣಕ್ಕೆ ಮುಂದಾದವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ತಿಳಿಸಿದ್ದಾರೆ.ನೀ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಜಯನಗರದ ಸರಕಾರಿ ಶಾಲೆಯ ಸಮೀಪ ಗೋಪಾಲ್ ನಾಯಕ್ ಎಂಬವರಿಗೆ ವಾಸಿಸಲು ಮನೆ ಮತ್ತು ಖಾಲಿ ಜಾಗವಿದ್ದರೂ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಲು ಸೆ.16 ರಂದು ಜೆ.ಸಿ.ಬಿ ತರಿಸಿ ಕೆಲಸ ಪ್ರಾರಂಭಿಸಿದ್ದರು.

ಇದನ್ನು ಸ್ಥಳೀಯರಾದ ಹಸೈನಾರ್ ಜಯನಗರ ಎಂಬವರು ಇದನ್ನು ತಡೆ ಹಿಡಿದು, ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ವಿ.ಎ ಮತ್ತು ನ.ಪಂ. ಮುಖ್ಯಾಧಿಕಾರಿ ಕೂಡ ಸ್ಥಳಕ್ಕೆ ಬಂದು ಕೆಲಸ ಮಾಡದಂತೆ ಸೂಚಿಸಿದ್ದರು. ನಗರ ಪಂಚಾಯತ್ ಅಧ್ಯಕ್ಷರು ವಿನಯಕುಮಾರ್ ಕಂದಡ್ಕ ಮತ್ತು ಸ್ಥಳೀಯ ನ.ಪಂ ಸದಸ್ಯರೊಂದಿಗೆ ಅದೇ ಜಾಗಕ್ಕೆ ಭೇಟಿ ನೀಡಿ ಮನೆಯವರಿಗೆ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುವ ಬಗ್ಗೆ ಹೇಳಿದರು ಮತ್ತೆ ಇನ್ನಷ್ಟು ಜಾಗದ ಮಣ್ಣನ್ನು ತೆಗೆದು ತಮ್ಮ ಇಷ್ಟವನ್ನು ಪ್ರದರ್ಶಿಸಿದ್ದಾರೆ.

ಅಲ್ಲದೆ ಸುಳ್ಯ ನ.ಪಂ ವ್ಯಾಪ್ತಿಯಲ್ಲಿ ಮನೆ ನಿವೇಶನ ಇಲ್ಲದ ಎಷ್ಟೋ ಮಂದಿ ನ.ಪಂ.ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಹೀಗಿರುವಾಗ ಅರ್ಜಿದಾರರಿಗೆ ಮೊದಲು ಜಾಗ ಕೊಡುವ ಬದಲು ಜಾಗ,ಮನೆ ಸೌಕರ್ಯ ಇರುವವರಿಗೆ ಮತ್ತೆ ಮತ್ತೆ ಅವಕಾಶ ಕೊಡುವುದು ಸರಿಯಲ್ಲ, ಅದೇ ರೀತಿ ಮನೆ ನಿವೇಶನಕ್ಕೆ ನ,ಪಂ ನಲ್ಲಿ ದಳಿತರು ಹಾಕಿರುವ ಅರ್ಜಿಯನ್ನು ತಕ್ಷಣ ಪರಿಶೀಲಿಸಿ ಅವರಿಗೆ ಮನೆಯನ್ನು ಒದಗಿಸಿ ಕೊಡಬೇಕಾಗಿದೆ. ಅದೇ ರೀತಿ ಈ ಅತಕ್ರಮಣ ನಡೆದ ಜಾಗದಲ್ಲಿ ಮತ್ತೆ ಕೆಲಸ ಮುಂದುವರೆಸಿದರೆ ಎಲ್ಲರೂ ಸೇರಿ ಸರಕಾರಿ ಜಾಗದಲ್ಲಿ ಇದೇ ರೀತಿ ಮನೆ ಕಟ್ಟುವಂತಹ ಕೆಲಸವನ್ನು ನಾವು ಕೂಡ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published.