Home Posts tagged #anganavady

ನರಿಂಗಾನದ ಕಲ್ಲರಕೋಡಿಯಲ್ಲಿ ಅಂಗನವಾಡಿ ಕೇಂದ್ರದ ಡಿಜಿಟಲ್ ವ್ಯವಸ್ಥೆ ಉದ್ಘಾಟನೆ

ಸ್ವಂತ ಕಟ್ಟಡಗಳು ಇರುವ ಅಂಗನವಾಡಿಗಳಿಗೆ ಡಿಜಿಟಲ್ ವ್ಯವಸ್ಥೆ ಆಗಿದೆ. ಉಳಿದ ಕೇಂದ್ರಗಳಿಗೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಬೇಕಿದೆ. ನರಿಂಗಾನದಲ್ಲಿ ಗ್ರಾಮ ಪಂಚಾಯಿತಿ ಮುತುವರ್ಜಿ ವಹಿಸಿರುವುದು ಉತ್ತಮ ಬೆಳವಣಿಗೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.ನರಿಂಗಾನದ ಕಲ್ಲರಕೋಡಿಯಲ್ಲಿ ಅಂಗನವಾಡಿ ಕೇಂದ್ರದ ಡಿಜಿಟಲ್ ವ್ಯವಸ್ಥೆ ಶನಿವಾರ

ಬಂಟ್ವಾಳ: ಸಂಗಬೆಟ್ಟು ಬಾಕಿಮಾರು ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ

ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಬಾಕಿಮಾರು ಅಂಗನವಾಡಿ ಕಟ್ಟದ ಶಿಲಾನ್ಯಾಸ ಕಾರ್ಯಕ್ರಮವು ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಭಾಕರ ಐಗಳ್ ರವರ ಉಪಸ್ಥಿತಿಯಲ್ಲಿ ಇತ್ತೀಚಿಗೆ ಜರಗಿತು. ಶಿಲಾನ್ಯಾಸವನ್ನು ನಿವೃತ್ತ ಶಿಕ್ಷಕರಾದ ದಾಮೋದರ್ ರಾವ್ ಸಂಗಬೆಟ್ಟು ನೆರೆವೇರಿಸಿದರು.ಕಾರ್ಯಕ್ರಮದಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ಪೂಜಾರಿ, ಉಪಾಧ್ಯಕ್ಷ ಸುರೇಶ್ ಕುಲಾಲ್, ಸಿದ್ದಕಟ್ಟೆಹಾಲು ಉತ್ಪಾದಕ ಸಹಕಾರಿ

ಪುತ್ತೂರು: ಪಂಜಳ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ

ಪುತ್ತೂರು: ಮಕ್ಕಳ ಕಲಿಕೆಯ ಮೊದಲ ಹೆಜ್ಜೆಯೇ ಅಂಗನವಾಡಿ ಕೇಂದ್ರಗಳು, ಈ ಕೇಂದ್ರಗಳಲ್ಲಿ ಮಕ್ಕಳಿಗೆ ಕಲಿಕೆಯ ಜೊತೆಗೆ ಮನೆಯ ಎಲ್ಲಾ ವಾತಾವರಣಗಳು ಅಂಗನವಾಡಿ ಕೇಂದ್ರಗಳಲ್ಲಿ ಕಾಣಲು ಸಾಧ್ಯವಾಗುತ್ತದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಮುಂಡೂರು ಗ್ರಾಮದ ಪಂಜಳ ಅಂಗನವಾಡಿ ಕೇಂದ್ರದಲ್ಲಿ ನಡೆದ ಬಾಲ ಮೇಳದಲ್ಲಿ ಮಾತನಾಡಿದರು.ಪುಟ್ಟ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಇಲ್ಲಿ ನೀಡಲಾಗುತ್ತಿದ್ದು ಮಕ್ಕಳನ್ನು ಅಂಗನವಾಡಿಗೆ ದಾಖಲಿಸುವಂತೆ ಶಾಸಕರು ಮನವಿ ಮಾಡಿದರು.

ದ.ಕ. ಜಿಲ್ಲೆಯಲ್ಲಿ ಅಂಗನವಾಡಿ ಶಾಲೆ ಆರಂಭ

ಕೊರೊನಾ ಆತಂಕ ಮರೆಯಾಗುತ್ತಿದ್ದಂತೆ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿದ್ದು, ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ಅಂಗನವಾಡಿಗಳಲ್ಲಿ ಮಕ್ಕಳ ಕಲರವ ಮೊಳಗಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅಂಗನವಾಡಿ ಶಾಲೆಗಳನ್ನು ಆರಂಭಿಸಲಾಗಿದೆ. ಇಂದು ಶಾಲೆಗೆ ಬಂದ ಮಕ್ಕಳಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಅಂಗನವಾಡಿ ಶಾಲೆಯ ಸಿಬ್ಬಂದಿ ವರ್ಗದವರು ಪುಟಾಣಿ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.