ಮಂಗಳೂರು: ಮಂಗಳೂರು ನಗರದಲ್ಲಿರುವ ಜೈಲಿಗೆ ಗುರುವಾರ ಬೆಳ್ಳಂಬೆಳಗ್ಗೆ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಮಾಡಿದ ದಾಳಿ ನಡೆಸಿ ಅಪಾರ ಪ್ರಮಾಣದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೈಲಿಗೆ ಸುಮಾರು 150 ಸಿಬಂದಿಗಳ ಜೊತೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ ವೇಳೆ ಖೈದಿಗಳಿಂದ 25 ಮೊಬೈಲ್ ಫೋನ್‌ಗಳು, 1 ಬ್ಲೂಟೂತ್ ಸಾಧನ, 5 ಇಯರ್‌ಫೋನ್‌ಗಳು, 1 ಪೆನ್
ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದಾಗಿ ಒಳಾಡಳಿತ ಮಂತ್ರಿಗಳಾದ ಜಿ. ಪರಮೇಶ್ವರ್ ಅವರು ಪೋಲೀಸು ಅಧಿಕಾರಿಗಳ ಸಭೆಯಲ್ಲಿ ಹೇಳಿದರು. ಬೆಂಗಳೂರು ಮತ್ತು ಮಂಗಳೂರುಗಳ ಮಾದಕ ದ್ರವ್ಯಗಳ ಲೋಕ, ಆಫ್ರಿಕಾದ ವಿದ್ಯಾರ್ಥಿಗಳ ಡ್ರಗ್ಸ್ ಕೈಚಳಕವನ್ನೂ ಅವರು ಪ್ರಸ್ತಾಪ ಮಾಡಿದರು. ಈ ಶಬ್ದ ನೋಡಿ ಡ್ರಗ್ಸ್. ಡ್ರಗ್ಸ್ ಎಂದರೆ ಮದ್ದುಗಳು. ಮದ್ದುಗಳಿಂದ ಲೋಕವನ್ನು ಮುಕ್ತ ಮಾಡುವುದು ಸಾಧ್ಯವಿಲ್ಲ. ಮದ್ದುಗಳ ದುರ್ಬಳಕೆಯೇ ಮಾದಕ ದ್ರವ್ಯ ಇಲ್ಲವೇ ಮಾದಕ ವಸ್ತುಗಳು. ಆದ್ದರಿಂದ ಅದು ಕೂಡ
ಮೂಡುಬಿದಿರೆ: ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ತಂಡವು ವಶಕ್ಕೆ ಪಡೆದುಕೊಂಡಿದೆ. ಬೆಳುವಾಯಿ ನಿವಾಸಿಗಳಾದ ಮಹಮ್ಮದ್ ಅಯಾನ್( 22 ವ), ಫರ್ಹಾನ್ ಖಾನ್ (18ವ) ಹಾಗೂ ಶೇಖ್ ಮುಹಮ್ಮದ್ ಜುಬೈರ್ (19) ಬಂಧಿತರು. ಇವರು ಮೂವರು ಬೆಳುವಾಯಿ ಕಾಂತಾವಾರ ದ್ವಾರದ ಬಳಿ ಸ್ಕೂಟರ್ ನಲ್ಲಿ ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆಂದು ಖಚಿತ
ಪುತ್ತೂರು: ಮಾದಕ ದ್ರವ್ಯ ಗಾಂಜಾ ನಶೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಬಂಧಿಸಿದ ಘಟನೆ ನಡೆದಿದೆ. ಕಬಕ ಗ್ರಾಮದ ಕಲ್ಲಂದಡ್ಕ ನಿವಾಸಿ ಉಮ್ಮರ್ ಫಾರೂಖ್ (36ವ) ಬಂಧಿತ ಆರೋಪಿ. ಎಸ್.ಐ ಶ್ರೀಕಾಂತ್ ರಾಥೋಡ್ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಬಕ ಗ್ರಾಮದ ಪೋಳ್ಯ ಸಾರ್ವಜನಿಕ ಬಸ್ ತಂಗುದಾಣದಲ್ಲಿ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸುತ್ತ
ಕುಂದಾಪುರ ತಾಲೂಕು ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಹಂಚಿಕೆಯಲ್ಲಿ ತೊಡಗಿಸಿಕೊಂಡಿದ್ದ ರವಿರಾಜ್ ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ಎಸ್ಪಿ, ಡಿಎಸ್ಪಿ, ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜಾ ನಾಯ್ಕ ಹಾಗೂ ಎಎಸ್ಐ ರಘುರಾಮ್ ಮತ್ತು ಪೊಲೀಸ್ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಲ್ಲಿ ಆಪಾದಿತ ರವಿರಾಜ್ ಎಂಬಾತನನ್ನು ಬಂಧಿಸಿ ಮಾರಾಟ ಮಾಡುತ್ತಿದ್ದ ಗಾಂಜಾವನ್ನು ವಶ ಪಡಿಸಿಕೊಂಡು ಪ್ರಕರಣವನ್ನು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