Home Posts tagged #kambala

ಹೊಕ್ಕಾಡಿಗೋಳಿ : ವೀರ-ವಿಕ್ರಮ ಜೋಡುಕರೆ ಕಂಬಳಕ್ಕೆ ಚಾಲನೆ

ಮೂಡುಬಿದಿರೆ: ಶ್ರೀ ಮಹಿಷಮರ್ಧಿನಿ ಕಂಬಳ ಸಮಿತಿ ಹೊಕ್ಕಾಡಿಗೋಳಿ ಇದರ ವತಿಯಿಂದ ನಡೆಯುವ ಶ್ರೀ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವನ್ನು ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣರಾದ ಕೃಷ್ಣ ಪ್ರಸಾದ್ ಆಚಾರ್ಯ ಅವರು ಕಂಬಳದ ಕರೆಗೆ ಪ್ರಸಾದ್ ಅರ್ಪಿಸಿ, ದೀಪ ಬೆಳಗಿಸುವ ಮೂಲಕ ಚಾಲನೆಯನ್ನು ನೀಡಿದರು.ನಂತರ ಮಾತನಾಡಿದ ಅವರು ಈ ಹಿಂದೆ ನಡೆಯುತ್ತಿದ್ದ ಕಂಬಳಗಳ ಸಂದರ್ಭದಲ್ಲಿ

ಮೂಡುಬಿದಿರೆ : ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸ್ಪಂದಿಸಿದ ನೇತಾಜಿ ಬ್ರಿಗೇಡ್

ಮೂಡುಬಿದಿರೆ : ನೇತಾಜಿ ಬ್ರಿಗೇಡ್ ಮೂಡುಬಿದಿರೆ ವತಿಯಿಂದ ಮೂಡುಬಿದಿರೆಯ “ಕೋಟಿ – ಚೆನ್ನಯ್ಯ” ಜೋಡುಕರೆ ಕಂಬಳದಲ್ಲಿ ನಡೆದ 14ನೇ ಸೇವಾ ಯೋಜನೆಯಲ್ಲಿ ಸಂಗ್ರಹವಾದ ರೂ.1,34,894 ಧನವನ್ನು ಆಯ್ದ 5 ಮಂದಿ  ಫಲಾನುಭವಿಗಳಿಗೆ  ಸ್ವರಾಜ್ಯ ಮೈದಾನದ ಬಳಿ ಇರುವ ಶ್ರೀ ಆದಿಶಕ್ತಿ ಮಹಾಮ್ಮಾಯಿ ದೇವಸ್ಥಾನ ಮಾರಿಗುಡಿ ಬಳಿ ಹಸ್ತಾಂತರಿಸಲಾಯಿತು. ಕಣ್ಣಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಕಿನ್ನಿಗೋಳಿ ತಾಳಿಪಾಡಿಯ 6 ತಿಂಗಳ ಮಗು ಪೂಜಿತಾ ಶೆಟ್ಟಿಗಾರ್,  ಗಾಂಧಿ

ಬೆಂಗಳೂರು ಕಂಬಳದಲ್ಲಿ ಕಾಂತಾರ ಕೋಣಕ್ಕೆ ಚಿನ್ನದ ಪದಕ

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳು ಚಿನ್ನದ ಪದಕಕ್ಕೆ ಭಾಜನವಾಗಿದೆ. ಬೆಂಗಳೂರು ಕಂಬಳದಲ್ಲಿ ಬೈಂದೂರಿನ ಕೋಣ ಪ್ರಥಮ ಚಿನ್ನ ಗೆದ್ದ ಕೋಣ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದೆ. ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು. ಈ ಕುರಿತು ಕೋಣಗಳ ಮಾಲೀಕರು

ನ. 25 ಮತ್ತು 26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ತುಳುನಾಡಿನ ಕಂಬಳ

ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ನವೆಂಬರ್ 25 ಮತ್ತು 26ರಂದು ನಡೆಯಲಿರುವ ಕಂಬಳ ಕ್ರೀಡೆಗಾಗಿ ಕೋಣಗಳನ್ನು ಅದ್ದೂರಿ ಮೆರವಣಿಗೆ ಮೂಲಕ ಕರೆದೊಯ್ಯುವ ಕಾರ್ಯಕ್ರಮ ಉಪ್ಪಿನಂಗಡಿಯಿಂದ ಇಂದು ಆರಂಭಗೊಂಡಿದೆ. ಉಪ್ಪಿನಂಗಡಿಯ ಜೂನಿಯರ್ ಕಾಲೇಜು ಮೈದಾನದಿಂದ ನಿರ್ಗಮನ ಕಾರ್ಯಕ್ರಮ ನಡೆಯಿತು. ಸುಮಾರು 150 ಜೋಡಿ ಕೋಣಗಳನ್ನು ಕರಾವಳಿಯ ನಾನಾ ಭಾಗಗಳಿಂದ ಉಪ್ಪಿನಂಗಡಿಗೆ ಕರೆತಂದು ಇಲ್ಲಿಂದ ಲಾರಿಗಳಲ್ಲಿ ಬೆಂಗಳೂರಿಗೆ ಕೊಂಡೊಯ್ಯಲಾಯಿತು. ಪ್ರತೀ ಜೋಡಿ ಕೋಣಕ್ಕೆ ಒಂದು ಲಾರಿಯನ್ನು

ಬೆಂಗಳೂರು: ಕಂಬಳ, ಆಹ್ವಾನ ಪತ್ರಿಕೆಯಿಂದ ಬ್ರಿಜ್ ಭೂಷಣ್‍ನ್ನು ಕೈಬಿಟ್ಟ ಸಂಘಟಕರು

`ಬೆಂಗಳೂರು ಕಂಬಳ’ದಲ್ಲಿ ಭಾರತ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‍ಭೂಷಣ್ ಶರಣ್ ಸಿಂಗ್ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಂಘಟಕರು ಅವರ ಹೆಸರನ್ನು ಆಹ್ವಾನ ಪತ್ರಿಕೆಯಿಂದ ಕೈಬಿಟ್ಟಿದ್ದಾರೆ. ನ.25 ಮತ್ತು 26ರಂದು ಕಂಬಳ ನಡೆಯಲಿದ್ದು, 25ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕುಸ್ತಿಪಟುಗಳನ್ನು ಬ್ರಿಜ್‍ಭೂಷಣ್ ಸನ್ಮಾನಿಸಬೇಕಿತ್ತು. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಅವರ

ಮೂಡುಬಿದಿರೆ: ಕಂಬಳ ಸಮಾಲೋಚನಾ ಸಭೆ, ಸಾಧಕರಿಗೆ ಸನ್ಮಾನ

ಮೂಡುಬಿದಿರೆ : ಜಿಲ್ಲಾ ಕಂಬಳ ಸಮಿತಿಯ ವತಿಯಿಂದ ಮೂಡುಬಿದಿರೆಯ ಕಡಲಕೆರೆ ಬಳಿಯಿರುವ ಸೃಷ್ಠಿ ಗಾರ್ಡನ್‍ನಲ್ಲಿ ಕಂಬಳದ ಈ ಋತುವಿನ ಸಮಾಲೋಚನಾ ಸಭೆ ನಡೆಯಿತು. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೋಣದ ಯಜಮಾನರುಗಳಿಗೆ, ವ್ಯವಸ್ಥಾಪಕರಿಗೆ ಹಾಗೂ ತೀರ್ಪುಗಾರರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ನಂತರ ಮಾತನಾಡಿದ ಡಾ.ದೇವಿಪ್ರಸಾದ್ ಶೆಟ್ಟಿ

ದ.ಕ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರಾಗಿ ಡಾ.ಬೆಳಪು ದೇವಿಪ್ರಸಾದ್ ಶೆಟ್ಟಿ

ಮೂಡುಬಿದಿರೆ: ಅವಿಭಜಿತ ದ.ಕ ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಡಾ.ಬೆಳಪು ದೇವಿಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಗುಣಪಾಲ ಕಡಂಬ, ಪ್ರಧಾನ ಕಾರ್ಯದರ್ಶಿಯಾಗಿ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಒಂಟಿಕಟ್ಟೆಯ ಸೃಷ್ಠಿ ಗಾರ್ಡನ್‍ನ ಸಭಾಭವನದಲ್ಲಿ ನಿರ್ಗಮಿತ ಅಧ್ಯಕ್ಷ ಏರ್ಮಾಳ್ ರೋಹಿತ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ

