Home Posts tagged #kadri

ಮಂಗಳೂರಿನಲ್ಲಿ ಏಕಕಾಲದಲ್ಲಿ ಬೃಹತ್ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ

ಮಂಗಳೂರು: ಮಹಾತ್ಮಾ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಅಹಿಂಸೆಯ ಜೊತೆ ಜೊತೆಗೆ ಸ್ವಚ್ಛತೆ ಹಾಗೂ ನೈರ್ಮಲೀಕರಣಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಸ್ವಚ್ಛತೆ -ನೈರ್ಮಲೀಕರಣ ಒಂದು ಅಭಿಯಾನವಾಗಿ ದೇಶದಾದ್ಯಂತ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಸ್ವಚ್ಛತಾ ಕ್ರಮಗಳನ್ನು ದೈನಂದಿನ ಜೀವನದಲ್ಲಿ ಅನುಸರಿಸುವುದು ಅವಶ್ಯಕವಾಗಿದೆ. ಆದ ಕಾರಣ ಅ. 2ರ

ಪುರಾತನ ದೇವಸ್ಥಾನಗಳ ತೆರವು ವಿಚಾರ : ವಿಹಿಂಪ, ಬಜರಂಗದಳದಿಂದ ಪ್ರತಿಭಟನೆ

ಪುರಾತನವಾದ ದೇವಸ್ಥಾನಗಳನ್ನು ಹೊತ್ತುಗೊತ್ತು ಇಲ್ಲದ ವೇಳೆಯಲ್ಲಿ ತುಘಲಕ್ ನೀತಿಯಂತೆ ಅಕ್ರಮವಾಗಿ ತೆರವು ಗೊಳಿಸಿವುದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪ್ರಾಂತ ಕಾರ್ಯಾಧ್ಯಕ್ಷರಾದ ಎಂ.ಬಿ. ಪುರಾಣಿಕ್ ಹೇಳಿದರು. ಅವರು ರಾಜ್ಯದಲ್ಲಿ ಪುರಾತನ ದೇವಸ್ಥಾನ ತೆರವುಗೊಳಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ನಗರದ ಕದ್ರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಜಿಲ್ಲಾಡಳಿತ ಸುಪ್ರೀಂ ಕೋರ್ಟ್‍ನ

 ಕದ್ರಿ ಪಾರ್ಕ್ ಮುಂಭಾಗದಲ್ಲಿ ಅಕ್ರಮ ಗೂಡಂಗಡಿಗಳ ತೆರವು : ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪಾರ್ಕ್ ಮುಂಭಾಗದಲ್ಲಿ ಅಕ್ರಮ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ. ಪಾಲಿಕೆ ಕಮೀಷನರ್ ಅಕ್ಷಯ್ ಶ್ರೀಧರ್ ಅವರ ಸೂಚನೆ ಮೇರೆಗೆ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ತೆರವು ನಡೆಸಲಾಯ್ತು. ಪಾರ್ಕ್ ಮುಂಭಾಗದಲ್ಲಿ ಸುಮಾರು 10ಕ್ಕೂ ಅಧಿಕ ಅಕ್ರಮ ಗೂಡಂಗಡಿಗಳ ತೆರವು ಮಾಡಲಾಗಿದೆ. ಇನ್ನು ಈ ಪ್ರದೇಶದಲ್ಲಿ ಸ್ಮಾಟ್ ಸಿಟಿ ಯೋಜನೆಯಲ್ಲಿ ರಸ್ತೆ ಕಾಮಗಾರಿ ಹಾಗೂ ಫುಡ್ ಕೋರ್ಟ್ ಗಳ ಕಾಮಗಾರಿ ನಡೆಸಲಾಗುತ್ತದೆ. ಈ

ಜುಲೈ 26ರಂದು ಕದ್ರಿಯ ವೀರ ಯೋಧರ ಸ್ಮಾರಕದಲ್ಲಿ ಕಾರ್ಗಿಲ್ ವಿಜಯೋತ್ಸವ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತ್ರಾವತಿ ವಲಯ ಮಂಗಳೂರು ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ವತಿಯಿಂದ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವ ನಗರದ ಕದ್ರಿಯ ಹುತಾತ್ಮ ಯೋಧರ ಸ್ಮಾರಕದಲ್ಲಿ ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ದಯಾನಂದ ಕಟೀಲ್ ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಜುಲೈ 26ರಂದು ಬೆಳಗ್ಗೆ 6:30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಗಿಲ್ ಕದನದಲ್ಲಿ ಅಪ್ರತಿಮ ಧೈರ್ಯ, ಸಾಹಸ,

