ತಾನು ಕಳ್ಳ ಪರರ ನಂಬ ಎಂಬ ಸ್ಥಿತಿ ಯಾರದ್ದು ಎಂದು ನೀವೇ ಲೆಕ್ಕ ಹಾಕಿಕೊಳ್ಳಿ. ಒಳಾಡಳಿತ ಮಂತ್ರಿಗಳಾದ ಅಮಿತ್ ಶಾ ಹೇಳುವುದು ಕೇಳಿ. ನಾವು ಚುನಾವಣಾ ಬಾಂಡ್ ಮೂಲಕ ಮಾತ್ರ ಪಕ್ಷದ ನಿಧಿ ಪಡೆದಿದ್ದೇವೆ. ಆದರೆ ಕಾಂಗ್ರೆಸ್ ಮತ್ತಿತರ ಪಕ್ಷಗಳು ನಗದು ದೇಣಿಗೆ ಪಡೆದು ಸಾವಿರ ರೂಪಾಯಿ ಕಿಸೆಗೆ ಹಾಕಿಕೊಂಡು, ನೂರು ರೂಪಾಯಿ ಮಾತ್ರ ಪಕ್ಷದ ಖಾತೆಗೆ ಜಮಾ ಮಾಡಿವೆ. ಅಮಿತ್ ಶಾ
ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾನ್ಯ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರನ್ನು ದಕ್ಷಿಣಕನ್ನಡ ಜಿಲ್ಲೆಯ ಶಾಸಕರ ನಿಯೋಗದಿಂದ ಭೇಟಿ ಮಾಡಿ ಚರ್ಚಿಸಲಾಯಿತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆಗಳು ಅಲ್ಲಲ್ಲಿ ನಡೆಯತ್ತಿದ್ದು, ಉಪ್ಪಿನಂಗಡಿಯಲ್ಲಿ ಮಂಗಳವಾರ ನಡೆದ ಘಟನೆಯನ್ನು ಪ್ರಸ್ತಾಪಿಸಲಾಯಿತು. ಪೋಲೀಸರ ಮೇಲೆ ಹಲ್ಲೆ, ಠಾಣೆಗೆ ಪ್ರವೇಶಿಸಿ ಸಿಬ್ಬಂದಿಗಳ ಮೇಲೆ ದುರ್ವರ್ತನೆ ತೋರಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು