ಸುರತ್ಕಲ್ ಟೋಲ್ ಗೇಟ್ : 5ನೇ ದಿನಕ್ಕೆ ಕಾಲಿಟ್ಟ ಧರಣಿ
ಸುರತ್ಕಲ್ ಅಕ್ರಮ ಟೋಲ್‍ಗೇಟ್ ವಿರುದ್ಧ ಅನಿರ್ಧಿಷ್ಟಾವಧಿ ಧರಣಿಯ 5ನೇ ದಿನಕ್ಕೆ ಕಾಲಿಟ್ಟಿದ್ದು, ಟೋಲ್ ತೆರವು ಹೋರಾಟಕ್ಕೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗಿದೆ. ಎರಡು ಜಿಲ್ಲೆಯ ಹಲವು ತಾಲೂಕುಗಳ ವಿವಿಧ ಸಂಘಟನೆಗಳ ಪ್ರಮುಖರು ಇಂದಿನ ಧರಣಿಯಲ್ಲಿ ಬೆಳಗ್ಗಿನಿಂದ ಪಾಲ್ಗೊಂಡಿದ್ದಾರೆ. ಹೋರಾಟ ಸಮಿತಿಗೆ ಇದರಿಂದ ಮತ್ತಷ್ಟು ಹುಮ್ಮಸು ದೊರಕಿದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಹೇಳಿದರು.
ಮತ್ತೊಂದೆಡೆ ಒಂದು ವಾರದಿಂದ ಕಾಣೆಯಾಗಿದ್ದ ಬಿಜೆಪಿ ಸಂಸದ, ಶಾಸಕರುಗಳು ಇಂದ ರಾಜ್ಯೋತ್ಸವದ ನಿಮಿತ್ತ ಅನಿವಾರ್ಯವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಳಿನ್ ಕುಮಾರ್ ಕಟೀಲ್ “ಹೋರಾಟವನ್ನು ನಾಟಕ ಎಂದು ಗೇಲಿ ಮಾಡಿದ್ದಾರೆ”. ಅವರ ಮನಸ್ಸು ಸ್ಥಿಮಿತಕ್ಕೆ ಬರಲಿ ಎಂದು ಹೋರಾಟ ಸಮಿತಿ ಹಾರೈಸುತ್ತದೆ. ನಮ್ಮ ಹೋರಾಟ ಆಳುವವರ ಇಂತಹ ಗೇಲಿಗಳಿಂದ ಬಲಗೊಳ್ಳುತ್ತದೆ ಹೊರತು ವಿಚಲಿತಗೊಳ್ಳುವುದಿಲ್ಲ.