ಕದ್ರಿ ಮಂಜುನಾಥ ಕ್ಷೇತ್ರಕ್ಕೆ ನೂತನ ವ್ಯವಸ್ಥಾಪನ ಸಮಿತಿ

ಕರಾವಳಿಯ ಪ್ರಸಿದ್ಧ ಕ್ಷೇತ್ರ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಕ್ಷೇತ್ರಕ್ಕೆ ನೂತನ ವ್ಯವಸ್ಥಾಪನ ಸಮಿತಿಯ ರಚನೆಯಾಗಿದೆ. ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಎ.ಜೆ.ಶೆಟ್ಟಿ ಆಯ್ಕೆಗೊಂಡರೆ, ಸದಸ್ಯರಾಗಿ ರಾಘವೇಂದ್ರ ಅಡಿಗ, ಕೆ.ದೇವದಾಸ್ ಕುಮಾರ್, ಎಚ್.ಕುಸುಮಾ ದೇವಾಡಿಗ, ಎನ್.ನಿವೇದಿತ ಶೆಟ್ಟಿ, ಕೆ.ರಾಜೇಶ್ , ಎಚ್.ಕೆ.ಪುರುಷೋತ್ತಮ ಜೋಗಿ, ಮನೋಹರ್ ಸುವರ್ಣ, ನಾರಾಯಣ್ ಕೋಟ್ಯಾನ್ ಬೋಳಾರ್ ಆಯ್ಕೆಯಾಗಿದ್ದಾರೆ. ಮೂರು ವರ್ಷದ ಅವಧಿಗೆ ವ್ಯವಸ್ಥಾಪನ

ಸೆಲೂನ್‌ಗೆ ನುಗ್ಗಿ ಮಹಿಳೆಗೆ ಹಲ್ಲೆ : ಸಿಸಿಟಿವಿಯಲ್ಲಿ ದಾಖಲು

ಮಂಗಳೂರಿನ ಕದ್ರಿಯಲ್ಲಿ ಸೆಲೂನ್‌ಗೆ ನುಗ್ಗಿ ಮಹಿಳೆಗೆ ಕಿರುಕುಳ ನೀಡಿ, ಹಲ್ಲೆ ನಡೆಸಿ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಮಂಗಳೂರಿನ ಅತ್ತಾವರ ನಿವಾಸಿ ಅಬ್ದುಲ್ ದಾವೂದ್, ಬಂಧಿತ ವ್ಯಕ್ತಿ. ಈತ ಯೂನಿಸೆಕ್ಸ್ ಸೆಲೂನ್‌ಗೆ ನುಗ್ಗಿ ಯುವತಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾನೆ. ಕದ್ರಿಯ ಯುನಿಸೆಕ್ಸ್ ಸೆಲೂನ್‌ನಲ್ಲಿ ಜುಲೈ 1 ರಂದು ಈ ಘಟನೆ ನಡೆದಿತ್ತು. ಯುವತಿಯ ಮೈಗೆ ಕೈ ಹಾಕಿ ಕಿರುಕುಳ ನೀಡಿದ್ದ ದಾವೂದ್ ಆಕೆಗೆ ಹಲ್ಲೆ

ಲೀಫ್ ಆರ್ಟ್‌ನಲ್ಲಿ ಮೂಡಿದ ಯೋಗಿ ಮಚ್ಚೇಂದ್ರನಾಥರು

ಕದ್ರಿ ಮಂಜುನಾಥ ಹಾಗೂ ಮಂಗಳಾದೇವಿ ದೇಗುಲದ ಸ್ಥಾಪನೆಗೆ ಮೂಲ ಕಾರಣಿಕರ್ತರು ಈ ಮಹಾನ್ ಯೋಗಿ ಗುರು ಮಚ್ಚೇಂದ್ರನಾಥರು. ಇವರ ಕಾಲ್ಪನಿಕ ಭಾವ ಚಿತ್ರವನ್ನು ಲೀಫ್ ಆರ್ಟ್ ಮುಖಾಂತರ ಯುವ ಕಲಾವಿದ ತಿಲಕ್ ಕುಲಾಲ್ ಮೂಡುಬಿದರೆ ಅವರು ಚಿತ್ರಿಸಿದ್ದಾರೆ. ಅವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಕದ್ರಿ ವಾರ್ಡ್‍ನ ಜನತೆಗೆ ಆಹಾರದ ಸಾಮಾಗ್ರಿ ವಿತರಣೆ

ಕದ್ರಿ ವಾರ್ಡಿನ ಕಾರ್ಪೋರೇಟರ್ ಆದ ಕದ್ರಿ ಮನೋಹರ್ ಶೆಟ್ಟಿ ಇವರ ವಿನಂತಿಯ ಮೇರೆಗೆ ಕದ್ರಿ ದಕ್ಷಿಣ 33ನೇ ವಾರ್ಡಿನಲ್ಲಿ ಕೊರೊನಾ ಸಮಯದಲ್ಲಿ ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯವಾಗಲೆಂದು ಆಹಾರದ ಕಿಟ್‍ಗಳನ್ನು ಒದಗಿಸಿದರು. ಉದ್ಯಮಿ ಗಣೇಶ್ ಶಿರ್ವ ದುಬಾಯಿ ಇವರ ಸಹಕಾರದೊಂದಿಗೆ ಜೊತೆಯಾಗಿ ಕದ್ರಿ ವಾರ್ಡಿನ ತರಕಾರಿ ವ್ಯಾಪಾರಸ್ಥರಾದ ಸುದೀರ್ ಕದ್ರಿ ಮಾರ್ಕೆಟ್ ಹಾಗೂ ಸುನಿಲ್ ಕೊಟ್ಟಾರಿ ಇವರು ತರಕಾರಿಯ ಕಿಟ್‍ಗಳನ್ನು ಒದಗಿಸಿದರು. ಈ ಸಂದರ್ಭದಲ್ಲಿ ವಾರ್ಡಿನ