ನಾನೇ ನಾಗವಲ್ಲಿ, ಮೊನ್ನೆ ನೋಡಿದ್ದು ಕಾಂತಾರ ಪಾರ್ಟ್ 2 ಅಲ್ಲ 3″

ಸುರತ್ಕಲ್: “ನಾನೇ ಒರಿಜಿನಲ್ ನಾಗವಲ್ಲಿ, ಮೊನ್ನೆ ಸುರತ್ಕಲ್ ಟೋಲ್ ಗೇಟ್ ಬಳಿ ನೀವು ನೋಡಿದ್ದು ಕಾಂತಾರ ಚಿತ್ರದ ಎರಡನೇ ಭಾಗವಲ್ಲ ಮೂರನೇ ಭಾಗ” ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಮಾಧ್ಯಮಗಳ ಮುಂದೆ ಹೇಳಿದರು. ಸುರತ್ಕಲ್ ಟೋಲ್ ವಿರೋಧಿ ಪ್ರತಿಭಟನೆ ಸಂದರ್ಭದ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಿನಿಮಾಗಳ ಟೈಟಲ್ ಕೊಟ್ಟು ಟ್ರೋಲ್ ಮಾಡಲಾಗುತ್ತಿದ್ದು ಈ ಕುರಿತು ಮಾತಾಡಿದ ಪ್ರತಿಭಾ ಅವರು, “ಟ್ರೋಲ್ ಒಳ್ಳೆಯದು, ಅದರಿಂದ ನಮ್ಮಂತ ಹೋರಾಟಗಾರರಿಗೆ ಸ್ಫೂರ್ತಿ ಸಿಗುತ್ತದೆ. ಆದರೆ ತಮ್ಮ ಮನೆಯಲ್ಲೂ ಹೆಣ್ಣುಮಕ್ಕಳು ಇರೋದನ್ನು ಮರೆತು ತೀರಾ ಅಸಹ್ಯವಾಗಿ ಟ್ರೋಲ್ ಮಾಡುವುದು ಬಿಜೆಪಿಗರ ಹೀನ ಸಂಸ್ಕೃತಿಯನ್ನು ತೋರಿಸುತ್ತದೆ. ನನ್ನ ವಿಡಿಯೋ ಬಿಜೆಪಿ ನಾಯಕರ ತರ ಲಂಚ ಮತ್ತು ಮಂಚಕ್ಕೆ ಸಂಬಂಧಿಸಿದ್ದಲ್ಲ, ಆದ್ದರಿಂದ ನಾನು ಅಂಜಿ ಕೂರುವ ಜಾಯಮಾನದವಳಲ್ಲ” ಎಂದರು.

“ಹಲವು ವರ್ಷಗಳಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡಿದ್ದು ನನ್ನ ಪಕ್ಷ ಮಾತ್ರವಲ್ಲದೆ ಜನಪರ ಸಮಸ್ಯೆಗಳ ವಿರುದ್ಧ ನನ್ನ ನಿಲುವುಗಳನ್ನು ಬಲವಾಗಿ ಪ್ರತಿಪಾದಿಸುತ್ತ ಬಂದಿದ್ದೇನೆ. ನಾನು ಇದರ ಜೊತೆಯಲ್ಲಿ “ಕುಳಾಯಿ ಫೌಂಡೇಶನ್” ಹೆಸರಿನ ಸಂಘಟನೆಯನ್ನು ಸ್ಥಾಪಿಸಿ ಈ ಮೂಲಕ ಬಡಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು, ಯುವಜನತೆಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಶ್ರಮಿಸುತ್ತಾ ಬಂದಿದ್ದೇನೆ. ಇತ್ತೀಚಿಗೆ ನಡೆದ ಟೋಲ್ ಹೋರಾಟದಲ್ಲಿ ಪೆÇಲೀಸ್ ಬಂಧನ ಸಂದರ್ಭ ರಸ್ತೆಯಲ್ಲಿ ಧರಣಿ ಕೂತಿದ್ದ ನನ್ನ ಸೀರೆ ಸೆರಗು ಜಾರಿದ್ದು ನಾನು “ಸೀರೆ ಮುಟ್ಟಬೇಡಿ” ಎಂದಿದ್ದ ವಿಡಿಯೋ ಎಡಿಟ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ “ಕಾಂತಾರ ಪಾರ್ಟ್ 2” “ನಾಗವಲ್ಲಿ” ಎಂದೆಲ್ಲ ಪೆÇೀಸ್ಟ್ ಕ್ರಿಯೇಟ್ ಮಾಡಿ ಮಾನಹಾನಿ ಮಾಡಲಾಗುತ್ತಿದೆ. ಮಹಿಳೆಯರು, ಹೆಣ್ಣುಮಕ್ಕಳ ಬಗ್ಗೆ ಭಾರೀ ಗೌರವ, ಅಭಿಮಾನ ಹೊಂದಿರುವ ಬಿಜೆಪಿಗರು ಒಂದು ಹೆಣ್ಣಿನ ಬಗ್ಗೆ ತೀರಾ ಕೆಟ್ಟ ರೀತಿಯ ಕಮೆಂಟ್ಸ್, ಪೆÇೀಸ್ಟ್ ಅವರ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಲ್ಲವೇ?” ಎಂದು ಪ್ರಶ್ನಿಸಿದರು.

