Home Posts tagged #gurupura

ಬಜಪೆ: ಯುವಕ ನಾಪತ್ತೆ

ಬಜಪೆ: ಗುರುಪುರ ಫಲ್ಗುಣಿ ನದಿಯ ಸೇತುವೆ ಸಮೀಪದಿಂದ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಳಲಿ ಮಟ್ಟಿ ತಿಮ್ಮೊಟ್ಟು ನಿವಾಸಿ ಚೇತನ್ ಪೂಜಾರಿ ( 27) ಎಂದು ತಿಳಿದು ಬಂದಿದೆ. ಗುರುವಾರ ಸಂಜೆಯಿಂದ ಗುರುಪುರ ಫಲ್ಗುಣಿ ನದಿ ಸೇತುವೆಯಲ್ಲಿ ಬೈಕ್ ವೊಂದು ನಿಲ್ಲಿಸಿವ ಕುರಿತು ಬಜ್ಪೆ ಪೊಲೀಸರಿಗೆ ಮಾಹಿತಿ ಬಂದಿದೆ. ಈ

ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಚಾತುರ್ಮಾಸ್ಯ ಸಂಪನ್ನ

ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ 24ನೇ ಚಾತುರ್ಮಾಸ್ಯವು ಶ್ರೀವಜ್ರದೇಹಿ ಮಠದಲ್ಲಿ ಸಂಪನ್ನಗೊಂಡಿತು. ಪೂಜ್ಯ ಶ್ರೀಗಳು ಮೃತ್ತಿಕಾ ಪೂಜೆಯನ್ನು ನೆರವೇರಿಸಿದರು. ವ್ಯಾಸ ಪೂಜೆ ಮತ್ತು ಪಟ್ಟದ ದೇವರ ಮಹಾ ಪೂಜೆಯನ್ನು ನೆರವೇರಿಸಿದರು. ಅನಂತರ ಭಕ್ತರು ಈ ಸತ್ಕರ್ಮದಲ್ಲಿ ಪಾಲ್ಗೊಂಡಿದ್ದರು.

ಗುರುಪುರ : ಗ್ರಾಮ ಸಭೆ ನಡೆಸದಂತೆ ಗ್ರಾಮಸ್ಥರಿಂದ ಪ್ರತಿಭಟನೆ

ಕಳೆದು ಮೂರು ವರ್ಷಗಳ ಹಿಂದೆ ಗುರುಪುರ ಬಂಗ್ಲಗುಡ್ಡೆಯಲ್ಲಿ ಗುಡ್ಡ ಕುಸಿದು ಮನೆ ಕಳೆದುಕೊಂಡಿದ್ದ ಗ್ರಾಮಸ್ಥರು ಇಂದು ಗುರುಪುರ ಗ್ರಾಮಸಭೆ ನಡೆಸದಂತೆ ಪ್ರತಿಭಟನೆ ನಡೆಸಿದ್ದಾರೆ. ಗುಡ್ಡ ಕುಸಿತದಿಂದ 11 ಕುಟುಂಬಗಳು ಮನೆ ಕಳೆದುಕೊಂಡಿದ್ದಾರೆ. ಪರಿಹಾರ ಒದಗಿಸಬೇಕು ಎಂದು ಸಂತ್ರಸ್ತ ಕುಟುಂಬದವರು ಪ್ರತಿಭಟನೆ ನಡೆಸಿದ್ದಾರೆ. ಪರಿಹಾರ ಒದಗಿಸುವ ದಿನಾಂಕ ಮತ್ತು ಎಲ್ಲಾ ಅಧಿಕಾರಿಗಳು ಬಂದರೆ ಮಾತ್ರ ಸಭೆ ನಡೆಸಬೇಕೆಂದು ಒತ್ತಾಯಿಸಿದರು. ಇಂದು ಸಭೆಗೆ 28 ಅಧಿಕಾರಿಗಳ

ಗುರುಪುರ : ಬಸ್ ಢಿಕ್ಕಿಯಾಗಿ ಯುವಕ ಸಾವು- ಕೈಕಂಬ ಜಂಕ್ಷನ್‍ನಲ್ಲಿ ಪ್ರತಿಭಟನೆ

ಮಂಗಳೂರು: ಗುರುಪುರ ಜಂಕ್ಷನ್ ಬಳಿ ಜೂನ್ 22ರಂದು ಬಸ್ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆಯನ್ನು ಖಂಡಿಸಿ ಶುಕ್ರವಾರ ಸ್ಥಳೀಯರು ಕೈಕಂಬ ಜಂಕ್ಷನ್‍ನಲ್ಲಿ ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಬಸ್ ಢಿಕ್ಕಿಯಾಗಿ ಬೈಕ್ ಸವಾರ ಪೊಳಲಿ ಕರಿಯಂಗಳ ನಿವಾಸಿ ಸಂತೋಷ್ ಕುಮಾರ್ ಅವರು ಮೃತಪಟ್ಟಿದ್ದು ಈ ಘಟನೆಯನ್ನು ಖಂಡಿಸಿ ನೂರಾರು ಮಂದಿ ಪ್ರತಿಭಟನೆ ಸೇರಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಕೈಕಂಬ ಜಂಕ್ಷನ್

ಗುರುಪುರ ಅಪಘಾತದಲ್ಲಿ ಸ್ಥಳದಲ್ಲೇ ವ್ಯಕ್ತಿ ಮೃತ್ಯು

ಕರಿಯಂಗಳ ನಿವಾಸಿ ಸಂತೋಷ್ ಇಂದು ಮುಂಜಾನೆ ವಾಮಂಜೂರು ಕಡೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಗುರುಪುರದ ಬಳಿ ಖಾಸಗಿ ಬಸ್ಸಿನ ಅತೀ ವೇಗದ ಚಾಲನೆಯಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ

ಗುರುಪುರ ಕೈಕಂಬ ಇಳಿಜಾರು ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ!!

