Home Posts tagged #hasana (Page 2)

ಸಮಾಜಸೇವಕ ರಾಜಶೇಖರ್ ಹುಟ್ಟು ಹಬ್ಬ ಹಿನ್ನೆಲೆ – ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬೇಲೂರು : ಕಾಂಗ್ರೆಸ್ ಮುಖಂಡ ಮತ್ತು ಸಮಾಜಸೇವಕ ಹಾಗೂ ಪುಷ್ಪಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ರಾಜಶೇಖರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹಾಲು ಬ್ರೆಡ್ ಹಣ್ಣು ವಿತರಿಸಲಾಯಿತು. ಸಮಾಜ ಸೇವಕ ಗ್ರಾನೈಟ್ ರಾಜಶೇಖರ್ 59 ನೇ ಜನ್ಮ ದಿನದ ಅಂಗವಾಗಿ ಜಿಲ್ಲಾ ಸೇವಾದಳ ಯುವ ಬ್ರಿಗೇಡ್ ಹಾಗೂ ಅಭಿಮಾನಿಗಳಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ

ಬೆಂಕಿ ತಗುಲಿ ಮನೆ ಸಂಪೂರ್ಣ ಭಸ್ಮ – ಕಂಗಲಾಗಿರುವ ಕುಟುಂಬಕ್ಕೆ ಬೇಕಾಗಿದೆ ಸಹಾಯಹಸ್ತ.

ಆಲೂರು ಸಕಲೇಶಪುರ ವಿಧಾನ ಸಭಾ ವ್ಯಾಪ್ತಿಗೆ ಬರುವ ಹಾಸನ ಜಿಲ್ಲೆ ಕಟ್ಟಾಯ ವ್ಯಾಪ್ತಿಯ ಮುಕುಂದೂರು ಮಲ್ಲೇನಹಳ್ಳಿ ಗ್ರಾಮದಲ್ಲಿ ಹೇಮಾವತಿ ಎಂಬುವವರ ಮನೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದಿದ್ದು ಸಂಪೂರ್ಣ ಕರಕಲಾಗಿರುವ ಘಟನೆ ನಡೆದಿದೆ. ಮನೆಗೆ ಬೆಂಕಿ ತಗುಲಿ ಉರಿಯುತ್ತಿದ್ದಂತೆ ಗ್ರಾಮ ಜನರು ತಕ್ಷಣ ನೀರು ಹಾಕಿ ಬೆಂಕಿಯ ಕೆನ್ನಾಲಿಗೆ ತಿಳಿಗೊಳಿಸಲು ಹರಸಹಾಸಪಟ್ಟರು. ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ನಿತ್ಯ ಕೋಲಿ ನಂಬಿ ಜೀವನ ಸಾಗಿಸುತ್ತಿದ್ದ

ಬೇಲೂರಿನ ಸನ್ಯಾಸಿಹಳ್ಳಿ ಗ್ರಾಮದಲ್ಲಿ ಜೋಳದ ಬೆಳೆ ಹಾನಿ

ಮೂಲ ಮಾಲೀಕರ ಹೆಸರಿನಲ್ಲಿ ಭೂಮಿಯ ಪಹಣಿ ಇನ್ನಿತರ ದಾಖಲೆಗಳಿದ್ದರೂ, ಸರಕಾರದಿಂದ ನನಗೆ ಭೂಮಿ ಮಂಜೂರಾಗಿದೆ ಎಂದು ಹೇಳಿ ಮೂಲ ಭೂ ಮಾಲೀಕ ಬೆಳೆದಿದ್ದ ಜೋಳದ ಬೆಳೆಯನ್ನು ಟ್ರಾಕ್ಟರ್‍ನಿಂದ ಉಳುಮೆ ಮಾಡಿ ಹಾನಿ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ಸನ್ಯಾಸಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಭೂ ಮಾಲೀಕ ಮಂಜುನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದರಖಾಸ್ತಿನ ಮೂಲಕ ಜವರಮ್ಮ ಎಂಬುವರಿಗೆ ಮಂಜೂರಾಗಿದ್ದ ಸರ್ವೆ ನಂಬರ್

ಹಾಸನ : ಬೆಂಕಿ ತಗುಲಿ ಮನೆ ಸಂಪೂರ್ಣ ನಾಶ

ಆಕಸ್ಮಿಕ ಬೆಂಕಿ ತಗುಲಿ ಮನೆಯೊಂದು ಸಂಪೂರ್ಣ ನಾಶವಾಗಿರುವ ಘಟನೆ ಹಾಸನ ತಾಲೂಕು ಕಾರ್ಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಕುಂದೂರು ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೇಮಾವತಿ ಎಂಬುವರಿಗೆ ಸೇರಿದ ಮನೆ ಬೆಂಕಿಗೆ ಸಂಪೂರ್ಣವಾಗಿ ಸುಟ್ಟುಹೋಗಿದ್ದು , ಕುಟುಂಬಸ್ಥರು ದಿಕ್ಕಿಲ್ಲದೆ ನರಳುವಂತಾಗಿದೆ. ಮನೆಯಲ್ಲಿ ವಾಸವಾಗಿದ್ದ ಹೇಮವತಿ ಮತ್ತು ಅವರ ಇಬ್ಬರು ಮಕ್ಕಳು ಭರತ್ ಮತ್ತು ಶ್ರಾವಣಿ . ಮನೆಯಲ್ಲಿದ್ದ ದವಸ ಧಾನ್ಯ ಬಟ್ಟೆ ಸಂಪೂರ್ಣ ನಾಶವಾಗಿದೆ. ಘಟನೆ

ಸಕಲೇಶಪುರ : ಬೆಳ್ಳಂಬೆಳಗ್ಗೆ ಕೊಲ್ಲಹಳ್ಳಿಯಲ್ಲಿ ಕಾಡಾನೆ ಪ್ರತ್ಯಕ್ಷ

ಸಕಲೇಶಪುರ : ಕೊಲ್ಲಹಳ್ಳಿಯ ಬಿಎಮ್ ರಸ್ತೆಯಲ್ಲಿ ಮುಂಜಾನೆ ಕಾಡಾನೆಯೊಂದು ರಾಜಾರೋಷವಾಗಿ ತಿರುಗಾಡುತ್ತಿರುವುದು ಕಂಡುಬಂತು. ಕಳೆದ ಎರಡು ದಿನಗಳ ಹಿಂದಷ್ಟೇ ಕಾಡಾನೆಗಳಿಗೆ ವಿಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆಸಲಾಗಿತ್ತು. ರಾತ್ರಿ ಸಮಯದಲ್ಲಿ ಹೊರಗೆ ಬರಲು ಜನತೆ ಭಯ ಪಡುತ್ತಿದ್ದಾರೆ. ಕಳೆದ ವಾರವಷ್ಟೇ ಇದೇ ಪ್ರದೇಶದಲ್ಲಿ ಎರಡು ಜನರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ. ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗಲು ಕೆಲಸಗಾರರು ಭಯ ಪಡುವಂತಾಗಿದೆ.

ಸಕಲೇಶಪುರ : ಶಾಸಕ ಸಿಮೆಂಟ್ ಮಂಜುಗೆ ಕಾರ್ಯಕರ್ತರಿಂದ ಅಭಿನಂದನೆಗಳ ಮಹಾಪೂರ

ಸಕಲೇಶಪುರ ಕ್ಷೇತ್ರದ ನೂತನ ಶಾಸಕ ಸಿಮೆಂಟ್ ಮಂಜುನಾಥ್ ಅವರಿಗೆ ಸಕಲೇಶಪುರ ಕ್ಷೇತ್ರದ ಕಟ್ಟಾಯ ಹೋಬಳಿ ಕೇಂದ್ರದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಸಿಮೆಂಟ್ ಮಂಜು ರವರ ಮನೆಗೆ ಬಿಜೆಪಿ ಕಾರ್ಯಕರ್ತರು ಭೇಟಿ ನೀಡುತ್ತಿದ್ದಾರೆ. ಬಿ.ಬಿ ಶಿವಪ್ಪನವರು ಬಳಸುತ್ತಿದ್ದ ಶಾಲು ಮತ್ತು ಪೆನ್ ಅನ್ನು ಉಡುಗೊರೆಯಾಗಿ ಸಿಮೆಂಟ್ ಮಂಜುನಾಥ್ ಪಡೆದರು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ : ಜೈನ ಸಂಪ್ರದಾಯದಂತೆ ನಡೆದ ಅಂತ್ಯಕ್ರಿಯೆ

