ವಕೀಲರು ತನ್ನ ಕಕ್ಷಿದಾರನನ್ನು ಕೋರ್ಟಿನಲ್ಲಿ ಸಮರ್ಥಿಸಿಕೊಳ್ಳಬೇಕು, ಬೀದಿಯಲ್ಲಿ ಅಲ್ಲ, ಆತ ವಕೀಲ ಆಗಿರಲು ಅನ್‌ಫಿಟ್ ಎಂದು ಮೇಲ್ಮನೆ ಸದಸ್ಯ ಎಸ್. ಎಲ್. ಭೋಜೇಗೌಡ ಅವರು ದರ್ಶನ್ ವಕೀಲನ ಬಗೆಗೆ ಹೇಳಿದರು. ಚಿಕ್ಕಮಗಳೂರಿನಲ್ಲಿ ಅವರು ಪತ್ರಿಕಾಗೊಟ್ಟಿ ನಡೆಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾಗಿ ಎರಡನೆಯ ಬಾರಿ ಆಯ್ಕೆಯಾಗಿರುವ ಭೋಜೇಗೌಡರು ಬಾರ್ ಕೌನ್ಸಿಲ್‌ನ
ಸುರತ್ಕಲ್‍ನ ಜನತಾ ಕಾಲನಿಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಗುರುವಾರ ರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಇಲ್ಲಿನ ಕಾನ ಕಾಲನಿ ನಿವಾಸಿ ಮುಹಮ್ಮದ್ ಶಾಫಿ(35) ಚೂರಿ ಇರಿತಕ್ಕೊಳಗಾದವರು. ಅದೇ ಪರಿಸರದ ಯುವಕ ತ್ವಾಹಿರ್ (24) ಚೂರಿಯಿಂದ ಇರಿದ ಆರೋಪಿ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಕಾನಕಾಲನಿ ಮಸೀದಿಯ ಬಳಿ ಇಬ್ಬರ ನಡುವೆ ಜಗಳವಾಗಿದ್ದು, ತಾಹಿರ್ ಚೂರಿಯಲ್ಲಿ ಇರಿದು ಪರಾರಿಯಾಗಿದ್ದಾನೆ. ಮಸೀದಿಯಲ್ಲಿನ
ಪುತ್ತೂರು: ವರ್ಷದ ಹಿಂದೆ ಪಾಟ್ರಕೋಡಿಯಲ್ಲಿ ಪತ್ತೆಯಾದ ಭಾರಿ ಪ್ರಮಾಣದ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಪಾಟ್ರಕೋಡಿಯಲ್ಲಿ ಭಾರಿ ಪ್ರಮಾಣದ ಗಾಂಜಾ ಪ್ರಕರಣದಲ್ಲಿ ಪತ್ತೆ ಮಾಡಿದ ಪೆÇಲೀಸರು ಅರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ 2ನೇ ಆರೋಪಿ ಕಾಸರಗೋಡು ಮಂಜೇಶ್ವರ ಹೊಸಂಗಡಿ ನಿವಾಸಿ ಮಹಮ್ಮದ್ ಶಫೀಕ್ ಅವರು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ
ಮಂಗಳೂರು: ಮಂಗಳೂರು ನಗರದಲ್ಲಿ ಮತ್ತೆ ತಲವಾರು ದಾಳಿ ನಡೆದಿದೆ. ಹಳೆಯ ಕೊಲೆಯ ವೈಷಮ್ಯಕ್ಕೆ ಯುವಕನೋರ್ವನ ಕೊಲೆ ಯತ್ನ ನಿನ್ನೆ ರಾತ್ರಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೌಡಿಗಳ ತಂಡದ ಗ್ಯಾಂಗ್ ವಾರ್ ನಲ್ಲಿ ಶ್ರವಣ್ ಎಂಬ ಯುವಕನ ಮೇಲೆ 8 ಜನರ ತಂಡವೊಂದು ಮಾರಣಾಂತಿಕ ದಾಳಿ ನಡೆಸಿದೆ. ಶ್ರವಣ್ ಗಂಭೀರವಾಗಿ ಗಾಯಗೊಂಡಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. 2020ರಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಇಂದ್ರಜಿತ್
ಮೂಡುಬಿದಿರೆ: 2೦ ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧರೊಬ್ಬರ ಶವವು ಜ್ಯೋತಿನಗರ ಗಾಂಧಿಪಾರ್ಕ್ ಬಳಿ ನಿಲ್ಲಿಸಲಾಗಿದ್ದ ಹಳೆ ಕಾರಿನೊಳಗಡೆ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ. ಪುರಸಭೆ ವ್ಯಾಪ್ತಿಯ ಕರಿಂಜೆ ಗ್ರಾಮ ನಿವಾಸಿ ಶ್ರೀಧರ ಶೆಟ್ಟಿ(73) ಸೆಪ್ಟೆಂಬರ್ 29ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಶ್ರೀಧರ ಶೆಟ್ಟಿ ಅವರ ಮಗ ರೋಹಿತ್ ಶೆಟ್ಟಿ ಅವರು ಅಕ್ಟೋಬರ್ 6ರಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬುಧವಾರ ಜ್ಯೋತಿನಗರ ಮೆಸ್ಕಾಂ ಪರಿಸರದಲ್ಲಿ
