2004ರಿಂದ 2019ರ ನಡುವೆ ಸಂಸದರ ಸಂಪತ್ತು ಏರಿಕೆಯಲ್ಲಿ ಕರ್ನಾಟಕದ ಸಂಸದ ರಮೇಶ ಜಿಗಜಿಣಗಿ ಮೊದಲ ಸ್ಥಾನದಲ್ಲಿ ಇದ್ದಾರೆ. ಅವರ ಸಂಪತ್ತು 2004ರಲ್ಲಿ 54.8 ಲಕ್ಷ ಇದ್ದುದು 2019ಕ್ಕೆ 51.41 ಕೋಟಿಗೆ ಎಂದರೆ 9,098 ಶೇಕಡಾ ಏರಿಕೆ ಆಗಿತ್ತು. ಇಂದೆಲ್ಲ ಬಡವರು ಚುನಾವಣೆಗೆ ನಿಲ್ಲುವುದು ಸಾಧ್ಯವಿಲ್ಲ. 1975ರವರೆಗೆ ಕಾಸಿಲ್ಲದವರು ಕೂಡ ಚುನಾವಣೆಗೆ ನಿಂತುದಿದೆ.
ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಅವರ ಉಡುಪಿಯ ಕೊರಂಗ್ರಪಾಡಿಯಲ್ಲಿರುವ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಮೇ 31 ರ ಬುಧವಾರದಂದು ದಾಳಿ ನಡೆಸಿದ್ದಾರೆ. ಬೆಳಗ್ಗೆ ಆರಂಭಗೊಂಡ ಶೋಧ ಕಾರ್ಯಾಚರಣೆ ತಡರಾತ್ರಿ ವರೆಗೂ ನಡೆಸಲಾಗಿತ್ತು. ದಾಳಿ ವೇಳೆ ಕುಮಾರ್ ರವರ ನಿವಾಸದಲ್ಲಿ ಚಿನ್ನಾಭರಣ, ಐಷಾರಾಮಿ ಕಾರು, ಬೆಲೆಬಾಳುವ ಪೀಠೋಪಕರಣಗಳು, ಲಕ್ಷಾಂತರ ರೂಪಾಯಿ ನಗದು ಹಾಗೂ ಹೊರಜಿಲ್ಲೆಯಲ್ಲಿರುವ ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಿಕ್ಕಿದ್ದು,
ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ವತಿಯಿಂದ ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ದ ಕದ್ರಿ ಕೆಪಿಟಿ ಬಳಿಯಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.