ಹೆಜಮಾಡಿ ಟೋಲ್‍ನೊಂದಿಗೆ ವಿಲೀನಗೊಳಿಸಿದ್ರೆ ಉಗ್ರಹೋರಾಟ : ಶೇಖರ್ ಹೆಜಮಾಡಿ ಎಚ್ಚರಿಕೆ

ಪಡುಬಿದ್ರಿ: ಸುರತ್ಕಲ್ ಟೋಲ್ ಪ್ಲಾಜಾದಲ್ಲಿ ಪಡೆಯುತ್ತಿದ್ದ ಟೋಲನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ವಿಲಿನ ಗೊಳಿಸಿದ್ದಲ್ಲಿ ವಿವಿಧ ಸಂಘ ಸಂಸ್ಥೆಗಳ ಮೂಲಕ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂಬುದಾಗಿ ಟೋಲ್ ಹೋರಾಟ ಸಮಿತಿಯ ಪ್ರಮುಖರೂ, ದಲಿತ ಮುಖಂಡರು ಆದ ಶೇಖರ್ ಹೆಜಮಾಡಿ ಎಚ್ಚರಿಸಿದ್ದಾರೆ.
ಹೆಜಮಾಡಿ ಟೋಲ್ ಪ್ಲಾಜಾ ನಿರ್ಮಾಣದವರಗೆ ಮಾತ್ರ ಸುರತ್ಕಲ್ ಟೋಲ್ ಎಂಬುದಾಗಿ ತಾತ್ಕಾಲಿಕ ನೆಲೆಯಲ್ಲಿ ನಿರ್ಮಾಣಗೊಂಡಿದ್ದ ಸುರತ್ಕಲ್ ಟೋಲನ್ನು ಇದೀಗ ಸಂಸದರು ಸಹಿತ ಕೆಲ ಶಾಸಕರು ತಮ್ಮ ಆದಾಯದ ಮೂಲವನ್ನಾಗಿಸಿಕೊಂಡು ಬಡವರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಒಂದು ಟೋಲ್ ನಿಂದ ಮತ್ತೊಂದು ಟೋಲ್ ಗೇಟಿಗೆ 60ಕೀ.ಮೀ. ದೂರ ಅಂತರ ಇರ ಬೇಕಾಗಿದ್ದರೂ ಕೇವಲ ಹತ್ತು ಕೀ.ಮೀ. ಅಂತರದಲ್ಲಿ ಎರಡು ಕಡೆ ಟೋಲ್ ಗೇಟ್ ನಿರ್ಮಿಸಿ ಅಷ್ಟರಲ್ಲೇ ಅನಧಿಕೃತವಾಗಿ ಸುರತ್ಕಲ್ ಟೋಲ್ ನಲ್ಲಿ 400ಕೋಟಿ ರೂಪಾಯಿ ಸುಲಿಗೆ ನಡೆಸಲಾಗಿದೆ. ಅಷ್ಟಾಗಿಯೂ ಸಂದರು ಈ ಅನದಿಕೃತ ಟೋಲ್ ತೆರವಿಗೆ ಪ್ರಧಾನಿಗಳು ಕಾರಣ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವುದು ಹಾಸ್ಯಾಸ್ಪದ ವಾಗಿದೆ. ಒಂದು ಅನದಿಕೃತ ಟೋಲ್ ತೆರವಿಗೆ ಪ್ರಧಾನಿಗಳ ಪ್ರಯತ್ನ ಬೇಕೆ..? ಇಂಥಹ ಸಾಮಾನ್ಯ ಜ್ಞಾನವೂ ಇಲ್ಲದ ಸಂಸದರ ವರ್ತನೆಗೆ ಏನು ಹೇಳ ಬೇಕೊ ತಿಳಿಯದು. ಇದರ ಮಧ್ಯೆಯೂ ಸುರತ್ಕಲ್ ಟೋಲ್ ಗೇಟ್ ರದ್ದಾದರೆ ಸಂತ್ರಸ್ಥರಾಗುವ ಕೆಲ ಶಾಸಕರುಗಳು ಸುರತ್ಕಲ್ ಟೋಲ್ ಗೇಟ್ ಪರ ಬ್ಯಾಟಿಂಗ್ ನಡೆಸಿ ಹೆಜಮಾಡಿಯೊಂದಿಗೆ ವಿಲಿನಗೊಳಿಸಿ ತಮ್ಮ ಜೇಜು ತುಂಬಿಸಿಕೊಳ್ಳುವ ಯತ್ನ ನಡೆಯುತ್ತಿದ್ದಾರೆ, ಇವರ ಯಾವುದೇ ಕಾರಣಕ್ಕೆ ಪ್ರಯತ್ನ ಫಲ ಕಾಣದು ಇದರ ವಿರುದ್ಧ ಸಮರ ಸಾರಲು ಎಲ್ಲಾ ಸಂಘ ಸಂಸ್ಥೆಗಳು ಸನ್ನದ್ಧವಾಗಿದೆ ಎಂಬುದಾಗಿ ಎಚ್ಚರಿಸಿದ್ದಾರೆ.