ಐತಿಹಾಸಿಕ ಟೋಲ್ ತೆರವು ಹೋರಾಟದ ಸಿದ್ದತೆಗೆ ಮಂಗಳೂರು ನಗರ ಮಟ್ಟದ ಯಶಸ್ವಿ ಸಭೆ

ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗಾಗಿ ಅಕ್ಟೋಬರ್ 18ರಂದು ನೇರ ಕಾರ್ಯಾಚರಣೆ ಟೋಲ್ ಗೇಟ್ ಮುತ್ತಿಗೆ ಕಾರ್ಯಕ್ರಮದ ತಯಾರಿಗಾಗಿ ಮಂಗಳೂರು ನಗರ ಮಟ್ಟದ ಸಮಾನ ಮನಸ್ಕ ಸಂಘಟನೆಗಳ ಸಿದ್ದತಾ ಸಭೆಯು ನಗರದ ವುಡ್ ಲ್ಯಾಂಡ್ ಹೋಟೇಲ್ ನಲ್ಲಿ ನಡೆಯಿತು.


ತಾತ್ಕಾಲಿಕ ಅವಧಿಗೆ ಆರಂಭಗೊಂಡ ಸುರತ್ಕಲ್ ಟೋಲ್ ಗೇಟ್ ಜನರ ಪ್ರಬಲ ವಿರೋಧದ ಹೊರತಾಗಿಯೂ ಏಳು ವರುಷ ಅಕ್ರಮವಾಗಿ ಪೂರೈಸಿದೆ. ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ನಿರಂತರ ಹೋರಾಟ ನಡೆದು ಇತ್ತೀಚೆಗೆ ಸಪ್ಟೆಂಬರ್ ತಿಂಗಳಲ್ಲಿ ನಡೆದ ಸಾಮೂಹಿಕ ಧರಣಿಯ ಸಂದರ್ಭ ಸ್ವತಃ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಕೆಲವೇ ದಿನಗಳಲ್ಲಿ ಸುರತ್ಕಲ್ ಟೋಲ್ ತೆರವುಗೊಳ್ಳಲಿದೆ ಎಂದು ತಿಳಿಸಿದರೂ ಈ ಬಗ್ಗೆ ಯಾವುದೇ ಬೆಳವಣೆಗೆಗಳು ಕಾಣದೆ ತೆರವು ಪ್ರಕ್ರಿಯೆ ಹಳೆಯ ಅನುಭವದಂತೆ ಚಲಿಸದೆ ನಿಂತಿದೆ. ಈ ಹಿನ್ನಲೆಯಲ್ಲಿ ಹೋರಾಟ ಸಮಿತಿಯ ತೀರ್ಮಾನದಂತೆ ಅಕ್ಟೋಬರ್18ರಂದು ನೇರ ಕಾರ್ಯಾಚರಣೆ, ಟೋಲ್ ಗೇಟ್ ಮುತ್ತಿಗೆ ಯಶಸ್ವಿಗೊಳಿಸಲು ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಸಮಾನ ಮನಸ್ಕ ಸಂಘಟನೆಗಳು ಒಮ್ಮತದ ತೀರ್ಮಾನವನ್ನು ಕೈಗೊಂಡಿದೆ. ಇನ್ನು ಪ್ರಚಾರದ ಭಾಗವಾಗಿ ನಗರದ ವಿವಿಧ ಭಾಗದ ಪ್ರದೇಶ ಮಟ್ಟದಲ್ಲಿ ಸಭೆಗಳನ್ನು ನಡೆಸುವುದು, ವ್ಯಾಪಕ ಕರಪತ್ರಗಳನ್ನು ಹಂಚುವುದು, ಸ್ಥಳೀಯ ಸಂಘ ಸಂಸ್ಥೆಗಳ, ಯುವಕ ಮಂಡಲಗಳು ಕಾರ್ಯಕ್ರಮಕ್ಕೆ ಬೆಂಬಲಿಸಿ ಭಾಗವಹಿಸುವಂತೆ ಪ್ರೇರೇಪಿಸುವುದು ಹಾಗೂ ಇದೇ ಬರುವ ಅಕ್ಟೋಬರ್ ೧೦ರಂದು ಮಂಗಳೂರು ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳುವ ತೀರ್ಮಾನವನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಕಾರ್ಯಕ್ರಮದ ರೂಪುರೇಷೆಯ ಕುರಿತು ಮಾತನಾಡಿದರು. ಸಾಮಾಜಿಕ ಹೋರಾಟಗಾರ ಎಂಜಿ ಹೆಗಡೆ, ಜನಪರ ಚಿಂತಕರಾದ ರೋಯ್ ಕ್ಯಾಸ್ಟಲಿನೋ, ಹಿರಿಯ ವಕೀಲರಾದ ಯಶವಂತ ಮರೋಳಿ, ರಾಮಚಂದ್ರ. ಬಿ, ಕಾರ್ಪೊರೇಟರ್ ಲತೀಫ್ ಕಂದುಕ, ಮಾಜಿ ಕಾರ್ಪೊರೇಟರ್ ಗಳಾದ ಪ್ರಕಾಶ್ ಸಾಲ್ಯಾನ್, ದಯಾನಂದ ಶೆಟ್ಟಿ, ಅಝೀಝ್ ಕುದ್ರೋಳಿ, ಜಯಂತಿ ಬಿ ಶೆಟ್ಟಿ , ಸಿಪಿಐ ಜಿಲ್ಲಾ ನಾಯಕರಾದ ಬಿ ಶೇಖರ್, ವಿ.ಕುಕ್ಯಾನ್, ಸೀತಾರಾಮ ಬೇರಿಂಜ, ಕರುಣಾಕರ್, ಪುಷ್ಪಾ ರಾಜ್ ಬೋಳೂರು, ಅPIಒ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಡಾ.ಕ್ರಷ್ಣಪ್ಪ ಕೊಂಚಾಡಿ, ಜೆಡಿಎಸ್ ಮುಖಂಡರಾದ ಸುಮತಿ ಎಸ್ ಹೆಗ್ಡೆ, ಅಲ್ತಾಫ್ ತುಂಬೆ, ಡಿವೈಎಫ್‌ಐ ಮುಖಂಡರಾದ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ನೌಷಾದ್ ಬೆಂಗರೆ, ಯುವ ವಕೀಲರಾದ ನಿತಿನ್ ಕುತ್ತಾರ್, ಚರಣ್ ಶೆಟ್ಟಿ, ಸುನಂದಾ ಕೆ, ಸಾಮಾಜಿಕ ಚಿಂತಕರಾದ ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ, ಮಹಿಳಾ ಮುಖಂಡರಾದ ಭಾರತಿ ಬೋಳಾರ, ಪ್ರಮೀಳಾ ಶಕ್ತಿನಗರ, ಕಾರ್ಮಿಕ ನಾಯಕರಾದ ಯೋಗೀಶ್ ಜಪ್ಪಿನಮೊಗರು, ವಿಲ್ಲಿ ವಿಲ್ಸನ್, ಟೆಂಪೋ ಚಾಲಕ ರ ಸಂಘದ ನಾಯಕರಾದ ಸಿರಾಜ್, ರಾಣಿ ಅಬ್ಬಕ್ಕ ಬಸ್ ನೌಕರರರ ಸಂಘದ ನಾಯಕರಾದ ಜಗದೀಶ್, ಪಲ್ಘುಣಿ ಮೀನುಗಾರರ ಸಂಘದ ಮುಖಂಡರಾದ ತಯ್ಯುಬ್ ಬೆಂಗರೆ , ಟ್ಯಾಕ್ಸಿ ಚಾಲಕರ ಸಂಘದ ಶ್ರೀನಿವಾಸ್ , ಫಯಾಝ್ ಅಮ್ಮೆಂಬಳ ಮುಂತಾದವರು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಮಾಜಿ ಮೇಯರ್ ಮುಹಮ್ಮದ್ ಕುಂಜತ್ತಬೈಲ್ ವಹಿಸಿದ್ದರು.

Related Posts

Leave a Reply

Your email address will not be published.