ಸುರತ್ಕಲ್ ಟೋಲ್ ಗೇಟ್ ಪಾಸ್ಟ್ ಟ್ಯಾಗ್‍ನಲ್ಲಿ ನಗದು ಕಟ್ಟ್ : ಕಾರು ಮಾಲಿಕರಿಂದ ದೂರು

ಸುರತ್ಕಲ್ ಟೋಲ್ ಗೇಟಲ್ಲಿ ವಾಹನ ಪಾಸ್ ಆಗದಿದ್ದರೂ, ಪಾಸ್ಟ್ ಟ್ಯಾಗ್ ಮೂಲಕ ಹಣ ವಸೂಲಿ ನಡೆದ ಬಗ್ಗೆ ಕಾರು ಮಾಲಿಕರು ಪೊಲೀಸ್ ದೂರು ನೀಡಿದ್ದಾರೆ.
ಕಾಪು ತಾಲೂಕಿನ ಎಲ್ಲೂರು ನಿವಾಸಿ ಲಕ್ಷ್ಮಣ್ ಎಂಬವರೇ ಟೋಲ್ ಗೇಟ್ ನ ವಂಚನೆಗೆ ಒಳಗಾದವರು, ಇವರು ಎಲ್ಲೂರಿನ ಐಟಿಐ ಉದ್ಯೋಗಿ, ಸೋಮವಾರ ಉಚ್ಚಿಲ ಹೊರತು ಪಡಿಸಿ ಕಾರಿನಲ್ಲಿ ಎಲ್ಲೂ ಪ್ರಯಾಣಿಸಿಲ್ಲ, ಆದರೆ ರಾತ್ರಿ ಏಳರ ಸುಮಾರಿಗೆ ಮೊಬೈಲ್ ಗೆ ಮ್ಯಾಸೇಜ್ ವೊಂದು ಬಂದಿದ್ದು, ಸುರತ್ಕಲ್ ಟೋಲ್ ಗೇಟ್ ನಲ್ಲಿ ಪಾಸ್ಟ್ ಟ್ಯಾಗ್ ಮೂಲಕ 60ರೂ ಕಡಿತಗೊಂಡಿರುವ ಬಗ್ಗೆ, ಈ ಬಗ್ಗೆ ಆತಂಕಗೊಂಡ ಕಾರು ಮಾಲಿಕರು ಪಡುಬಿದ್ರಿ ಠಾಣೆಗೆ ದೂರು ನೀಡಲು ಬಂದರೆ ಸುರತ್ಕಲ್ ಠಾಣೆಯಲ್ಲಿ ದೂರು ನೀಡಲು ಸಲಹೆ ನೀಡಿದ್ದಾರೆ. ನಮ್ಮ ವಾಹನ ಟೋಲ್ ಗೇಟ್ ಪ್ರವೇಶ ಕಾಣದೆಯೆ ನಮ್ಮ ಖಾತೆಯಿಂದ ಹಣ ಲಪಟಾಯಿಸಲಾಗಿದೆ, ಇದೆ ರೀತಿ ನಮ್ಜ ವಾಹನ ನೋಂದಾಣಿ ಸಂಖ್ಯೆಯನ್ನು ದುರುಪಯೋಗ ಪಡಿಸಿಕೊಂಡರೆ ನಾವು ಮಾಡದ ತಪ್ಪಿಗೆ ದಂಡ ತೆರ ಬೇಕಾದೀತು ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದಿದ್ದಾರೆ.

ಇಂಥಹ ಪ್ರಕರಣಗಳು ಟೋಲ್ ಗೇಟ್ ಗಳಲ್ಲಿ ಪದೇ ಪದೇ ದಾಖಲಾಗುತ್ತಿದ್ದು, ಜನ ಅನಗತ್ಯವಾಗಿ ಹಣ ಕಳಕೊಳ್ಳುತ್ತಿದ್ದಾರೆ. ಕೆಲವರು ಮ್ಯಾಸೇಜ್ ಬಂದರೂ ನೋಡುವುದಿಲ್ಲ, ಹಲವರು ನೋಡಿದರೂ ಅದರ ಹಿಂದೆ ಹೋಗಿ ಸಮಯ ವ್ಯರ್ಥ ಎಂಬ ನಿಟ್ಟಿನಲ್ಲಿ ಮೌನವಹಿಸುತ್ತಾರೆ. ಹೊರ ರಾಜ್ಯ- ಜಿಲ್ಲೆಯ ವಾಹನಗಳಾದರೆ ಮತ್ತೆ ಅದೇ ಪ್ರದೇಶಕ್ಜೆ ಬಂದು ವಿಚಾರಿಸಲು ದೂರು ನೀಡಲು ಅಸಾಧ್ಯ, ಒಂದು ಕಡೆ ಅಕ್ರಮ ಟೋಲ್ ಗೇಟ್ ಎಂಬ ಹಣೆಪಟ್ಡಿ ಹೊತ್ತುಕೊಂಡಿರುವ ಸುರತ್ಕಲ್ ಟೋಲ್ ಗೇಟ್ ನಲ್ಲಿ ಮುಳುಗುವ ಹಂತದಲ್ಲಿ ಅಕ್ರಮದ ಮೇಲೆ ಅಕ್ರಮ ನಡೆಸಲು ಮುಂದಾದಂತಿದೆ ಎನ್ನುತ್ತಾರೆ ಜನ.
