Home Posts tagged #karvara

ಕಾರವಾರ: ದನಗಳನ್ನು ಬೇಟೆಯಾಡುತ್ತಿದ್ದ ಹುಲಿ ಬೋನಿಗೆ

ಕಾರವಾರ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಂದ್ರಾಳಿ ಮೊಳೆ ಊರುಗಳಲ್ಲಿ ಸಾಕು ದನಗಳ ಬೇಟೆ ಆಡುತ್ತಿದ್ದ ಹುಲಿಯನ್ನು ಗುಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಕಳೆದ 15 ದಿನಗಳಿಂದ ಹುಲಿಯೊಂದು ರೈತರ ದನದ ಕೊಟ್ಟಿಗೆಗೆ ಬಂದು ರಾತ್ರಿ ವೇಳೆ ದನಗಳನ್ನು ಕೊಂದು ಹೊತ್ತೊಯ್ಯುತ್ತಿತ್ತು. ಇಲ್ಲವೇ ತಿಂದು ಅರೆಜೀವ ಮಾಡಿ ಹೋಗುತ್ತಿತ್ತು.