ಜೈನ ಸಂಪ್ರದಾಯದಂತೆ, ಸೂರ್ಯಾಸ್ತಕ್ಕೂ ಮುನ್ನವೇ ಗುರುವಾರ ಸಂಜೆ 6.05ಕ್ಕೆ ಬೆಟ್ಟದ ತಪ್ಪಲಿನಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಂತ್ಯಕ್ರಿಯೆ ನಡೆಯಿತು. ಮೂರು ಕುಶಾಲು ತೋಪುಗಳನ್ನು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು. ಸಂಜೆಯ ವೇಳೆಗೆ ಚಾವುಂಡರಾಯ ಮಂಟಪದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ನಂತರ ನಮೋಕಾರ ಮಹಾಮಂತ್ರ, ಮಹಾಶಾಂತಿಧಾರ ಪಠಣ, ವಿವಿಧ ಮಂಗಲವಾದ್ಯಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಪಾರ್ಥಿವ ಶರೀರದ

ಆಲೂರು : ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜಾನಪದ ಸಂಗೀತ ಕಾರ್ಯಕ್ರಮ

ಆಲೂರು ತಾಲ್ಲೂಕಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಕನ್ನಡ ವಿಭಾಗ ಆಲೂರು ಇವರ ಸಂಯುಕ್ತಾಶ್ರಯದೊಂದಿಗೆ ವಿಶೇಷ ಘಟಕ ಯೊಜನೆಯಡಿ ಜಾನಪದ ಸಂಗೀತ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಹೆಚ್.ಈ ದ್ಯಾವಪ್ಪ ಅವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ,

ಜಿಂಕೆ ಬೇಟೆಯಾಡಿದ ಆರೋಪಿ ಬಂಧನ

ಗುಂಡ್ಲುಪೇಟೆ: ಕಾಡಿನಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಾಣಿಕೆ ಅರಣ್ಯಾಧಿಕಾರಿಗಳು ದಾಳಿ ಒಬ್ಬನ ಬಂಧನ ಇಬ್ಬರು ಪರಾರಿ.. ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ವಲಯದ ಮಾವಿನ ಮರದ ಹಳ್ಳ ಅರಣ್ಯ ಪ್ರದೇಶದಲ್ಲಿ ಮೂವರು ಅರಣ್ಯ ಪ್ರದೇಶದಲ್ಲಿ ಒಂಟಿ ನಳಿಕೆ ಬಂದೂಕಿನಿಂದ ಒಂದು ಜಿಂಕೆಯನ್ನು ಕೊಂದು ಮಾಂಸವಾಗಿ ಪರಿವರ್ತಿಸಿ ಹೊತ್ತಿಕೊಂಡು ಬರುತ್ತಿರುವುದನ್ನು ಕಂಡುಬಂದು ಆರೋಪಿಗಳನ್ನು ಸುತ್ತುವರೆದು ಹಿಡಿಯುವ ಪ್ರಯತ್ನ ಮಾಡಿದಾಗ, ಒಬ್ಬ ಆಸಾಮಿಯು ಕಾಡಿನಲ್ಲಿ

ರಾಜ್ಯದಲ್ಲಿ 3 ದಿನ ಭಾರೀ ಮಳೆ : ಭಾರತೀಯ ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ 3 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು ಕರಾವಳಿಯ ಹಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆ ಹೆಚ್ಚು ಮಳೆಯಾಗಲಿದೆ. ಕರ್ನಾಟಕದ ಉತ್ತರ ಒಳನಾಡು, ಮಲೆನಾಡು, ಕರಾವಳಿ ಭಾಗಗಳಲ್ಲಿ ನ. 17ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ, ಗದಗ,