ಮೂಡುಬಿದಿರೆ: ಕುದಿ ಕಂಬಳಕ್ಕೆ ಚಾಲನೆ

ಮೂಡುಬಿದಿರೆ: 2023-24ನೇ ಸಾಲಿನ ಕಂಬಳ ಸೀಸನ್ ನ ಪೂರ್ವಭಾವಿಯಾಗಿ ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆಯಲ್ಲಿ ಕುದಿ ಕಂಬಳ ಆರಂಭಗೊಂಡಿತು. ಉದ್ಯಮಿ, ಕೋಣಗಳ ಯಜಮಾನ ರಂಜಿತ್ ಪೂಜಾರಿ ಕರೆಯಲ್ಲಿ ದೀಪ ಬೆಳಗಿಸುವ ಮೂಲಕ ಕುದಿ ಕಂಬಳಕ್ಕೆ ಚಾಲನೆಯನ್ನು ನೀಡಿದರು. ಜಿಲ್ಲಾ ಕಂಬಳ ಸಮಿತಿಯ ಕಾರ್ಯದರ್ಶಿ ಸುರೇಶ್ ಕೆ.ಪೂಜಾರಿ ರೆಂಜಾಳ ಕಾರ್ಯ, ಪುರಸಭಾ ನಿರ್ಗಮನ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಬೆಳುವಾಯಿ ಗ್ರಾ.ಪಂ.ಸದಸ್ಯ ರಘು, ಕಂಬಳದ ಕೋಣಗಳ ಯಜಮಾನರುಗಳಾದ

ಕಂಬಳಕ್ಕೆ ಸುಪ್ರಿಂಕೋರ್ಟ್ ಮಾನ್ಯತೆ – ಮೇ 18 ಕಂಬಳಕ್ಕೆ ಐತಿಹಾಸಿಕ ದಿನ

ಮೂಡುಬಿದಿರೆ: ಕರಾವಳಿಯ ಜಾನಪದ ಕ್ರೀಡೆ ಕಂಬಳ. ರಾಜ್ಯದಲ್ಲಿ ಪ್ರಾಣಿ ಹಿಂಸಾ ತಡೆ ಕಾಯ್ದೆಗೆ ತಿದ್ದುಪಡಿ ತಂದು ಕರಾವಳಿ ಕರ್ನಾಟಕದಲ್ಲಿ ನಡೆಯುವ ಕಂಬಳಕ್ಕೆ ಮಾನ್ಯತೆ ನೀಡಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪ್ರಾಣಿ ದಯಾ ಸಂಘಗಳು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಗ್ರೀನ್ ಸಿಗ್ನಲ್ ನೀಡಿರುವುದಕ್ಕೆ ಕಂಬಳ ಸಮಿತಿ ಸಂತಸ ವ್ಯಕ್ತಪಡಿಸಿದ್ದು, ಈ ದಿನ ಕಂಬಳ ಕ್ಷೇತ್ರದಲ್ಲಿ ಐತಿಹಾಸಿಕ ದಿನ ಎಂದು ಕಂಬಳ ಸಮಿತಿ ಬಣ್ಣಿಸಿದೆ. ಈ ಬಗ್ಗೆ ಜಿಲ್ಲಾ ಕಂಬಳ ಸಮಿತಿಯ

ಪಣಪಿಲ ಜಯ -ವಿಜಯ ಜೋಡುಕರೆ ಕಂಬಳ ಸಂಪನ್ನ

ಮೂಡುಬಿದಿರೆ: “ಜಯ-ವಿಜಯ” ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ವತಿಯಿಂದ ನಡೆಯದ ಹದಿಮೂರನೇ ವರುಷದ ಕಿರಿಯ ವಿಭಾಗದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಭಾನುವಾರ ಸಂಜೆ ಸಂಪನ್ನಗೊಂಡಿತು. ಫಲಿತಾಂಶ : ಹಗ್ಗ ಕಿರಿಯ ವಿಭಾಗದಲ್ಲಿ 20ಜತೆ ಕೋಣಗಳು ಭಾಗವಹಿಸಿದ್ದು ಕಲ್ಯಾ ಹಾಳೆಕಟ್ಟೆ ನಿತೀಶ್ ಭವಿಷ್ಯ ದೇವಾಡಿಗ ಅವರ ಕೋಣಗಳು ಪ್ರಥಮ ( ಓಡಿಸಿದವರು: ಕಾವೂರು ದೋಟ ಸುದರ್ಶನ್), ಕೆಲ್ಲಪುತ್ತಿಗೆ ಪ್ರವೀಣ್ ಕುಮಾರ್ ದ್ವಿತೀಯ ( ಕೋಣ ಓಡಿಸಿದವರು: