ಹರಿವು ನಿಲ್ಲಿಸಿದ ಸುಳ್ಯದ ಜೀವನದಿ ಪಯಸ್ವಿನಿ
ಸುಳ್ಯ: ಸುಳ್ಯದ ಜೀವನದಿ ಪಯಸ್ವಿನಿಯು ಹರಿವು ನಿಲ್ಲಿಸಿದ್ದು ಇದೀಗ ಕಾಂತಮಂಗಲ, ದೊಡ್ಡೆರಿ ಹಾಗೂ ಬಸವನಪಾದೆಯ ಸುಮಾರು 125 ಮನೆಗಳಿಗೆ ಕಳೆದ ಕೆಲ ದಿನಗಳಿಂದ ನೀರು ವ್ಯತ್ಯಯವಾಗಿತ್ತು. ಇದನ್ನು ಸರಿ ಪಡಿಸಲು ಹಲವಾರು ವಿಧಗಳಲ್ಲಿ ಪ್ರಯತ್ನಿಸಿದ್ದರು ಅಷ್ಟರಲ್ಲಾಗಲೇ ಚುನಾವಣೆ ಘೋಷಣೆ ಆದ ಹಿನ್ನಲೆಯಲ್ಲಿ ಟ್ಯಾಂಕರ್ ಹಾಗೂ ಪಂಚಾಯತ್ ವಾಹನದಲ್ಲಿ ಕೆಲ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದು ಅದು ಕೂಡಾ ಕಷ್ಟಾ ಸಾಧ್ಯವಾದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತ್ಯವತಿ ಬಸವನಪಾದೆ ತಮ್ಮದೇ ಖಾಸಗಿ ಕೊಳವೆ ಬಾವಿಯಿಂದ ನೇರವಾಗಿ ಬಸವನಪಾದೆಯಲ್ಲಿ ಇರುವ ಸುಮಾರು ಎಪ್ಪತೈದು ಸಾವಿರ ಸಾಮರ್ಥ್ಯದ ಟ್ಯಾಂಕ್ ಗೆ ದಿನದಲ್ಲಿ ನಾಲ್ಕು ಗಂಟೆಗಳಕಾಲ ನೀರು ಹಾಕಿ ತುಂಬಿಸಿ ಪಂಪು ಚಾಲಕರ ಮುಖೇನ ಪ್ರತಿ ಮನೆಗಳಿಗೆ ನೀರು ತಲುಪಿಸುವ ಕೆಲಸವನ್ನು ಕುದ್ದಾಗಿ ತಾವೇ ಮಾಡಿದ್ದು ಇದೀಗ ನಿರಾಳರಾಗಿದ್ದಾರೆ ಗ್ರಾಮದ ಜನತೆ.