ಉಳ್ಳಾಲ: ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಇಲ್ಲಿನ ಬಸ್ತಿಪಡ್ಪು ಎಂಬಲ್ಲಿ ಮನೆ ಆವರಣದಲ್ಲಿದ್ದ ತೆಂಗಿನ ಮರ ಉರುಳಿಬಿದ್ದು ಮನೆಗೆ ಹಾನಿಯುಂಟಾಗಿದೆ. ಬಸ್ತಿಪಡ್ಪುವಿನಲ್ಲಿರುವ ಯು.ಪಿ ಮಲ್ಯ ರಸ್ತೆಯಲ್ಲಿರುವ ವಿಶ್ವನಾಥ್ ತೇವುಲ ಎಂಬವರಿಗೆ ಸೇರಿದ ಮನೆಗೆ ಹಾನಿಯುಂಟಾಗಿದೆ. ಬುಧವಾರ ಸಂಜೆಯಿಂದ ಭಾರೀ ಮಳೆಯಾಗಿದ್ದು, ಜೋರಾಗಿ ಬೀಸಿದ ಗಾಳಿಯಿಂದ ಆವಾಂತರ ಉಂಟಾಗಿದೆ.
ಕೊಕ್ಕಡ : ಶಿಬಾಜೆ ಗ್ರಾಮದ ಅಜಿರಡ್ಕ ಶ್ರೀಧರ ರಾವ್ ರವರ ತೋಟಕ್ಕೆ ಮೇ 7ರಂದು ತಡರಾತ್ರಿ ಕಾಡಾನೆ ದಾಳಿ ಮಾಡಿ ಪಸಲಿಗೆ ಬರುವ ತೆಂಗಿನ ಗಿಡ, ಕೊಕ್ಕೋ ಗಿಡ, ಬಾಳೆಗಿಡ ಅಪಾರ ಪ್ರಮಾಣದಲ್ಲಿ ನಾಶ ಮಾಡಿದೆ. ಈ ಹಿಂದೆಯೂ ಇವರ ತೋಟಕ್ಕೆ ಧಾಳಿ ಮಾಡಿದ್ದು ಕೃಷಿ ಹಾನಿ ಉಂಟು ಮಾಡಿತ್ತು, ಮೇ 6ರಂದು ಶಿಶಿಲ ಗ್ರಾಮದ ಕಳ್ಳಾಜೆ ದಿವಾಕರ ಗೌಡ ಇವರ ತೋಟಕ್ಕೂ ಧಾಳಿ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ.