Mangalore : ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾದ ಸ್ವಚ್ಛತಾ ಕಾರ್ಮಿಕರು

ಕಳೆದ ಕೆಲವು ದಿನಗಳಿಂದ ಮುಷ್ಕರ ಹೂಡಿದ್ದ ಸ್ವಚ್ಛತಾ ಕಾರ್ಮಿಕರು ಇಂದಿನಿಂದ ಕೆಲಸಕ್ಕೆ ಹಾಜರಾಗಿದ್ದು, ಎಲ್ಲಾ ಸ್ವಚ್ಚತಾ ಕಾರ್ಮಿಕರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಧನ್ಯವಾದ ಸಲ್ಲಿಸಿದ್ದಾರೆ. ಸಾರ್ವಜನಿಕರಿಗೆ ಸಹಕಾರವಾಗುವಂತೆ ಶಾಸಕರ ಕಚೇರಿಯಲ್ಲಿ ವಾರ್ ರೂಂ ತೆರೆಯಲಾಗಿದ್ದು ಮುಂದಿನ 2-3 ದಿನಗಳ ಕಾಲ ವಾರ್ ರೂಂ ಕಾರ್ಯಾಚರಿಸಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
