Home Posts tagged #abhayachandra jain

ಮೂಡುಬಿದಿರೆ : ಶಿಷ್ಯನ ಪರವಾಗಿ ಮಾಜಿ ಸಚಿವ ಜೈನ್ ಮತಯಾಚನೆ

ಮೂಡುಬಿದಿರೆ – ತನ್ನ ಶಿಷ್ಯ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಗುರುವಾರ ಪುರಸಭಾ ವ್ಯಾಪ್ತಿಯ ವಾರ್ಡ್ ನಂಬ್ರ 15ರ ಕೊಡಂಗಲ್ಲು ಪರಿಸರದ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಚುನಾವಣೆ ಪ್ರಣಾಳಿಕೆಯ 300 ಗ್ಯಾರಂಟಿ ಕಾರ್ಡ್ ಹಸ್ತಾಂತರಿಸಿದ ಅಭಯಚಂದ್ರ ಅವರು ಮಿಥುನ್

ಮೂಡುಬಿದಿರೆ ಮೆಸ್ಕಾಂ ಬಳಿ ಅವೈಜ್ಞಾನಿಕ ವೃತ್ತ ತೆರವಿಗೆ ಆಗ್ರಹ

ಮೂಡುಬಿದಿರೆ-ವೇಣೂರು, ಮೂಡುಬಿದಿರೆ-ಬಿಸಿರೋಡನ್ನು ಸಂಧಿಸುವ ಮೆಸ್ಕಾಂ ಬಳಿ ರಾಜ್ಯ ಹೆದ್ದಾರಿಯಲ್ಲಿ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ವೃತ್ತ ಅವೈಜ್ಞಾನಿಕ ರೀತಿಯಲ್ಲಿದೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಸರ್ಕಲ್ ತೆರವುಗೊಳಿಸುವಂತೆ ಆಗ್ರಹಿಸಿದೆ. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಶಾಸಕರ ನಿಧಿಯಿಂದ ರೂ 5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ವೃತ್ತ ಅವೈಜ್ಞಾನಿಕ ರೀತಿಯಲ್ಲಿದೆ.

ಅಶ್ವತ್ಥನಾರಾಯಣ ಹೇಳಿಕೆ ವಿರುದ್ಧ ಕ್ರಮಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್ ಒತ್ತಾಯ

ಮೂಡುಬಿದಿರೆ: ಉನ್ನತ ಶಿಕ್ಷಣ ಸಚಿವ ಡಾ.ಸಿ ಅಶ್ವತ್ಥನಾರಾಯಣ ಅವರು ಮಂಡ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಟಿಪ್ಪುಸುಲ್ತಾನನ್ನು ಹೊಡೆದು ಹಾಕಿದಂತೆ ಹೊಡೆದು ಹಾಕಬೇಕು ಎಂದಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮತ್ತು ರಾಷ್ಟ್ರಪತಿಯವರು ಮುಖ್ಯಮಂತ್ರಿಗೆ ಸೂಚನೆ ನೀಡಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆಗ್ರಹಿಸಿದ್ದಾರೆ. ಗುರುವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ

ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕಾಂಗ್ರೆಸ್‍ನ್ನು ಅಧಿಕಾರಕ್ಕೆ ತನ್ನಿ
ಮೂಡುಬಿದರೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿಕೆ

ಮೂಡುಬಿದಿರೆ: ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅಭಿವೃದ್ಧಿಯ ನೆಪದಲ್ಲಿ ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ.ಇದನ್ನೆಲ್ಲಾ ಹೋಗಲಾಡಿಸಿ ಭ್ರಷ್ಟಚಾರ ಮುಕ್ತ ಮೂಡುಬಿದಿರೆಯನ್ನಾಗಿ ರೂಪುಗೊಳಿಸಲು ಕಾಂಗ್ರೆಸ್ ನ ಎಂಎಲ್ ಎ ಬರಬೇಕು ಎಂದು ಮಾಜಿ ಸಚಿವ, ಕೆಪಿಸಿಸಿಯ ರಾಜ್ಯ ಉಪಾಧ್ಯಕ್ಷ ಕೆ.ಅಭಯಚಂದ್ರ ಜೈನ್ ಹೇಳಿದರು. ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಕಾಂಗ್ರೆಸ್ ಪಕ್ಷದ ಬಲಾಢ್ಯ ನಾಯಕರುಗಳು ಜನವರಿ 22 ರಂದು ಮಂಗಳೂರಿಗೆ

ಜೈನರಪವಿತ್ರ ಸ್ಥಳ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣ ಮಾಡದಂತೆ ಪ್ರಧಾನ ಮಂತ್ರಿಯವರಿಗೆ ಅಂತರ್ದೇಶೀಯ ಪತ್ರ ಬರೆಯುವ ಕಾರ್ಯಕ್ರಮ

ಜೈನರಿಗೆ ಅತ್ಯಂತ ಪವಿತ್ರ ಸ್ಥಳವಾದ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರ ಪವಾಸಿ ತಾಣ ಮಾಡಲು ಆದೇಶಿಸಿದ್ದು,ಇದು ಜೈನ ಪಾವಿತ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿರುವುದನ್ನ ಖಂಡಿಸಿ, ಡಿಸೆಂಬರ್ 28ರಂದು ಮೂಡಬಿದ್ರೆಯಲ್ಲಿ ಹಕ್ಕೋತ್ತಾಯ ಚಳುವಳಿಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಜೈನ ಸಮುದಾಯದ ಮುಖಂಡರಾದ ಕೆ.ಅಭಯಚಂದ್ರ ಜೈನ್ ಹೇಳಿದ್ದಾರೆ. ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಸುರತ್ಕಲ್ ಅಕ್ರಮ ಟೋಲ್‍ಗೇಟ್ ವಿರುದ್ಧ ಹಗಲು-ರಾತ್ರಿ ಧರಣಿ : ಸಾಥ್ ನೀಡಿದ ಅಭಯಚಂದ್ರ ಜೈನ್

ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿಯ ಪ್ರಥಮ ದಿನದ ರಾತ್ರಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಹೋರಾಟಗಾರರಿಗೆ ಸಾಥ್ ನೀಡಿದರು. ಧರಣಿಯ ಸ್ಥಳಕ್ಕೆ ರಾತ್ರಿ 9 ಗಂಡೆಗೆ ಬಂದ ಜೈನ್ ಅವರು, ಒಂದು ಚಾಪೆ ಹಾಗೂ ಸೊಳ್ಳೆಗಳಿಂದ ರಕ್ಷಣೆಗೆ ಒಂದು ಹೊದಿಕೆಯೊಂದಿಗೆ ಬಂದಿರುವುದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಅವರು, ಸಂಸದರು ನೀಡಿರುವ ಗಡುವು ಇಂದಿನಿಂದ 10 ದಿನಗಳ ಕಾಲ ಇದೆ. ಆದ್ದರಿಂದ ಅಷ್ಟು