ಮಂಗಳೂರು:ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿ,ಚಾಲಕರಿಬ್ಬರು ಮೃತಪಟ್ಟ ಘಟನೆಯೊಂದು ನಗರದ ಹೊರವಲಯದ ಗುರುಪುರ-ಕೈಕಂಬ ಬಳಿಯ ಇಳಿಜಾರು ಪ್ರದೇಶದಲ್ಲಿ ನಡೆದಿದೆ. ಮೂಡುಬಿದ್ರೆ ಕಡೆಯಿಂದ ಮಣ್ಣು ಹೊತ್ತು ಬರುತ್ತಿದ್ದ ಬೃಹತ್ ಲಾರಿ ಹಾಗೂ ಗುರುಪುರ ಕಡೆಯಿಂದ ಹೋಗುತ್ತಿದ್ದ ಲಾರಿ ನಡುವೆ ಇಳಿಜಾರು ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆ ಬದಿಯ ಹೊಂಡಕ್ಕೆ ಇಳಿದು ನಿಂತ ಪರಿಣಾಮ ಚಾಲಕರನ್ನು

ಗುರುಪುರ ‌ಸೇತುವೆಯಿಂದ ನದಿಗೆ ಹಾರಿದ ಯುವಕ : ಪೊಲೀಸರಿಂದ ಶೋಧ ಕಾರ್ಯಾಚರಣೆ

ಅರುಣ್ ಕುಮಾರ್ ಅ.27ರಂದು ಸಂಜೆ 7ಗಂಟೆ ಸುಮಾರಿಗೆ ಫಲ್ಗುಣಿ ನದಿಗೆ ಹಾರಿದ್ದರು‌. ಇಂದು ಬೆಳಗ್ಗಿನಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು ಈವರೆಗೆ ಅವರು ಪತ್ತೆಯಾಗಿಲ್ಲ. ಅರುಣ್ ಕುಮಾರ್ ವಿವಾಹಿತರಾಗಿದ್ದು, ಒಂದು ಮಗು ಕೂಡಾ ಇದೆ. ಅವರು ನದಿಗೆ ಹಾರಿರುವುದಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುಪುರ ಸಮೀಪದ ಅಣೆ ಬಳಿಯಲ್ಲಿ ಗುಡ್ಡ ಕುಸಿತ : ಲಘು ವಾಹನಗಳ ಸಂಚಾರಕ್ಕೆ ನಿರ್ಬಂಧ

ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ ಸೇರಿದಂತೆ ಅಪಾರ ಹಾನಿ ಸಂಭವಿಸಿದೆ. ಇನ್ನು ಗುರುಪುರ ಸಮೀಪದ ಅಣೆ ಬಳಿಯಲ್ಲಿ ಗುಡ್ಡ ಕುಸಿತಗೊಂಡಿದ್ದು, ರಸ್ತೆ ಅಪಾಯದಂಚಿನಲ್ಲಿದೆ. ಸ್ಥಳಕ್ಕೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುರುಪುರ ಕೈಕಂಬದಲ್ಲಿ ಸಿ.ಪಿ.ಐ.ಎಂ.ಪಕ್ಷದ 23 ನೇ ಜಿಲ್ಲಾ ಸಮಾವೇಶ

ಗುರುಪುರ ಕೈಕಂಬದಲ್ಲಿ ನಡೆದ ಸಿ.ಪಿ.ಐ.ಎಂ.ಪಕ್ಷದ 23 ನೇ ಜಿಲ್ಲಾ ಸಮಾವೇಶದ ಬಹಿರಂಗ ಸಭೆಯನ್ನು ಉದ್ದೇಶಿಸಿ ಕೇರಳ ರಾಜ್ಯದ ಮಾಜಿ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರು ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು

ಪ್ರವಾದಿ ನಿಂದನೆಯನ್ನು ವಿರೋಧಿಸಿ ಪ್ರತಿಭಟನೆ

ಗುರುಪುರ ಕೈಕಂಬ; ಪ್ರವಾದಿ ನಿಂದನೆ ಹಾಗೂ ಮುಸ್ಲಿಂ ಸಮುದಾಯದ ಮೇಲಾಗುತ್ತಿರುವ ನಿರಂತರ ದೌರ್ಜನ್ಯದ ವಿರುದ್ಧ ಎಸ್‌ಕೆಎಸ್‌ಎಸ್‌ಎಫ್ ಕೈಕಂಬ ವಲಯದಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಎಂ. ಇಸ್ಹಾಕ್ ಕೌಸರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ನಿಮಗಿಂತಲೂ ಪ್ರವಾದಿಯನ್ನು ನಿಂದಿಸಿದ ಜನರು ಕಳೆದುಹೋಗಿದ್ದಾರೆ. ಅವರಲ್ಲಿ ಬಹಳಷ್ಟು ಜನರು ಪ್ರವಾದಿಯವರನ್ನು ಅರಿತಾಗ ಇಸ್ಲಾಂ ಸ್ವೀಕರಿಸಿದ ಚರಿತ್ರೆಯಿದೆ. ಪ್ರವಾದಿಯನ್ನು