ಕಾಪುವಿನ ಉದ್ಯಾವರದಲ್ಲಿ ತೆರೆದ ಬಾವಿಗೆ ಬಿದ್ದ ದನವನ್ನು ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.ಉದ್ಯಾವರದ ಕೆಮ್ ತೂರು ಶಾರದಾ ಭಜನಾ ಮಂಡಳಿಯ ಸಮೀಪ ತೆರೆದ ಬಾವಿಗೆ ಈ ದನ ಬಿದ್ದಿತ್ತು.ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.ಸ್ಥಳಕ್ಕೆ ಧಾವಿಸಿ ಬಂದ ಉಡುಪಿ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿ,ಬಾವಿಗೆ ಹಗ್ಗ ಇಳಿಸಿ ಉಪಾಯದಿಂದ
ಮದುವೆಯಾಗಿ ಐದು ದಶಕಗಳ ಕಾಲ ಜೊತೆಯಾಗಿ ಬಾಳಿ ಸಿಹಿ ಕಹಿ, ನೋವು ನಲಿವು ಸವಾಲುಗಳನ್ನು ಎದುರಿಸಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕಾಪುವಿನ ಬೆಳಪುವಿನಲ್ಲಿ ನಡೆದಿದೆ. ಬೆಳಪು ಗ್ರಾಮದ ಧೂಮಪ್ಪ ಶೆಟ್ಟಿ ಮನೆ ಕೃಷ್ಣ ಯಾನೆ ಕುಟ್ಟಿ ಶೆಟ್ಟಿ (80) ಮತ್ತು ಅವರ ಪತ್ನಿ ಮುಂಡ್ಕೂರು ಅಂಗಡಿಗುತ್ತು ರೇವತಿ ಕೆ. ಶೆಟ್ಟಿ (75) ಸಾವಿನಲ್ಲೂ ಒಂದಾದ ದಂಪತಿ.ಕೃಷ್ಣ ಯಾನೆ ಕುಟ್ಟಿ ಶೆಟ್ಟಿ ಅವರು ವಯೋ ಸಹಜ ಕಾರಣಗಳಿಂದಾಗಿ ಮಂಗಳವಾರ ಮುಂಜಾನೆ ಮೃತಪಟ್ಟಿದ್ದು ಮಕ್ಕಳು
ಕಾಪು ಸಮೀಪದ ಮಜೂರಿನ ಗೋವರ್ಧನ ಭಟ್ ಅವರು ಜೀವಂತ ನಾಗರ ಹಾವಿಗೆ ತನು ಎರೆದು,ಆರತಿ ಬೆಳಗಿಸಿ ಮಂಗಳವಾರ ನಾಗರಪಂಚಮಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಪ್ರತೀ ವರ್ಷ ನಾಗರ ಪಂಚಮಿಯಂದು ತನ್ನ ಮನೆಯಲ್ಲಿ ಶುಶ್ರೂಷೆಯಲ್ಲಿರುವ ನಾಗರ ಹಾವುಗಳಿಗೆ ತನು ಎರೆಯುವ ಗೋವರ್ಧನ ಭಟ್ ಅವರು ಈ ಬಾರಿ ಒಂದು ಹಾವಿಗೆ ಮನೆಯವರ ಜೊತೆಗೂಡಿ ತನು ಎರೆದು, ಪೂಜೆ ಮಾಡಿ, ನಾಗರ ಪಂಚಮಿ ಆಚರಿಸಿದರು. ಕಾಪು ಪರಿಸದಲ್ಲಿ ಅಪಾಯಕ್ಕೆ ಸಿಲುಕಿ ಗಾಯಗೊಳ್ಳುವ ನಾಗರ ಹಾವುಗಳನ್ನು ಮನೆಗೆ
ಮೀನುಗಾರಿಕೆ ತೆರಳಿದ್ದ ನಾಡದೋಣಿಯ ಇಂಜಿನ್ ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ಬಂಡೆಗೆ ಬಡಿದು ದೋಣಿ ಮುಗುಚಿ ಬಿದ್ದು, ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಉಡುಪಿ ಜಿಲ್ಲೆಯ ಕಾಪು ಲೈಟ್ ಹೌಸ್ ಬಳಿ ನಡೆದಿದೆ. ಇಂದು ಬೆಳಗ್ಗೆ ಐದು ಮಂದಿ ಮೀನುಗಾರರು, ನಾಡದೋಣಿಯಲ್ಲಿ ಕಾಪುವಿನಿಂದ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿ ದೋಣಿಯ ಇಂಜಿನ್ ತಾಂತ್ರಿಕ ದೋಷ ಉಂಟಾಗಿ, ಕಾಪು ಲೈಟ್ ಹೌಸ್ ತಲುಪುತ್ತಿದ್ದಂತೆ, ಬಂಡೆಗೆ ಬಡಿದಿದೆ. ಈ ವೇಳೆ ದೋಣಿ ಮಗುಚಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಬೆಲೆ ಏರಿಕೆ ಹಾಗೂ ಜಿಎಸ್ಟಿ ನೀತಿಯ ವಿರುದ್ಧ ಕಾಪುಪೇಟೆಯಲ್ಲಿ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಪ್ರತಿಭಟನಾ ಸಭೆ ನೆರವೇರಿತು. ಎಸ್ಡಿಪಿಐ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹನೀಫ್ ಮೂಳೂರು ಮಾತನಾಡಿ, ಕೇಂದ್ರದ ತೆರಿಗೆ ನೀತಿಯಿಂದ ಬಡವರು ತಿನ್ನುವ ಅನ್ನದ ಬಟ್ಟಲಿಗೆ ಟ್ಯಾಕ್ಸ್ ಹಾಕಿದ್ದಾರೆ. ಹಾಲು, ಮಜ್ಜಿಗೆ, ಮೊಸರಿಗೆ ಜಿಎಸ್ಟಿ ಹಾಕಿ ಜನರನ್ನು ಬದುಕದಂತೆ
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಂಡ ಬಿದ್ದ ಪರಿಣಾಮ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇದೆ. ಇಂದು ಹೊಂಡ ತಪ್ಪಿಸಲು ಹೋಗಿ ಕಾರೊಂದು ಡಿವೈಡರ್ ಏರಿ ನಿಂತ ಘಟನೆ ಕಾಪುವಿನಲ್ಲಿ ನಡೆದಿದೆ. ಕಾರೊಂದು ರಸ್ತೆಯ ಹೊಂಡಕ್ಕೆ ಬಿದ್ದು, ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಕಾರು ಚಾಲಕಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಮೇಲಿದ್ದ ಹೊಂಡದಲ್ಲಿ ನೀರು ತುಂಬಿ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿದೆ.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುದರಂಗಡಿ ಪ. ಪೂ. ಕಾಲೇಜಿನಲ್ಲಿ ಪತ್ರಿಕಾ ಮಾಹಿತಿ ಕಾರ್ಯಗಾರ ನೆರವೇರಿತು.ಪತ್ರಿಕಾ ಕಾರ್ಯಗಾರವನ್ನು ಸಂಪನ್ಮೂಲ ವ್ಯಕ್ತಿ ಉಡುಪಿ ಎಂಜಿಎಂ ಕಾಲೇಜು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರಾಗ ಬೇಕಾದವರು ಪ್ರಮುಖವಾಗಿ ಯಾವುದೇ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸ ಬೇಕಾಗಿರುವುದು ಅತ್ಯಗತ್ಯವಾಗಿದೆ. ವೃತ್ತಿ ಬದುಕಿನಲ್ಲಿ ಪತ್ರಕರ್ತರಿಗಿರುವಷ್ಟು ಹೊಸತನ,