“ಟೋಲ್ ಗೇಟ್ ಹೋರಾಟದಲ್ಲಿ ಪೆÇಲೀಸ್ ಬಂಧನಕ್ಕೊಳಗಾಗುವ ಸಂದರ್ಭದಲ್ಲಿ ಪೆÇಲೀಸ್ ಸಿಬ್ಬಂದಿ ತಳ್ಳಾಡುವಾಗ ನಾನು ರಸ್ತೆಯಲ್ಲಿ ಬಿದ್ದಿದ್ದು ನನ್ನ ಸೀರೆ ಸೆರಗು ಜಾರಿದ್ದ ವೇಳೆ ಮತ್ತೆ ನನ್ನನ್ನು ಎಳೆದೊಯ್ಯಲು ಮುಂದಾದಾಗ ‘ಸೀರೆಗೆ ಕೈ ಹಾಕಬೇಡಿ’ ಎಂದು ಬೊಬ್ಬೆ ಹಾಕಿದ್ದೇನೆ. ಇದು ಮಾಧ್ಯಮಗಳ ಎದುರಲ್ಲೇ ನಡೆದಿದ್ದು ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ. ಹೀಗಿರುವಾಗ ಒಬ್ಬ ಹೆಣ್ಣುಮಗಳು ಅಸಹಾಯಕ ಸಂದರ್ಭದಲ್ಲಿ ತನ್ನ ಮಾನ ರಕ್ಷಣೆ ಮಾಡುವ ವಿಡಿಯೋ ಎಡಿಟ್ ಮಾಡಿ ಅದಕ್ಕೆ ಸಿನಿಮಾ ಟೈಟಲ್ ಕೊಡುವುದು ವಿಪರ್ಯಾಸ” ಎಂದರು.
“ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಅವಹೇಳನಕಾರಿ ಪೆÇೀಸ್ಟ್ ಮಾಡಿದವರ ಮನೆಗೆ ರಾತ್ರಿ 12 ಗಂಟೆಗೆ ಹೋಗಿ ನಾಗವಲ್ಲಿ ಅವತಾರ ತಾಳಿದ್ದೇನೆ. ಇದೇನೂ ನನಗೆ ಹೊಸದಲ್ಲ. ಈ ಬಾರಿಯೂ ಕಿಡಿಗೇಡಿಗಳ ಹಾರಾಟವನ್ನು ಕಾನೂನು ಪ್ರಕಾರ ನಿಲ್ಲಿಸುತ್ತೇನೆ” ಎಂದರು.

ಕಮಿಷನರ್ ಗೆ ದೂರು!
ಕೆ. ಆರ್. ಶೆಟ್ಟಿ ಅಡ್ಯಾರ್ ಪದವು, ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ ಹಾಗೂ ಇತರರ ವಿರುದ್ಧ ಪ್ರತಿಭಾ ಅವರು ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ದೂರು ನೀಡಿದ್ದಾರೆ. ಮಾನನಷ್ಟ ದೂರು ದಾಖಲಿಸಿದ್ದು ಕಮಿಷನರ್ ಅವರು ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಒಂದೊಮ್ಮೆ ಆರೋಪಿಗಳು ಬಿಜೆಪಿ ನಾಯಕರ ರಕ್ಷಣೆ ಪಡೆದರೆ ಮುಂದೆ ಕಾನೂನು ಹೋರಾಟ ಮಾಡುವುದಾಗಿ ಪತ್ರಿಕೆಗೆ ಹೇಳಿದ್ದಾರೆ.

Related Posts

Leave a Reply

Your email address will not be published.