ಓಮಿನಿ ಕಾರಿನ ಮೇಲೆ ಸರಕು ಸಾಗಾಟದ ಲಾರಿ ಪಲ್ಟಿ ಸುರತ್ಕಲ್‍ನ ಕುಳಾಯಿಯಲ್ಲಿ ಘಟನೆ ಘಟನೆ

ಸುರತ್ಕಲ್‍ನ ಕುಳಾಯಿಯಲ್ಲಿ ಇಂದು ಮಧ್ಯಾಹ್ನ ಓಮಿನಿ ಮೇಲೆ ಸರಕು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಓಮಿನಿ ಚಾಲಕನನ್ನ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಓಮಿನಿ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಸುರತ್ಕಲ್ ಉತ್ತರ ಟ್ರಾಫಿಕ್ ಫೋಲಿಸರು ಆಗಮಿಸಿ ಸ್ಕ್ರೈನ್ ಸಹಾಯದಿಂದ ಲಾರಿಯನ್ನು ಎತ್ತಿ ಓಮಿನಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೇರವಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಗೋಕುಲ ನಗರ ನಿವಾಸಿ ಲೋಕೇಶ್ ಕುಲಾಲ್ (38) ಎಂದು ತಿಳಿದು ಬಂದಿದೆ. ಲಾರಿ ಚಾಲಕನ ಅಜಾಗರೂಕತೆಯೇ ಅವಘಡಕ್ಕೆ ಕಾರಣ ಎನ್ನಲಾಗಿದೆ.ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಲೋಕೇಶ್ ಅವರನ್ನು ರಕ್ಷಿಸಲಾಗಿದೆ.ಸ್ಕೂಟರ್ ಸವಾರರೊಬ್ಬರು ಅವಘಡದಲ್ಲಿ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Related Posts

Leave a Reply

Your email address will not be published.