Home Posts tagged #bantwala accident

ಕ್ಯಾಟರಿಂಗ್ ಪಿಕ್‍ಅಪ್ ವಾಹನ ಅಪಘಾತ: ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ

ಬಂಟ್ವಾಳ: ಕ್ಯಾಟರಿಂಗ್ ಆಹಾರ ಸಾಗಾಟದ ಪಿಕ್ ಅಪ್ ವಾಹನವೊಂದರ ವೀಲ್ ಎಂಡ್ ತುಂಡಾದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿರುವ ಘಟನೆ ತುಂಬೆ ಸಮೀಪದ ರಾಮಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಸಂಜೆ ನಡೆದಿದೆ. ಅಪಘಾತದಲ್ಲಿ ಉಪ್ಪಿನಂಗಡಿ ನಿವಾಸಿಗಳಾದ ಚೇತನ್ (25) ಮತ್ತು ಆಶಿತ್ (21) ಮೃತಪಟ್ಟಿದ್ದಾರೆ.