ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಸುವರ್ಣ ಪ್ರಾಶನ ಶಿಬಿರ.

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಸುವರ್ಣ ಪ್ರಾಶನ ಕಾರ್ಯಕ್ರಮ ಪುಷ್ಯ ನಕ್ಷತ್ರದ ದಿನ 12-12-2023 ರಂದು ಜರುಗಿತು.ಮಠಾಧಿಪತಿಗಳಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ಮಕ್ಕಳ ಸ್ವಾಸ್ಥ್ಯ ರಕ್ಷಣೆಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 16 ವರ್ಷದ ವರೆಗಿನ ಮಕ್ಕಳಿಗಾಗಿ ಪ್ರತಿ ತಿಂಗಳ ಪುಷ್ಯ ನಕ್ಷತ್ರದಂದು ಸುವರ್ಣ ಪ್ರಾಶನ ಶಿಬಿರ ಜರುಗಲಿದೆ.. ಇಲ್ಲಿನ ವೈದ್ಯಕೀಯ ಸೇವಾ ವಿಭಾಗದ ಆಯುರ್ವೇದ ತಜ್ಞ ವೈದ್ಯ ಡಾ.ದೇವದಾಸ್ ಕೆ.ಪುತ್ರನ್ ನೇತೃತ್ವದಲ್ಲಿ ಸುವರ್ಣ ಪ್ರಾಶನ ಜರುಗಿತು. ಈ ಸಂದರ್ಭದಲ್ಲಿ ಅಮೃತ ವಿದ್ಯಾಲಯದ ಪ್ರಾಂಶುಪಾಲೆ ಡಾ.ಆರತಿ ಶೆಟ್ಟಿ, ಆಯುರ್ವೇದ ವೈದ್ಯೆ ಡಾ.ಶ್ರೀ ದೇವಿ ಆಳ್ವಾ, ಅಮೃತಾ ಕ್ಯಾಂಪಸ್ ಡೈರೆಕ್ಟರ್ ಯತೀಶ್ ಬೈಕಂಪಾಡಿ, ಬ್ರಹ್ಮಸ್ಥಾನ ಕ್ಷೇತ್ರದ ಅರ್ಚಕ ಬ್ರಹ್ಮಚಾರಿ ರತೀಶ್,ಶ್ರೀಧರ್,ಅಖಿಲಾ ಮೊದಲಾದವರು ಉಪಸ್ಥಿತರಿದ್ದರು

Related Posts

Leave a Reply

Your email address will not be published.