ಸೂಟರ್ ಪೇಟೆ ಶ್ರೀ ಬಬ್ಬುಸ್ವಾಮಿ ಕ್ಷೇತ್ರದಲ್ಲಿ ಪಾರಂಪರಿಕ ಬಲೀಂದ್ರ ಪೂಜೆ
ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಬಲೀಂದ್ರ ಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಲಾಯಿತು.
ಅಂಧಕಾರವನ್ನು ಕಳೆಯುವ ದೀಪಾವಳಿ ಹಬ್ಬದ ಮೂರನೇ ದಿನವೇ ಬಲಿಪಾಡ್ಯಮಿ. ಅಂದು ದಾನಶೂರ ಬಲೀಂದ್ರನ ಪೂಜೆಯನ್ನು ದೈವಸ್ಥಾನಗಳಲ್ಲಿ ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ದಾನದಲ್ಲಿ ಬಲೀಂದ್ರ ಪೂಜೆಯನ್ನು ಅತ್ಯಂತ ಪಾರಂಪರಿಕ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೈವಸ್ದಾನದ ಗುರಿಕಾರರಾದ ಶ್ರೀ ಎಸ್.ರಾಘವೇಂದ್ರ ಇವರು ಬಲೀಂದ್ರ ಪೂಜೆಯ ಮಹತ್ವವನ್ನು ತಿಳಿಸಿ , ಪೂಜಾ ಕಾರ್ಯವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ದೈವಸ್ಥಾನದ ಗೌರವ ಸಲಹೆಗಾರರಾದ ಕೆ.ಪಾಂಡುರಂಗ , ಎಸ್.ಬಾಬು , ಪ್ರಧಾನ ಕಾರ್ಯದರ್ಶಿ ಎಸ್. ಜಗದೀಶ್ಚಂದ್ರ ಅಂಚನ್, ಕೋಶಾಧಿಕಾರಿ ಎಸ್. ಪ್ರಧಾನ ಅರ್ಚಕರಾದ ಎಸ್.ಗಣೇಶ , ಜಯ ಹಾಗೂ ಗ್ರಾಮ ಉಪಸ್ಥಿತರಿದ್ದರು.