ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ನಡೆದ ಕೊಲೆ ?

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಎರಡು ದಿನದ ಬಳಿಕ ಸುರತ್ಕಲ್ ನಲ್ಲಿ ಕೊಲೆಯಾದ ಫಾಝಿಲ್ ಪ್ರಕರಣದಲ್ಲಿ ನಗರ ಪೆÇಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳವಾರ ಉಡುಪಿ ಉದ್ಯಾವರ ಸಮೀಪ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಜುಲೈ 28ರಂದು ಕಾರಿನಲ್ಲಿ ಬಂದ ಫಾಝಿಲ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಡಿಸಿಪಿ ಅನುಷ್ ಕುಮಾರ್ ನೇತೃತ್ವದಲ್ಲಿ ಏಳೆಂಟು ತಂಡದಲ್ಲಿ ತನಿಖೆ ಮಾಡಲಾಗಿತ್ತು. ಹತ್ಯೆಗೆ ಬಳಿಸಿದ ಇಯಾನ್ ಕಾರಿನ ಮಾಲಕನಿಂದ ಆರೋಪಿಗಳ ಮಾಹಿತಿ ಸಿಕ್ಕಿತು. ಕೊಲೆಯ ಸಂಚಿನ ಬಗ್ಗೆ ಮಾಹಿತಿ ಇದ್ದರೂ ಹೆಚ್ಚು ಹಣದಾಸೆಗೆ ಅಜಿತ್ ಕ್ರಾಸ್ತಾ ತನ್ನ ಕಾರನ್ನು ಆರೋಪಿಗಳಿಗೆ ಬಾಡಿಗೆಗೆ ನೀಡಿದ್ದ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನ ಮಾಲಕ ಸೇರಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಜಪೆಯ ಸುಹಾಸ್ ಶೆಟ್ಟಿ, ಮೋಹನ್ ಆಲಿಯಾಸ್ ಮೋಹನ್ ಸಿಂಗ್, ಕಾಟಿಪಳ್ಳ ನಿವಾಸಿ ಶ್ರೀನಿವಾಸ್, ಕುಳಾಯಿ ನಿವಾಸಿ ಗಿರಿಧರ್, ಕಾಟಿಪಳ್ಳ ನಿವಾಸಿಗಳಾದ ಅಭಿಷೇಕ್ ಮತ್ತು ದೀಕ್ಷಿತ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಯುಕ್ತರು ಮಾಹಿತಿ ನೀಡಿದರು.

ಸುಹಾಸ್ ಪ್ಲ್ಯಾನ್: ಕೃತ್ಯಕ್ಕೆ ಸುಹಾಸ್ ಶೆಟ್ಟಿ ಮತ್ತು ಅಭಿಷೇಕ್ ಯೋಜನೆ ರೂಪಿಸಿದ್ದು, ಅನಂತರ ಉಳಿದವರನ್ನು ಸೇರಿಸಿಕೊಂಡಿದ್ದಾರೆ. ಯಾರಿಗೆ ಹೊಡೆಯುವುದು ಎಂದು ಚರ್ಚಿಸಿದಾಗ ಫಾಝಿಲ್ ಗೆ ಹೊಡೆಯಲು ನಿರ್ಧರಿಸಿದ್ದಾರೆ. ಕೃತ್ಯಕ್ಕೆ ಮೂರು ತಲವಾರು ಉಪಯೋಗಿಸಿದ್ದಾರೆ. ಕೃತ್ಯ ನಡೆಸಿದ ದಿನ ಫಾಝಿಲ್ ಗಾಗಿ ಜಂಕ್ಷನ್ ನಲ್ಲಿ ಓಡಾಡಿದ್ದರು. ನಂತರ ಅಂಗಡಿ ಬಳಿ ಫಾಝಿಲ್ ಸಿಕ್ಕಾಗ ಆತನ ಮೇಲೆ ಸುಹಾಸ್, ಮೋಹನ್ ಮತ್ತು ಅಭಿಷೇಕ್ ನೇರವಾಗಿ ದಾಳಿ ನಡೆಸಿದ್ದಾರೆ.ಗುರುವಾರ ರಾತ್ರಿ ಕೃತ್ಯ ನಡೆಸಿದ ಆರೋಪಿಗಳು ಪಲಿಮಾರು ರಸ್ತೆಯ ಮೂಲಕ ಪಡುಬಿದ್ರಿ ಸಮೀಪದ ಇನ್ನಾಕ್ಕೆ ಹೋಗಿ ಅಲ್ಲಿ ಕಾರನ್ನಿಟ್ಟು, ಅಲ್ಲಿಂದ ಬೇರೆ ಕಾರಿನಲ್ಲಿ ತೆರಳಿದ್ದರು.

.praveen nettar

ಸುರತ್ಕಲ್ ನಲ್ಲಿ ಬೇರೆಯವರನ್ನು ಹತ್ಯೆ ಮಾಡಲು ಹೋಗಿ ಫಾಜಿಲ್ ಕೊಲೆ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈ ಹಂತಕರು ಫಾಝಿಲ್ ಗೆ ಗುರಿ ಇಟ್ಟಿದ್ದರು. ಕೃತ್ಯಕ್ಕೆ ಮೊದಲು ಚರ್ಚೆಯ ವೇಳೆ ಆರರಿಂದ ಏಳು ಜನಕ್ಕೆ ಹೊಡೆಯುವ ಬಗ್ಗೆ ನಿರ್ಧರಿಸಿ ಅಂತಿಮವಾಗಿ ಫಾಝಿಲ್ ಗೆ ಗುರಿ ಇಟ್ಟಿದ್ದರು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದರು.

ಈ ಆರೋಪಿಗಳು ಫಾಝಿಲ್ ನನ್ನೇ ಯಾಕೆ ಟಾರ್ಗೆಟ್ ಮಾಡಿದ್ದರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಪ್ರಮುಖ ಆರೋಪಿ ಸುಹಾಸ್ ಮೇಲೆ ಒಂದು ಕೊಲೆ ಸಹಿತ ನಾಲ್ಕು ಪ್ರಕರಣಗಳಿವೆ.

ಬೆಳ್ಳಾರೆ ಪ್ರವೀಣ್ ಕೊಲೆ ಘಟನೆ ನಡೆದ ದಿನ ರಾತ್ರಿ ಮತ್ತು ಮರುದಿನ ಯಾರಿಗಾದರೂ ಹೊಡೆಯಬೇಕೆಂದು ಬಂಧಿತ ಆರೋಪಿಗಳು ನಿರ್ಧರಿಸಿದ್ದರು. ಆದರೆ ಪ್ರವೀಣ್ ಕೊಲೆಗೆ ಪ್ರತೀಕಾರಕ್ಕಾಗಿಯೇ ನಡೆದಿದೆ ಎಂಬುದನ್ನು ಈಗ ಸ್ಪಷ್ಟವಾಗಿ ಹೇಳಲಾಗದು ಎಂದು ಕಮಿಷನರ್ ಹೇಳಿದರು.

Related Posts

Leave a Reply

Your email address will not be published.