Home Posts tagged #DK District Reporter

ಮಂಗಳೂರು : ಹಿರಿಯ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ಗೌರವ ಸನ್ಮಾನ ಪುರಸ್ಕಾರ

ಮಂಗಳೂರು ಪ್ರೆಸ್‌ಕ್ಲಬ್ ದಿನಾಚರಣೆಯ ಸಂಭ್ರಮದ ಕಾರ್ಯಕ್ರಮವು ಮರವೂರು ದಿ ಗ್ರ್ಯಾಂಡ್ ಬೇ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿ4 ನ್ಯೂಸ್‌ನ ವರದಿಗಾರ ಶರತ್ ಸಾಲ್ಯಾನ್ ಸೇರಿದಂತೆ 9 ಮಂದಿ ಹಿರಿಯ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ಗೌರವ ಸನ್ಮಾನ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮವನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಸುಳ್ಯ: ಹರಿಹರ, ಕೊಲ್ಲಮೊಗ್ರು ಗ್ರಾ.ಪಂ. ವ್ಯಾಪ್ತಿಯ ವಿವಿಧ ಬೇಡಿಕೆಗಳ ಬಗ್ಗೆ ಸಿಎಂಗೆ ಮನವಿ

ಸುಳ್ಯ: ಪತ್ರಕರ್ತರ ಗ್ರಾಮ ವಾಸ್ತವ್ಯ ನಡೆದಿರುವ ಹರಿಹರ ಕೊಲ್ಲಮೊಗ್ರು ಗ್ರಾಮದ ವಿವಿಧ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಗ್ರಾಮಸ್ಥರು ಮನವಿ ಸಲ್ಲಿಸಿದರು.ಕಲ್ಮಕಾರು ಶಾಲಾ ಜಮೀನನ್ನು ಶಾಲಾ ಹೆಸರಿನಲ್ಲಿ ಮಾಡಿ ಕೊಡುವಂತೆ, ಬೆಂಡೋಡಿ ಸರಕಾರಿ ಶಾಲೆಗೆ ಶೌಚಾಲಯ, ರಂಗಮಂದಿರ ಮತ್ತಿತರ ಸೌಲಭ್ಯ ಕಲ್ಪಿಸುವಂತೆ, ಸೇರಿದಂತೆ ಗ್ರಾಮ ವಾಸ್ತವ್ಯ ನಡೆದ ಅವಳಿ ಗ್ರಾಮಕ್ಕೆ ಸಂಬಂಧಿಸಿದಂತೆ ಗ್ರಾಮ ವಾಸ್ತವ್ಯ ದಲ್ಲಿ

ಮಂಗಳೂರು: ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರು: ಪತ್ರಕರ್ತ, ಕನ್ನಡ ಖಾಸಗಿ ನ್ಯೂಸ್ ಚಾನೆಲ್‍ನ ದ.ಕ ಜಿಲ್ಲಾ ವರದಿಗಾರನೋರ್ವನ ಮೇಲೆ ನಿನ್ನೆ ಸಂಜೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಗರದಲ್ಲಿ ನಡೆದಿದೆ. ಖಾಸಗಿ ನ್ಯೂಸ್ ಚಾನೆಲ್‍ನ ದ.ಕ ಜಿಲ್ಲಾ ವರದಿಗಾರ ಸುಖ್‍ಪಾಲ್ ಪೊಳಲಿ ಹಲ್ಲೆಗೊಳಗಾದ ಪತ್ರಕರ್ತ. ನಿನ್ನೆ ಸಂಜೆ ವ್ಯಕ್ತಿಯೊಬ್ಬ ಏಕಾಏಕಿ ಬಂದು ಸುಖ್‍ಪಾಲ್ ಪೊಳಲಿ ಮೇಲೆ ಮಾರಾಕಾಯುಧದಿಂದ ತಲೆಯ ಭಾಗಕ್ಕೆ ಹಲ್ಲೆ ನಡೆಸಲಾಗಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.