ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಸಂಸ್ಥೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ದೀಪವನ್ನ ಬೆಳಗಿಸುವುದರ ಮೂಲಕ ದೀಪಾವಳಿ ಆಚರಣೆಗೆ ಚಾಲನೆ ನೀಡಿ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೂ ಸಿಬ್ಬಂದಿ ವರ್ಗದವರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಕನ್ನಡ ಮಾಧ್ಯಮ
ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆ ಅಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸೈನಿಕರಿಗೆ ದೀಪಾವಳಿ ಶುಭಾಶಯ ಕೋರುವ ಅವಕಾಶ ಒಂದನ್ನು ಆಯೋಜಿಸಿದ್ದು, ಸಾವಿರಾರು ವಿದ್ಯಾರ್ಥಿಗಳು ದೇಶ ಕಾಯುವ ಯೋಧರಿಗೆ ದೀಪಾವಳಿ ಶುಭಾಶಯ ಪತ್ರ ಬರೆಯಲು ಉತ್ಸಾಹದಿಂದ ಪಾಲ್ಗೊಂಡಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನೂರಾರು ವಿದ್ಯಾರ್ಥಿಗಳ ಪತ್ರವು ಸಮೃದ್ಧ ಬೈಂದೂರು ತಂಡವನ್ನು ತಲುಪಿದ್ದು, ಕೆಲವು ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾಗಿ ತೊಡಗಿಸಿಕೊಂಡು
ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಮಾಡದ ಸರ್ಕಾರ , ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಖಂಡಿಸಿ ದೀಪಾವಳಿ ಬಲಿಪಾಡ್ಯದ ಸಂಭ್ರಮದ ನಡುವೆಯೂ ಸಮಾನಮನಸ್ಕರ ಯುವಕರ ತಂಡ ರಸ್ತೆ ಗುಂಡಿಗಳಲ್ಲಿ ದೀಪ ಹಚ್ಚಿ ದೀಪಾವಳಿ ಆಚರಣೆ ಆಚರಣೆ ಮಾಡಿದ ಘಟನೆ ಬೆಳ್ತಂಗಡಿಯಲ್ಲಿ ನಡೆಯಿತು. ಬುಧವಾರ ಸಂಜೆ ಬೆಳ್ತಂಗಡಿ ಸಮೀಪದ ಲಾಯಿಲ ಗ್ರಾಮದ ರಾಘವೇಂದ್ರ ಮಠದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಗುಂಡಿಗಳಲ್ಲಿ ದೀಪ ಹಚ್ಚಿ ದೀಪಾವಳಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ
ಪುತ್ತೂರು: ಬಿಜೆಪಿ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸಿ, ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲು ಕಾರಣಕರ್ತರಾದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರಿಯ ಬಿಜೆಪಿ ಕಾರ್ಯಕರ್ತರನ್ನು ಒಟ್ಟು ಸೇರಿಸಿ ಬೆಳಕಿನ ಹಬ್ಬದ ಸಂಭ್ರಮಾಚರಣೆ ಹಾಗೂ ಎಲ್ಲರಿಗೂ ಗೌರವಾರ್ಪಣೆ ಮಾಡುವ ಕಾರ್ಯಕ್ರಮ ಅ.23ರಂದು ಪುತ್ತೂರಿನ ಕೊಟೇಚಾ ಸಭಾಭವನದಲ್ಲಿ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ಅವರು ತಿಳಿಸಿದರು. ಶುಕ್ರವಾರ ಪುತ್ತೂರಿನ ಬಿಜೆಪಿ
ಮಂಗಳೂರು: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಆದರೆ ದೀಪಾವಳಿ ಸಂದರ್ಭದಲ್ಲಿ ಅಬ್ಬರದ ಪಟಾಕಿಗಳದ್ದೇ ಕಾರುಬಾರು. ಆದರೆ ಈ ಬಾರಿಯ ದೀಪಾವಳಿಗೆ ಸದ್ದೇ ಮಾಡದ, ಪರಿಸರಕ್ಕೆ ಹಾನಿಯಾಗದ ಪಟಾಕಿಗಳು ಮಾರುಕಟ್ಟೆಗೆ ಬಂದಿದೆ. ಈ ಪರಿಸರಸ್ನೇಹಿ ಪಟಾಕಿ ಹೇಗಿರುತ್ತೆ ಗೊತ್ತಾ ಈ ಸ್ಟೋರಿ ನೋಡಿ ಇದು ಈ ಬಾರಿಯ ದೀಪಾವಳಿಗೆ ಮಾರುಕಟ್ಟೆಗೆ ಬಂದಿರುವ ಪರಿಸರ ಸ್ನೇಹೀ ಪಟಾಕಿಗಳು. ಇಲ್ಲಿ ಬೀಡಿ ಪಟಾಕಿ, ಲಕ್ಷ್ಮಿ ಬಾಂಬ್, ಸುಕ್ಲಿ ಬಾಂಬ್, ರಾಕೆಟ್, ದುರ್ಸು, ನೆಲಚಕ್ರ ಎಲ್ಲಾ ಪಟಾಕಿಗಳೂ
ಪೊಳಲಿ ಟೈಗರ್ಸ್ ಫ್ರೆಂಡ್ಸ್ ಮತ್ತು ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ತಂಡದ ವತಿಯಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ‘ಹಣತೆ ದೀಪ’ ಬೆಳಕಿನ ಹಬ್ಬಕ್ಕೆ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿಯಲ್ಲಿ ದೇವಸ್ಥಾನದ ಆವರಣದಲ್ಲಿ ತುಪ್ಪ ದೀಪ ಅಲಂಕಾರ ಸೇವೆ ನೆರವೇರಿತು… ಈ ವಿಶೇಷ ಸೇವೆಯು ಕಳೆದ ಎರಡು ವರ್ಷಗಳಿಂದ ನಡೆದುಕೊಂಡು ಬಂದಿದ್ದು ಈ ಬಾರಿಯ ಸೇವಾಕಾರ್ಯಕ್ಕೆ ಅತಿಥಿಯಾಗಳು ಸೇರಿ ಚಾಲನೆ ನೀಡಿದರು. ಈ ವೇಳೆ ದೇವಸ್ಥಾನದ ಪ್ರಧಾನ
ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆಯಂದು ಒಳಗಾದ ದೇವರ ಬಲಿ ಉತ್ಸವ ವಾಡಿಕೆಯಂತೆ ದೀಪಾವಳಿ ಅಮವಾಸ್ಯೆ ದಿನದಂದು ಸಂಪ್ರದಾಯದಂತೆ ಆರಂಭಗೊಂಡಿದೆ. ಕಳೆದ ರಾತ್ರಿ ಶ್ರೀ ದೇವರ ಬಲಿ ಹೊರಟು ದೀಪಾವಳಿ ಉತ್ಸವ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಪ್ರಧಾನ ಅರ್ಚಕ ವೇದ.ಮೂ.ವಿ.ಎಸ್.ಭಟ್ ಮತ್ತು ವೇ.ಮೂ. ವಸಂತ ಕೆದಿಲಾಯ ಅವರ ನೇತೃತ್ವದಲ್ಲಿ ಉತ್ಸವಾದಿಗಳು ನಡೆಯಿತು. ದೇವಳದ ಪ್ರಾಕಾರ ಗುಡಿಗಳಲ್ಲಿ ಹೂವಿನ ಪೂಜೆ
ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು. ಸಾನಿಧ್ಯದಲ್ಲಿ ದೀಪಾವಳಿ ಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಸೇರಿ ಸಂಭ್ರಮದಿಂದ ಆಚರಿಸಲಾಯಿತು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ ಅವರು ವಿಶೇಷ ವಿದ್ಯಾರ್ಥಿನಿ ಮಾನ್ಸಿ ಪ್ರಜಾಪತಿ ಹಾಗೂ ಗಣ್ಯರ ಜೊತೆ ಸೇರಿ ಜ್ಯೋತಿ ಬೆಳಗಿಸಿ ದೀಪಾವಳಿ ಹಬ್ಬವನ್ನು ಉದ್ಘಾಟಿಸಿ ಸಂದೇಶ ನೀಡಿದರು. ಮಾತ್ರವಲ್ಲ ವಿಶೇಷ ಮಕ್ಕಳ ಜೊತೆ ಸುಡು