ಪ್ರತಿ ದಿನ ಸೂರ್ಯ ನಮಸ್ಕಾರ ಏಕೆ ಮಾಡಬೇಕು?

ಪ್ರತಿ ದಿನ ಸೂರ್ಯ ನಮಸ್ಕಾರವನ್ನು ನಿಧಾನವಾಗಿ 5-10 ನಿಮಿಷಗಳ ಕಾಲ ಮಾಡುವುದ್ದರಿಂದ ಸುಮಾರು 20 ರಿಂದ 30 ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದು ಸಲಹೆ ನೀಡುತ್ತಾರೆ.

ಸೂರ್ಯ ನಮಸ್ಕಾರಗಳು ಅನೇಕ ಜನರ ಫಿಟ್‌ನೆಸ್ ದಿನಚರಿಗಳ ಅತ್ಯಗತ್ಯ ಪ್ರಮುಖವಾದುದಾಗಿದೆ. ಇದು ನಿಮ್ಮ ದೇಹದ ಹೆಚ್ಚುವರಿ ತೂಕವನ್ನು ಇಳಿಸಲು ಸಹಾಯಮಾಡುತ್ತದೆ. ಇದು ಒಂದು ಉತ್ತಮ ಅಭ್ಯಾಸದ ವ್ಯಾಯಾಮವಾಗಿದ್ದು, ನಿಮಗೆ ಉತ್ತಮ ಫಲಿತಾಂಶವನ್ನು ನೀಡಲು ಪೂರಕವಾಗಿದೆ.

 ಏಕೆ ಮಾಡಬೇಕು? ತರಬೇತುದಾರರ ಮಾರ್ಗದರ್ಶನದಲ್ಲಿ ಮತ್ತು ಸರಿಯಾದ ಭಂಗಿಯೊಂದಿಗೆ ಪ್ರತಿ ದಿನ ಸೂರ್ಯ ನಮಸ್ಕಾರವನ್ನು ರೂಢಿಸಿಕೊಂಡರೆ ಇದು ನಿಮ್ಮ ಒತ್ತಡದ ಜೀವನಕ್ಕೆ ಕಾಲಕ್ರಮೇಣ ಒಂದು ಉತ್ತಮ ಔಷಧಿಯಾಗಲಿದೆ. ಆದ್ದರಿಂದ ಇದನ್ನು ಉತ್ತಮ ದೇಹ ಹಾಗೂ ಮನಸ್ಸಿನ ವ್ಯಾಯಮ ಎಂದು ಕರೆಯಾಗುತ್ತದೆ. ಜೊತೆಗೆ ನಿಮ್ಮ ದೇಹದ ವಿವಿಧ ಸ್ನಾಯು ಗುಂಪುಗಳನ್ನು ಹಿಗ್ಗಿಸಲು ಮತ್ತು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ.

ಬೆನ್ನುಮೂಳೆ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು  ಪ್ರತಿದಿನ ವ್ಯಾಯಮವನ್ನು ರೂಢಿಸಿಕೊಳ್ಳುವುದು ಉತ್ತಮ. ಪ್ರತಿ ದಿನ ಸೂರ್ಯ ನಮಸ್ಕಾರವನ್ನು ನಿಧಾನವಾಗಿ 5-10 ನಿಮಿಷಗಳ ಕಾಲ ಮಾಡುವುದ್ದರಿಂದ ಸುಮಾರು 20 ರಿಂದ 30 ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದು ಸಲಹೆ ನೀಡುತ್ತಾರೆ.

20 ರಿಂದ 40 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ದೇಹ ತೂಕದ ಏರಿಳಿತ ಉಂಟಾಗುತ್ತದೆ. ಹೆಚ್ಚಿನ ಕ್ಯಾಲೋರಿ ಬರ್ನ್ ಅನ್ನು ಹೊಂದಿರುತ್ತಾರೆ ಮತ್ತು ಸೂರ್ಯ ನಮಸ್ಕಾರವನ್ನು ಅಭ್ಯಾಸ ಮಾಡಿದ 5 ರಿಂದ 10 ನಿಮಿಷಗಳಲ್ಲಿ 40 ರಿಂದ 50 ಕ್ಯಾಲೊರಿಗಳನ್ನು ತಲುಪಬಹುದಾಗಿದೆ.

ಪ್ರತಿ ದಿನ ಒಬ್ಬರು ಸುಮಾರು 10 ನಿಮಿಷಗಳ ಕಾಲ ಆರು ಸುತ್ತಿನ ಸೂರ್ಯ ನಮಸ್ಕಾರಗಳನ್ನು ಮಾಡುವುದು ಉತ್ತಮ. ಇದು ದೇಹದ ಚಯಾಪಚಯವನ್ನು ಹೆಚ್ಚಿಸಲು ಇದು ಉತ್ತಮ ಮಾರ್ಗವಾಗಿದೆ ಎಂದು ತ್ರಿವೇದಿ ಅವರು ಸಲಹೆ ನೀಡುತ್ತಾರೆ.

Related Posts

Leave a Reply

Your email address will not be published.