Home Posts tagged #bengaluru

ರಾಜಭವನಕ್ಕೆ ಬಾಂಬ್ ಕರೆ: ಪರಿಶೀಲಿಸಿ ಸುಳ್ಳು ಎಂದ ಪೋಲೀಸರು

ದೊಮ್ಮಲೂರು ಎನ್‍ಐಎ ಕೊಠಡಿಗೆ ಕರೆ ಮಾಡಿ ಬೆಂಗಳೂರಿನಲ್ಲಿರುವ ರಾಜ ಭವನಕ್ಕೆ ಬಾಂಬ್ ಇಡಲಾಗಿದೆ ಎಂದು ಹೇಳಿರುವುದು ಹುಸಿ ಕರೆ ಎಂದು ಪೋಲೀಸರು ತಿಳಿಸಿದರು.ಕರೆಯ ಸತ್ಯಾಸತ್ಯತೆ ಅರಿಯಲು ಬಾಂಬ್ ನಿಷ್ಕ್ರಿಯ ಪಡೆಯೊಂದಿಗೆ ರಾಜ ಭವನಕ್ಕೆ ಧಾವಿಸಿದರು. ಪರಿಶೀಲಿಸಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ; ಆನ್‍ಲೈನ್‍ನಲ್ಲಿ ಮಹಿಳೆಗೆ 80,000 ರೂಪಾಯಿ ಟೋಪಿ

ಬೆಂಗಳೂರಿನ ಮಹಿಳೆ ಒಬ್ಬರಿಗೆ ವಿಶೇಷ ಪೂಜೆ ಸಲ್ಲಿಸುವುದಾಗಿ ಆನ್‍ಲೈನ್ ಮೂಲಕ ವಂಚಿಸಿರುವ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ವಿಶೇಷ ಪೂಜೆಗೆ ಹುಡುಕುವಾಗ ಆನ್‍ಲೈನ್‍ನಲ್ಲಿ ಶರಣ್ ಭಟ್ ಎಂಬ ಪೂಜಾರಿಯ ಫೋನ್ ನಂಬರ್ ಯಾರೋ ಕೊಟ್ಟರು. ನನ್ನ ಖಾತೆಗೆ 50,000 ರೂಪಾಯಿ ಹಾಕಿ. ದೇವರ ಮುಂದೆ ಪೂಜೆ ಸಲ್ಲಿಸಿ ಮನೆಗೆ ಬಂದು ವಿಶೇಷ ಪೂಜೆ ಮಾಡುವೆ ಎಂದು ಶರಣ್ ಭಟ್ ತಿಳಿಸಿದಂತೆ ಹಣ

ಬೆಂಗಳೂರಿನಬಟ್ಟೆ ವ್ಯಾಪಾರಿ ಈಗ ರಾಜಸ್ತಾನದ ಶಾಸಕ

ಬೆಂಗಳೂರಿನ ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿ ಹಾಗೂ ಜೂಗನಹಳ್ಳಿಯ ಬಂಗಲೆ ವಾಸಿ ಲಾಡುಲಾಲ್ ಪಿಟ್ಲಿಯಾ ಅವರು ಈಗ ರಾಜಸ್ತಾನದ ಸಹಾರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ 31 ಲಕ್ಷ ಮತ ಪಡೆದಿದ್ದರು. ಈ ಬಾರಿ ಬಿಜೆಪಿ ಟಿಕೆಟ್ ಪಡೆದು 1.17 ಲಕ್ಷ ಮತ ಪಡೆದು ಗೆದ್ದಿದ್ದಾರೆ. ಸೋತ ಕಾಂಗ್ರೆಸ್ ಅಭ್ಯರ್ಥಿ 55 ಸಾವಿರ ಮಾತ್ರ ಪಡೆದಿದ್ದಾರೆ.ಬೆಂಗಳೂರಿನ ಲಾಡುಲಾಲರ ವ್ಯವಹಾರವನ್ನು ಈಗ ಮಕ್ಕಳು ನೋಡಿಕೊಳ್ಳುತ್ತಿದ್ದಾರೆ.

ಬೆಂಗಳೂರು ಕಂಬಳದಲ್ಲಿ ಕಾಂತಾರ ಕೋಣಕ್ಕೆ ಚಿನ್ನದ ಪದಕ

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳು ಚಿನ್ನದ ಪದಕಕ್ಕೆ ಭಾಜನವಾಗಿದೆ. ಬೆಂಗಳೂರು ಕಂಬಳದಲ್ಲಿ ಬೈಂದೂರಿನ ಕೋಣ ಪ್ರಥಮ ಚಿನ್ನ ಗೆದ್ದ ಕೋಣ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದೆ. ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು. ಈ ಕುರಿತು ಕೋಣಗಳ ಮಾಲೀಕರು

ಬೆಂಗಳೂರು: ಡಿ.23ರಂದು ಕೆಇಎ ಮರು ಪರೀಕ್ಷೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್ ನೇಮಕಾತಿಯ ಮರು ಪರೀಕ್ಷೆಯನ್ನು ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ನಡೆಸಲಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಿಎಸ್‍ಐ ಮರು ಪರೀಕ್ಷೆ ನಡೆಸುತ್ತಿದ್ದು, ಈ ಹಿಂದಿನ ಪರೀಕ್ಷೆಗೆ ಅರ್ಹತೆ ಪಡೆದವರು ಈ ಮರು ಪರೀಕ್ಷೆಗೂ ಅರ್ಹತೆ ಪಡೆಯುತ್ತಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.2021ರ ಜನವರಿ 21ರಂದು ಪೆÇಲೀಸ್ ಇಲಾಖೆಯಿಂದ 545

