ಸುರತ್ಕಲ್ ಅಕ್ರಮ ಟೋಲ್ ಬಂದ್ : ಹೋರಾಟಗಾರರ ವಿಜಯೋತ್ಸವ

ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಕಳೆದ 35 ದಿನಗಳಿಂದ ನಡೆಯುತ್ತಿದ್ದ ಆಹೋರಾತ್ರಿ ಹೋರಾಟವು ಬುಧವಾರ ರಾತ್ರಿ ಮುಕ್ತಾಯಗೊಂಡಿದ್ದು, ಹೋರಾಟ ಯಶಸ್ವಿಯಾದ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯ ನಾಯಕರು ಹಾಗೂ ಕಾರ್ಯಕರ್ತರು ಗುರುವಾರದಂದು ಸುರತ್ಕಲ್ ಧರಣಿ ವೇದಿಕೆಯಲ್ಲಿ ವಿಜಯೋತ್ಸವ ಆಚರಿಸಿದರು.

ಸಾಮೂಹಿಕ ಹೋರಾಟದ ಫಲವಾಗಿ ಸುರತ್ಕಲ್ ಅಕ್ರಮ ಟೋಲ್ ಮುಚ್ಚುವಂತಾಯಿತು, ದೇಶದಲ್ಲಿ ಇರುವ ಎಲ್ಲಾ ಅಕ್ರಮ ಟೋಲ್ ಗಳ ಮುಚ್ಚುಗಡೆಗೆ ಈ ಹೋರಾಟ ದಿಕ್ಸೂಚಿಯಾಗಿದೆ ಎಂದು ಹೋರಾಟಗಾರರು ಅಭಿಪ್ರಾಯಪಟ್ಟರು.

ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ , ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ , ಮಾಜಿ ಶಾಸಕರಾದ ಮೊಯ್ದೀನ್ ಬಾವಾ, ಐವಾನ್ ಡಿಸೋಜಾ , ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆÀಟ್ಟಿ , ಸಿ.ಪಿ.ಐ ಮುಖಂಡ ಶೇಖರ್ , ಡಿ.ಎಸ್.ಎಸ್ ಮುಖಂಡ ಎಂ. ದೇವದಾಸ್ , ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ , ಯಶವಂತ ಮರೋಳಿ , ಸಂತೋಷ್ ಬಜಾಲ್ , ಇಮ್ತಿಯಾಜ್, ಸುನಿಲ್ ಕುಮಾರ್ ಬಜಾಲ್ , ಬಿ.ಎಂ.ಭಟ್ , ಮಮಮ್ಮದ್ ಕುಂಜತ್ತಬೈಲ್, ಪುರುಷೋತ್ತಮ ಚಿತ್ರಾಪುರ, ಶಾಲೆಟ್ ಪಿಂಟೋ , ಚಂದ್ರಕಲಾ ಡಿ.ರಾವ್ , ಜಯಂತಿ ಶೆಟ್ಟಿ, ಪ್ರಮೀಳಾ ದೇವಾಡಿಗ , ಮಂಜುಳಾ ವೈ ನಾಯಕ್ , ಸುಮತಿ ಹೆಗಡೆ, ಅಸುಂತಾ ಡಿಸೋಜಾ , , ಭಾರತಿ ಬೋಳಾರ್ , ರಮಣಿ ಮುಡಬಿದ್ರೆ, ಪ್ರಮೀಳಾ ಶಕ್ತಿನಗರ , ವಿಳಾಸಿನಿ, ಪ್ರತಿಭಾ ಕುಳಾಯಿ , ರೇವಂತ್ ಕದ್ರಿ , ವಿನಿತ್ ದೇವಾಢಿಗ, ಹುಸೈನ್ ಕಾಟಿಪಳ್ಳ, ಶ್ರೀನಾಥ್ ಕಾಟಿಪಳ್ಳ, ಮಾಜಿ ಮೇಯರ್ ಅಶ್ರಫ್ , ಬಸ್ ಮಾಲಿಕರ ಸಂಘದ ಅಧ್ಯಕ್ಷ ಕಿಶನ್ ಹೆಗ್ಡೆ , ಟ್ಯಾಕ್ಸಿ ಮಾಲಕರ ಸಂಘದ ಅಧ್ಯಕ್ಷ ದಿನೇಶ್ ಕುಂಪಲ , ಶೂಬೋಧ್ ರಾವ್ ಕಾರ್ಕಳ , ವಿಟ್ಲ ಮುಹಮ್ಮದ್ ಕುಂಞ, ಬಾಲಕೃಷ್ಣ ಶೆÀಟ್ಟಿ , ಶಾಹುಲ್ ಹಮೀದ್ ಮೊದಲಾದವರು ಭಾಗವಹಿಸಿದ್ದರು.