ಅರಕಲಗೂಡು: ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಮೃತದೇಹವನ್ನು ತಾಲೂಕಿನ ಮಲ್ಲಾಪುರ ಬಳಿ ಲಕ್ಕೂರು ಅರಣ್ಯ ಪ್ರದೇಶದಲ್ಲಿ ಎಸೆದಿರುವ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಜಗದೀಶ್ ಕೊಲೆಗೀಡಾದ ವ್ಯಕ್ತಿಯಾಗಿದ್ದಾನೆ,ಮೃತದೇಹದ ಪಕ್ಕದಲ್ಲಿ ಆಟೋ ನಿಲ್ಲಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಬಿದ್ದಿದ್ದ ಮೃತದೇಹವನ್ನು ಕಂಡು ಸ್ಥಳೀಯರು ಕೊಣನೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ
ಮೈಸೂರು: ಮೈಸೂರಿನಲ್ಲಿ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಲೇ ಇದ್ದು ಸಾಂಸ್ಕೃತಿಕ ನಗರಿ ಜನತೆಯ ನಿದ್ದೆಗಡಿಸಿದೆ. ಇದೀಗ ಖಾಸಗಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎನ್ನಲಾಗಿದ್ದು ಜನತೆಯನ್ನು ಆತಂಕಕ್ಕೆ ನೂಕಿದೆ. ಹಾಡುಹಗಲಲ್ಲೇ ಯುವಕನಿಗೆ ಗುಂಡು ಹಾರಿಸಿ ಜ್ಯುವೆಲಲ್ಲರಿ ಶಾಪ್ ದರೋಡೆ, ಯುವತಿಗೆ ಚಾಕುವಿನಿಂದ ಇರಿತ ಪ್ರಕರಣಗಳು ಮಾಸುವ ಮುನ್ನವೇ ಬೆಚ್ಚಿ ಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ. ಮೈಸೂರು ನಿವಾಸಿ ಖಾಸಗಿ
ಪೊಲೀಸ್ ತಪಸಾಣೆ ವೇಳೆ ತಪ್ಪಿಸಿಕೊಳ್ಳಲು ಹೋಗಿ ರಿಕ್ಷಾವೊಂದು ಪಲ್ಟಿಯಾಗಿದ್ದು, ವಿಚಾರಣೆ ನಡೆಸಿದಾಗ ರಿಕ್ಷಾದಲ್ಲಿದ್ದ ಗಾಂಜಾ ಜೊತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಸಜಿಪಮೂಡ ಗ್ರಾಮದ ಸುಭಾಶ್ ನಗರ ನಿವಾಸಿ ಅಸೀಫ್ ಯಾನೆ ಅಚಿ (28) ಸವಣೂರು ಗ್ರಾಮದ ಚಾಪಳ್ಳ ನಿವಾಸಿ ಫರಾಝ್ (23) ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಉಕ್ಕುಡ ಕಡೆಯಿಂದ ವಿಟ್ಲ
ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ ನಡೆಯುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಈಸುಬು ಬ್ಯಾರಿ, ಮಹಮ್ಮದ್ ಮಸೂದ್, ಅಬ್ದುಲ್ ಸಮದ್ ಮತ್ತು ಭದ್ರ ಪೂಜಾರಿ ಬಂಧಿತರು. ಮೋವಾಡಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುತ್ತಿದ್ದಾಗ ಗಂಗೊಳ್ಳಿ ಠಾಣಾ ಪಿ. ಎಸ್. ಐ ನಂಜಾನಾಯ್ಕ ತಂಡ ಕಾರ್ಯಾಚರಣೆ ನಡೆಸಿ
ಸುರತ್ಕಲ್‍ನ ಕುಳಾಯಿ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ನಡೆದಿದೆ. ಕೃತ್ಯ ಎಸಗಿ ಕಳ್ಳ ಓಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕುಳಾಯಿ ನಿವಾಸಿ ಬಾಲಕೃಷ್ಣ ಪುರೋಹಿತ್ ಅವರ ಮನೆಗೆ ಕಳ್ಳನೋರ್ವ ನುಗ್ಗಿ ಅವರ ಪತ್ನಿ ಸುಮತಿ ಬಾಲಕೃಷ್ಣ ಆಚಾರ್ಯ ಅವರ ಕುತ್ತಿಗೆಯಿಂದ ನಾಲ್ಕು ಪವನ್ ಚಿನ್ನದ ಕರಿಮಣಿಯನ್ನು ಸೆಳೆದು ಪರಾರಿಯಾದ ಘಟನೆ ನಡೆದಿದೆ.ಇಬ್ಬರು ಯುವಕರು ಮಧ್ಯಾಹ್ನ ಮನೆಗೆ ಆಗಮಿಸಿ