ಬೆಂಗಳೂರು: ಕಂಬಳ, ಆಹ್ವಾನ ಪತ್ರಿಕೆಯಿಂದ ಬ್ರಿಜ್ ಭೂಷಣ್‍ನ್ನು ಕೈಬಿಟ್ಟ ಸಂಘಟಕರು

`ಬೆಂಗಳೂರು ಕಂಬಳ’ದಲ್ಲಿ ಭಾರತ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‍ಭೂಷಣ್ ಶರಣ್ ಸಿಂಗ್ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಂಘಟಕರು ಅವರ ಹೆಸರನ್ನು ಆಹ್ವಾನ ಪತ್ರಿಕೆಯಿಂದ ಕೈಬಿಟ್ಟಿದ್ದಾರೆ. ನ.25 ಮತ್ತು 26ರಂದು ಕಂಬಳ ನಡೆಯಲಿದ್ದು, 25ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕುಸ್ತಿಪಟುಗಳನ್ನು ಬ್ರಿಜ್‍ಭೂಷಣ್ ಸನ್ಮಾನಿಸಬೇಕಿತ್ತು. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಅವರ

ಬೆಂಗಳೂರು: ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆ

ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಆಯ್ಕೆಯಾಗಿದ್ದಾರೆ. ಶುಕ್ರವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, 6 ತಿಂಗಳ ಬಳಿಕ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆದಿದೆ. ಶಾಸಕರ ಅಭಿಪ್ರಾಯ ಪಡೆದು ದೆಹಲಿಯಿಂದ ಬಂದಿದ್ದ ವೀಕ್ಷಕರು ಅಶೋಕ್ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. 66ರ ಹರೆಯದ ಅಶೋಕ್ ಅವರು ಆರ್ ಎಸ್ ಎಸ್ ಹಿನ್ನಲೆ ಹೊಂದಿದ್ದು, ಈ ಹಿಂದೆ ವಿಧಾನಸಭೆಯ ವಿಪಕ್ಷದ ಉಪನಾಯಕರಾಗಿ ಉಪಮುಖ್ಯಮಂತ್ರಿಯಾಗಿ, ಕಂದಾಯ , ಗೃಹ

ಬೆಂಗಳೂರು: ಎನ್‍ಬಿಯ ಮಿಸ್ಟರ್, ಮಿಸ್, ಟೀನ್ ಕರ್ನಾಟಕ-2023ರ ಸೀಸನ್-4

ಎನ್‍ಬಿಯ ಮಿಸ್ಟರ್, ಮಿಸ್, ಟೀನ್ ಕರ್ನಾಟಕ-2023ರ ಸೀಸನ್ 4 ಬೆಂಗಳೂರಿನ ಫಾಕ್ಸ್‍ಗ್ಲೋವ್ ಇಂಟರ್‍ನ್ಯಾಶನಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಈ ಸ್ಪರ್ಧೆಗೆ ಕರ್ನಾಟಕದ ವಿವಿಧ ಭಾಗಗಳಿಂದ 35 ಸ್ಪರ್ಧಿಗಳು 3 ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಎನ್‍ಬಿಯ ಮಿಸ್ಟರ್ ಕರ್ನಾಟಕದಲ್ಲಿ ವಿನ್ನರ್ ಆಗಿ ವಚನ ಎಸ್, 1ನೇ ರನ್ನರ್ ಅಪ್ ಸಂತೋಷ್ ಗೌಡ, ಎರಡನೇ ರನ್ನರ್ ಅಪ್ ಆಗಿ ಪ್ರಜ್ವಲ್ ಆಯ್ಕೆಯಾದರು. ಎನ್‍ಬಿಯ ಮಿಸ್

ಬೆಂಗಳೂರು|| ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ಅಯ್ಕೆಗೆ ಡಿಸಿಎಂ ಒಪ್ಪಿಗೆ: ಡಿಸಿಎಂ ಡಿಕೆಶಿಗೆ ಅಭಿನಂದನೆ ಸಲ್ಲಿಸಿದ ಗಲ್ಫ್ ಕನ್ನಡಿಗರು

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ಅಯ್ಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಗಲ್ಫ್ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕಲೀಲ್ ಹೇಳಿದರು. ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭೇಟಿಯಾಗಿ ಮನವಿ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಕೆಎನ್‍ಆರ್‍ಐಗೆ ಕಳೆದ ಕೆಲವು ವರ್ಷಗಳಿಂದ ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆದಿರಲ್ಲಿಲ್ಲ. ಈ

ಬೆಂಗಳೂರಿನಲ್ಲಿ ಶಂಕಿತ ಭಯೋತ್ಪಾದಕರ ಬಂಧನ ವಿಚಾರ : ಕರಾವಳಿ ಭಾಗದಲ್ಲಿ ಕಟ್ಟೆಚ್ಚರ

ಬೆಂಗಳೂರಲ್ಲಿ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ ಬಳಿಕ ಕರಾವಳಿಯಲ್ಲಿ ವಿದ್ವಂಸಕ ಚಟುವಟಿಕೆ ಮೇಲೆ ಹದ್ದಿನ ಕಣ್ಣಿರಿಸಿರುವ ಪೊಲೀಸರು ಜನ ನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ದೇವಸ್ಥಾನ, ಪ್ರವಾಸಿ ಕೇಂದ್ರ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಶ್ವಾನ ದಳ, ಮಸೂರ ದರ್ಶಕದಿಂದ ತಪಾಸಣೆ ನಡೆಸಲರಾಂಭಿಸಿದ್ದಾರೆ. ಈಗಾಗಲೇ ಉಡುಪಿ ಕೃಷ್ಣ ಮಠ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಆಟಿ ಮಾರಿಪೂಜೆ ಸಂಭ್ರಮದಲ್ಲಿರುವ ಕಾಪುವಿನ