ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿರುದ್ಧ ಹಿಂದೂ ಮಹಾಸಭಾ ಕಿಡಿಕಾರಿದೆ. ನಳಿನ್ ಕುಮಾರ್ ಕಟೀಲ್ ಅವರು ತಾಕತ್ತಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲಿ, ಅರುಣ್ ಕುಮಾರ್ ಪುತ್ತಿಲ ಅವರು ಪಡೆದ ಮತಗಳ 10 ಶೇಖಡಾ ಮತಗಳನ್ನು ಪಡೆದು ತೋರಿಸಲಿ ಎಂದು ಹಿಂದೂ ಮಹಾಸಭಾ ಚಾಲಕ್ ಧರ್ಮೇಂದ್ರ ಅಮೀನ್ ಸವಾಲೆಸೆದಿದ್ದಾರೆ. ಪುತ್ತೂರಿನಲ್ಲಿ
2023 ರ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಬೀದಿಗೆ ಬೆದರಿದ ಭಾರತೀಯ ಜನತಾ ಪಕ್ಷದ ಹತಾಶೆಯ ನಡೆಯೇ ಈ ಬಾಂಬ್ ಬ್ಲಾಸ್ಟ್ ಪ್ರಕರಣ…ಅತಂಕವಾದ ಅಳಿಸಿ ..ದೇಶ ಉಳಿಸಿ ಎಂಬ ಹಿಂದೂ ಮಹಾಸಭಾ ಘೋಷ ವಾಕ್ಯವನ್ನು ಷಡ್ಯಂತ್ರದಿಂದ ತನ್ನದಾಗಿಸಿಕೊಂಡಂತಹ ಭಾರತೀಯ ಜನತಾ ಪಕ್ಷ ,ಕನಿಷ್ಠ ಪಕ್ಷ, ಆ ವಾಕ್ಯದ ಮೌಲ್ಯವನ್ನು ತಿಳಿದುಕೊಂಡಿದ್ದರೆ, ಇವತ್ತು ಈ ಘಟನೆ ಸಂಭವಿಸುತ್ತಿರಲಿಲ್ಲ. ಆಡಳಿತದಲ್ಲಿರುವ ಸರಕಾರ ದ ವೈಫಲ್ಯವೆ ಈ ಘಟನೆಗೆ ಕಾರಣ.ಭಾರತೀಯ ಜನತಾ ಪಕ್ಷದ ಹಿಂದೂ ವಿರೋಧಿ